ತೋತಾಪುರಿ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ 
ಸಿನಿಮಾ ಸುದ್ದಿ

ತೋತಾಪುರಿ ಸಿನಿಮಾ ಗಂಭೀರ ವಿಷಯವಾಗಿದ್ದು ಸೂಕ್ಷ್ಮವಾಗಿ ಕಥೆಯನ್ನು ಹೆಣೆಯಲಾಗಿದೆ: ನಟಿ ಅದಿತಿ ಪ್ರಭುದೇವ

'ಸಣ್ಣ ಪರದೆಯಿಂದ  ಬೆಳ್ಳಿ ಪರದೆಗೆ ಕೆಲಸ ಮಾಡಲು ಮುಂದಾಗುವಾಗ, ನಾನು ವಿಭಿನ್ನ ಪಾತ್ರಗಳನ್ನು ಮಾಡಲು ಬಯಸಿದ್ದೆ ಮತ್ತು ಸುದೀರ್ಘ ಕಾಯುವಿಕೆಯ ನಂತರ ವಿಜಯ ಪ್ರಸಾದ್ ಅವರ ನಿರ್ದೇಶನದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ' ಎಂದು ಹೇಳುತ್ತಾರೆ ನಟಿ ಅದಿತಿ ಪ್ರಭುದೇವ.

ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಅದಿತಿ ಪ್ರಭುದೇವ ಕೂಡ ಪ್ರಮುಖರು. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿಯ ಮುಂದಿನ ಸಿನಿಮಾ ತೋತಾಪುರಿ ಬಿಡುಗಡೆಗೆ ಸಿದ್ಧವಾಗಿದೆ. ಶುಕ್ರವಾರದಂದು (ಸೆ.30) ಸಿನಿಮಾ ಬಿಡುಗಡೆಯಾಗಲಿದೆ.

'ಸಣ್ಣ ಪರದೆಯಿಂದ  ಬೆಳ್ಳಿ ಪರದೆಗೆ ಕೆಲಸ ಮಾಡಲು ಮುಂದಾಗುವಾಗ, ನಾನು ವಿಭಿನ್ನ ಪಾತ್ರಗಳನ್ನು ಮಾಡಲು ಬಯಸಿದ್ದೆ ಮತ್ತು ಸುದೀರ್ಘ ಕಾಯುವಿಕೆಯ ನಂತರ ವಿಜಯ ಪ್ರಸಾದ್ ಅವರ ನಿರ್ದೇಶನದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ' ಎಂದು ಹೇಳುತ್ತಾರೆ ನಟಿ ಅದಿತಿ ಪ್ರಭುದೇವ.

'ನಿರ್ದೇಶಕರು ನನ್ನನ್ನು ಆಡಿಷನ್‌ಗೆ ಕರೆದಿದ್ದರು. ಅವರು ಕಥೆಯನ್ನು ಅಥವಾ ನನ್ನ ಪಾತ್ರದ ಬಗ್ಗೆ ಸಂಕ್ಷಿಪ್ತವಾಗಿ ಏನನ್ನು ಹೇಳಲಿಲ್ಲ. ಮೊದಲಿಗೆ ಟೆಸ್ಟ್ ಶೂಟ್ ಮಾಡಿ ನಾನು ಪಾತ್ರಕ್ಕೆ ಹೊಂದಿಕೊಳ್ಳಬಹುದೇ ಎಂದು ಪರೀಕ್ಷಿಸಲು ಅವರು ಬಯಸಿದ್ದರು. ಅದೃಷ್ಟವಶಾತ್, ನಾನು ಆಯ್ಕೆಯಾದೆ ಮತ್ತು ನಂತರವೇ ನನಗೆ ಕಥೆ ಮತ್ತು ನನ್ನ ಪಾತ್ರದ ಬಗ್ಗೆ ವಿವರಿಸಲಾಯಿತು. ನಂತರ, ಮುಸ್ಲಿಂ ಹುಡುಗಿಯ ಪಾತ್ರವನ್ನು ನಿರ್ವಹಿಸುವ ಹ್ಯಾಂಗೋವರ್ ಪಡೆಯಲು ನನಗೆ ಒಂದು ವಾರ ಸಮಯ ನೀಡಿದರು' ಎನ್ನುತ್ತಾರೆ.

'ನಾವು ಯಾವ ಧರ್ಮಕ್ಕೆ ಸೇರಿದವರು, ಯಾವ ಆಚಾರಗಳನ್ನು ಅನುಸರಿಸುತ್ತೇವೆ ಮತ್ತು ಆಚರಿಸುತ್ತೇವೆ ಎಂಬುದು ಏನೇ ಆಗಿದ್ದರೂ, ಮೊದಲಿಗೆ ನಾವು ಕೇವಲ ಮನುಷ್ಯರು ಮತ್ತು ನಮ್ಮೊಳಗೆ ಇರುವ ಮಾನವೀಯತೆ ನಮ್ಮನ್ನು ಒಂದುಗೂಡಿಸುತ್ತದೆ. ನಾವು ಮಾಡುವ ಒಳ್ಳೆಯದು ಮತ್ತು ಕೆಟ್ಟದ್ದು ಧರ್ಮದ ಆಧಾರದ ಮೇಲೆ ನಿರ್ಧಾರವಾಗುವುದಿಲ್ಲ; ಶಾಂತಿಯುತ ಸಹಬಾಳ್ವೆ ಎಲ್ಲಕ್ಕಿಂತ ಮೇಲಿದೆ' ಎಂದು ಅವರು ತಿಳಿಸಿದರು.

'ಇದೊಂದು ಗಂಭೀರವಾದ ವಿಷಯವನ್ನು ಒಳಗೊಂಡಿದ್ದರೂ, ಹಾಸ್ಯ ಮತ್ತು ಪ್ರೀತಿಯ ಅಂಶಗಳೊಂದಿಗೆ ಸೂಕ್ಷ್ಮವಾಗಿ ಹೆಣೆಯಲಾಗಿದೆ. ಇದೊಂದು ಕಮರ್ಷಿಯಲ್ ಎಂಟರ್‌ಟ್ರೈನರ್ ಆಗಿದ್ದು, ಉತ್ತಮ ಸಂದೇಶವಿದೆ. ನಟ ಜಗ್ಗೇಶ್, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ ಅವರ ಪಾತ್ರಗಳಲ್ಲಿ ಹಾಸ್ಯ ಮತ್ತು ಗಂಭೀರ ದೃಶ್ಯಗಳು ಸಮತೋಲನವಾಗಿದ್ದು, ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸಲಾಗಿದೆ. ತೋತಾಪುರಿ ಎನ್ನುವುದು ಒಂದು ನೆಚ್ಚಿನ ಹಣ್ಣು, ಇದು ಸಿಹಿ, ಹುಳಿ ಮತ್ತು ಕಹಿ ರುಚಿಯನ್ನು ಹೊಂದಿರುತ್ತದೆ. ಇದಕ್ಕೆ ಉಪ್ಪು ಮತ್ತು ಖಾರ ಸೇರಿಸಿ ಸೇವಿಸಲಾಗುತ್ತದೆ. ಇದುವೇ ನಿರ್ದೇಶಕ ವಿಜಯ ಪ್ರಸಾದ್ ಅವರ ಕಥೆಯ ಸಾರ' ಎಂದು ಅವರು ಹೇಳುತ್ತಾರೆ.

ತೋತಾಪುರಿ ಮಾವಿನಲ್ಲಿ ಪರಿಣಿತಿ ಹೊಂದಿರುವ ಮಾವಿನ ಹಣ್ಣಿನ ವ್ಯಾಪಾರ ನಡೆಸುತ್ತಿರುವ ದೊಡ್ಡ ಕುಟುಂಬದಲ್ಲಿನ ಮುಸ್ಲಿಂ ಯುವತಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುತ್ತೇನೆ. ಇದು ಆಕರ್ಷಕ ಶೀರ್ಷಿಕೆಯಾಗಿದ್ದು, ಚಿತ್ರಕ್ಕೆ ಮೌಲ್ಯವನ್ನು ತುಂಬುತ್ತದೆ. ವಿಜಯ ಪ್ರಸಾದ್ ಅವರೊಂದು ಅದ್ಭುತ ಆತ್ಮ. ನಟರು ಮತ್ತು ಕಿರಿಯ ಕಲಾವಿದರನ್ನು ಸಮಾನವಾಗಿ ಕಾಣುತ್ತಾರೆ. ಸ್ಥಳೀಯ ಭಾಷೆಯ ಬಗ್ಗೆ ತಿಳಿವಳಿಕೆ ಹೊಂದಿರುವ ಕೆಲವೇ ಕೆಲವು ನಿರ್ದೇಶಕರಲ್ಲಿ ಅವರು ಒಬ್ಬರು ಎಂದು ಹೇಳುತ್ತಾರೆ.

'ಚಿತ್ರಗಳಲ್ಲಿ ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರುವ ಚಲನಚಿತ್ರ ನಿರ್ದೇಶಕರಾಗಿ ಕಾಣಿಸಿಕೊಂಡರೂ, ಸೆಟ್‌ಗಳಲ್ಲಿ ಅವರು ತುಂಬಾ ಗಂಭೀರ ಮತ್ತು ಪ್ರಬುದ್ಧರಾಗಿರುತ್ತಾರೆ. ಅವರ ಚಿತ್ರಗಳು ಗುಣಮಟ್ಟದ ಮನರಂಜನೆ ಮತ್ತು ಸಾಮಾಜಿಕ ಸಂದೇಶವನ್ನು ಸಾರುತ್ತವೆ. ಜಗ್ಗೇಶ್ ಅವರಂತಹ ಹಿರಿಯ ನಟರೊಂದಿಗೆ ಕೆಲಸ ಮಾಡುವುದು ನನ್ನ ವೃತ್ತಿಜೀವನಕ್ಕೆ ಸಿಕ್ಕ ಅಮೂಲ್ಯ ಕೊಡುಗೆ' ಎಂದು ಅವರು ಮಾತು ಮುಗಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT