ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

ಕಿಚ್ಚನ ಕಡೆಯಿಂದ ಅಭಿಮಾನಿಗಳಿಗೆ ಬಿಗ್ ಸಪ್ರೈಸ್: ಒಂದಲ್ಲ, ಎರಡಲ್ಲ, ಮೂರು ಸಿನಿಮಾಗಳನ್ನು ಒಪ್ಪಿಕೊಂಡ ಸುದೀಪ್

ವಿಕ್ರಾಂತ್ ರೋಣ ನಂತರ ಕಿಚ್ಚ ಸುದೀಪ್ ಅವರ 46ನೇ ಚಿತ್ರ ಯಾವುದು, ಯಾಕೆ ನೆಚ್ಚಿನ ನಟ ಅಪ್ ಡೇಟ್ ಕೊಡುತ್ತಿಲ್ಲ ಎಂದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅದಕ್ಕೀಗ ಸ್ವತಃ ಅಭಿನಯ ಚಕ್ರವರ್ತಿ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಸ್ವತಃ ಕಿಚ್ಚ ಸುದೀಪ್ ಉತ್ತರ ನೀಡಿದ್ದಾರೆ.

ಬೆಂಗಳೂರು: ವಿಕ್ರಾಂತ್ ರೋಣ ನಂತರ ಕಿಚ್ಚ ಸುದೀಪ್ ಅವರ 46ನೇ ಚಿತ್ರ ಯಾವುದು, ಯಾಕೆ ನೆಚ್ಚಿನ ನಟ ಅಪ್ ಡೇಟ್ ಕೊಡುತ್ತಿಲ್ಲ ಎಂದು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅದಕ್ಕೀಗ ಸ್ವತಃ ಅಭಿನಯ ಚಕ್ರವರ್ತಿ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಸ್ವತಃ ಕಿಚ್ಚ ಸುದೀಪ್ ಉತ್ತರ ನೀಡಿದ್ದಾರೆ.

ಫ್ಯಾನ್ಸ್ ಗೆ ಇಂದು ಬಿಗ್ ಸಪ್ರೈಸ್ ಕೂಡ ನೀಡಿದ್ದಾರೆ. ಒಂದಲ್ಲ, ಎರಡಲ್ಲ ಮೂರು ಚಿತ್ರಗಳನ್ನು ಸುದೀಪ್ ಅವರು ಅಂತಿಮಗೊಳಿಸಿರುವುದಾಗಿ ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಹೀಗೆ ಬರೆದುಕೊಂಡಿದ್ದಾರೆ. 

‘ನನ್ನೆಲ್ಲಾ ಸ್ನೇಹಿತರಿಗೆ ನಮಸ್ಕಾರ...
‘ಕಿಚ್ಚ 46’ ಕುರಿತಾಗಿ ನಿಮ್ಮ ಟ್ವೀಟ್‌ಗಳು ಮತ್ತು ಮೀಮ್‌ಗಳು ನನಗೆ ಅರ್ಥವಾಗಿದೆ. ಧನ್ಯವಾದಗಳು. ಈಗ ಇದೇ ವಿಚಾರದ ಕುರಿತಾಗಿ ಈ ಸಣ್ಣ ಸ್ಪಷ್ಟೀಕರಣವನ್ನು ನೀಡಲು ನಿರ್ಧರಿಸಿದ್ದೇನೆ’

‘ನಾನು ವಿರಾಮ ತೆಗೆದುಕೊಂಡಿದ್ದೆ. ಇದು ನನ್ನ ವೃತ್ತಿಜೀವನದ ಮೊಟ್ಟಮೊದಲ ವಿರಾಮ. ‘ವಿಕ್ರಾಂತ್ ರೋಣ’ ಚಿತ್ರದ ನಂತರ ನನಗೆ ಬ್ರೇಕ್ ಬೇಕಾಗಿತ್ತು. ಕೋವಿಡ್ ಮತ್ತು ಸುದೀರ್ಘವಾದ ವೇಳಾಪಟ್ಟಿ ಹೊಂದಿದ್ದ ಬಿಗ್ ಬಾಸ್ (OTT ಹಾಗೂ ಟಿವಿ) ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಭಾಗಿಯಾಗುವುದು ಶ್ರಮದಾಯಕವಾಗಿತ್ತು. ಆದ್ದರಿಂದ ಈ ವಿರಾಮ ನನಗೆ ಅಗತ್ಯವಿತ್ತು. ನನ್ನ ವಿರಾಮವನ್ನು ಆನಂದಿಸಲು ಉತ್ತಮ ಮಾರ್ಗವೆಂದರೆ ನನಗೆ ಸಂತೋಷ ನೀಡುವ ಕೆಲಸವನ್ನು ಮಾಡುವುದು’

ಕ್ರಿಕೆಟ್ ಖಂಡಿತವಾಗಿಯೂ ನನಗೆ ವಿಶ್ರಾಂತಿ ನೀಡುವ ಕ್ರೀಡೆ. ಅಲ್ಲಿ ನನಗೆ ಸಂತೋಷ ಸಿಗುತ್ತದೆ. ಕೆಸಿಸಿ ಮತ್ತು ಕೆಬಿ ಜೊತೆಗೆ ಸಮಯ ಕಳೆದಿದ್ದು ನನಗೆ ಖುಷಿ ನೀಡಿದೆ. ಇದರಿಂದ ನನಗೆ ಖಂಡಿತವಾಗಿಯೂ ಉತ್ತಮ ವಿರಾಮ ಸಿಕ್ಕಿದೆ.

ಈ ಮಧ್ಯೆ, ಸ್ಕ್ರಿಪ್ಟ್ ಕೇಳುವುದು ನಡೆಯುತ್ತಲೇ ಇತ್ತು. ಮೂರು ಸ್ಕ್ರಿಪ್ಟ್‌ಗಳನ್ನು ಅಂತಿಮಗೊಳಿಸಿದ್ದೇನೆ… ಅಂದರೆ ಮೂರು ಚಿತ್ರಗಳನ್ನು ಅಂತಿಮಗೊಳಿಸಲಾಗಿದೆ. ಎಲ್ಲಾ ಮೂರು ಸ್ಕ್ರಿಪ್ಟ್‌ಗಳಿಗೆ ಭಾರೀ ಪ್ರಮಾಣದ ಹೋಮ್‌ ವರ್ಕ್‌ನ ಬೇಡಿಕೆಯಿರುವುದರಿಂದ ಸಿದ್ಧತೆಗಳು ನಡೆಯುತ್ತಿವೆ. ಆಯಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ. ಶೀಘ್ರದಲ್ಲೇ ಅಧಿಕೃತವಾಗಿ ಅನೌನ್ಸ್ ಮಾಡ್ತಾರೆ. ಪ್ರೀತಿ ಹಾಗು ಅಪ್ಪುಗೆಗಳೊಂದಿಗೆ ನಿಮ್ಮ ಕಿಚ್ಚ’’ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT