ಅಂಕಿತಾ ಅಮರ್ 
ಸಿನಿಮಾ ಸುದ್ದಿ

'ರಂಗುರಗಳೆ' ಚಿತ್ರತಂಡ ಸೇರಿದ ಅಂಕಿತಾ ಅಮರ್

ಡ್ಯಾನ್ಸರ್, ಸಿಂಗರ್, ಆ್ಯಂಕರ್ ಹಾಗೂ ಕಿರುತೆರೆ ನಟಿಯಾಗಿ ಜನಪ್ರಿಯತೆ ಗಳಿಸಿರುವ ನಟಿ ಅಂಕಿತಾ ಅಮರ್ ಅವರು, ಈಗಾಗಲೇ ಹಲವು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದು, ಹೊಸದಾಗಿ ರಂಗುರಗಳೆ ಎಂಬ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಡ್ಯಾನ್ಸರ್, ಸಿಂಗರ್, ಆ್ಯಂಕರ್ ಹಾಗೂ ಕಿರುತೆರೆ ನಟಿಯಾಗಿ ಜನಪ್ರಿಯತೆ ಗಳಿಸಿರುವ ನಟಿ ಅಂಕಿತಾ ಅಮರ್ ಅವರು, ಈಗಾಗಲೇ ಹಲವು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದು, ಹೊಸದಾಗಿ ರಂಗುರಗಳೆ ಎಂಬ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ತಮ್ಮ ಚೊಚ್ಚಲ ಚಿತ್ರ ಅಬ ಜಬ ದಬ ಬಿಡುಗಡೆಗೂ ಮುನ್ನವೇ ಅಂಕಿತಾ ಅವರು, ಚಂದ್ರಜಿತ್ ಬೆಳ್ಳಿಯಪ್ಪ ಅವರ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಏತನ್ಮಧ್ಯೆ, ತಮ್ಮ ಮುಂದಿನ ಚಿತ್ರ ರಂಗುರಗಳೆ ಶೀರ್ಷಿಕೆಯ ಚಿತ್ರಕ್ಕೂ ಸಹಿ ಹಾಕಿದ್ದಾರೆ.

ರಂಗುರಗಳೆ ಚಿತ್ರದ ನಿರ್ಮಾಪಕ ಜ್ಯಾಕ್‌ ಅವರಿಗೆ ಇದು ಚೊಚ್ಚಲ ಚಿತ್ರವಾಗಿದ್ದು, ಚಿತ್ರದಲ್ಲಿ ‘ಲವ್ ಮಾಕ್ಟೇಲ್’ ಖ್ಯಾತಿಯ ಅಭಿಲಾಷ್ ದಳಪತಿ, ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ಅಭಿದಾಸ್ ಹಾಗೂ ‘ಮೆಟ್ರೋ ಸಾಗಾ’ ಮೂಲಕ ಗಮನಸೆಳೆದಿರುವ ಸುಘೋಷ್ ನಾಯಕರಾಗಿ ನಟಿಸುತ್ತಿದ್ದಾರೆ.

ಮುಹೂರ್ತದ ನಡೆಸುವ ಮೂಲಕ ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರಕ್ಕೆ ಚಾಲನೆ ನೀಡಿದ್ದು, ಚುನಾವಣೆ ಪೂರ್ಣಗೊಂಡ ಬಳಿಕ ಮೇ ತಿಂಗಲಿನಲ್ಲಿ ಚಿತ್ರ ಸೆಟ್ಟೇರುವ ನಿರೀಕ್ಷೆಗಳಿವೆ.

ಶ್ರೀ ವಿಷಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಶಶಿಕಲಾ ಉಮೇಶ್ ನಿರ್ಮಿಸಿರುವ ರಂಗು ರಗಳೆ ಚಿತ್ರದಲ್ಲಿ ರವಿಶಂಕರ್ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿದ್ದಾರೆ.

ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸಾಗರ್ ಎಂಬಿ ಸಂಕಲನವಿದ್ದು, ಶೇಖರ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌ ; ₹40 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದ ಮಧ್ಯವರ್ತಿ, BJP ಮುಖಂಡನ ಬಂಧನ!

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೋಗಿನಲ್ಲಿ ಪ್ರಭಾವ ಬೀರಲು ಯತ್ನ: ಸುಖೇಶ್ ಚಂದ್ರಶೇಖರ್‌ಗೆ 8 ವರ್ಷ ಕಠಿಣ ಜೈಲು ಶಿಕ್ಷೆ

ಮರ ಬಿದ್ದು ತುಂಡಾಗಿ ವೃದ್ದನ ಮೇಲೆ ಬಿದ್ದ ಹೈಟೆನ್ಷನ್ ವೈರ್, ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದ ಜೀವ ರಕ್ಷಣೆ, Video Viral

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?