ಕ್ಲಾಂತ ಸಿನಿಮಾ ಪೋಸ್ಟರ್ 
ಸಿನಿಮಾ ಸುದ್ದಿ

'ಕ್ಲಾಂತ' ಸಿನಿಮಾ ಮೂಲಕ ಚಿತ್ರರಂಗಕ್ಕೆ ನಟಿ ಸಂಗೀತಾ ಭಟ್ ಕಮ್‌ಬ್ಯಾಕ್

ರಂಗನ್ ಸ್ಟೈಲ್ ಸಿನಿಮಾ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ವೈಭವ್ ಪ್ರಶಾಂತ್ ಅವರು ತಮ್ಮ ನಾಲ್ಕನೇ ಚಿತ್ರಕ್ಕೆ 'ಕ್ಲಾಂತ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. 'ಇದು ಸಂದೇಶವನ್ನು ಹೊಂದಿರುವ ಯೂತ್‌ಫುಲ್ ಚಿತ್ರವಾಗಿದ್ದು, ಪೋಷಕರಿಗೆ ಸತ್ಯವನ್ನು ಹೇಳುವುದು ಮತ್ತು ತಪ್ಪು ದಾರಿಯಲ್ಲಿ ಹೋಗಬಾರದು ಎಂಬ ಸರಳ ವಿಷಯಗಳ ಸುತ್ತ ಸುತ್ತುತ್ತದೆ' ಎನ್ನುತ್ತಾರೆ ನಿರ್ದೇಶಕರು.

ರಂಗನ್ ಸ್ಟೈಲ್ ಸಿನಿಮಾ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ವೈಭವ್ ಪ್ರಶಾಂತ್ ಅವರು ತಮ್ಮ ನಾಲ್ಕನೇ ಚಿತ್ರಕ್ಕೆ 'ಕ್ಲಾಂತ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. 'ಇದು ಸಂದೇಶವನ್ನು ಹೊಂದಿರುವ ಯೂತ್‌ಫುಲ್ ಚಿತ್ರವಾಗಿದ್ದು, ಪೋಷಕರಿಗೆ ಸತ್ಯವನ್ನು ಹೇಳುವುದು ಮತ್ತು ತಪ್ಪು ದಾರಿಯಲ್ಲಿ ಹೋಗಬಾರದು ಎಂಬ ಸರಳ ವಿಷಯಗಳ ಸುತ್ತ ಸುತ್ತುತ್ತದೆ' ಎನ್ನುತ್ತಾರೆ ನಿರ್ದೇಶಕರು.

ಕ್ಲಾಂತ ಸಿನಿಮಾ ಮೂಲಕ ನಟಿ ಸಂಗೀತಾ ಭಟ್ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. 'ನನ್ನದು ಹದಿಹರೆಯದ ಹುಡುಗಿಯ ಪಾತ್ರ, ಆಕೆ ಕಾಲೇಜು ಮುಗಿಸಿ ಉದ್ಯೋಗಕ್ಕೆ ಸೇರುತ್ತಾಳೆ. ಹೆಚ್ಚಿನ ಭಾಗಗಳನ್ನು ಕಾಡಿನಲ್ಲಿ ಚಿತ್ರೀಕರಿಸಿದ ಕಾರಣ ಇದು ವಿಶಿಷ್ಟ ಅನುಭವವಾಗಿದೆ. ಈ ಪಾತ್ರಕ್ಕಾಗಿ ನಾನು ಕಟ್ಟುನಿಟ್ಟಾದ ಫಿಟ್‌ನೆಸ್‌ಗೆ ಒಳಗಾಗಬೇಕಾಯಿತು' ಎಂದು ಹೇಳುತ್ತಾರೆ ಸಂಗೀತಾ.

ಕ್ಲಾಂತವನ್ನು ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿಸಲಾಗಿದೆ. ಚಿತ್ರದಲ್ಲಿ ವಿಘ್ನೇಶ್ ನಾಯಕನಾಗಿ ನಟಿಸಿದ್ದಾರೆ ಮತ್ತು ಶೋಭರಾಜ್, ವೀಣಾ ಸುಂದರ್, ದೀಪಿಕಾ, ಪ್ರವೀಣ್ ಜೈನ್, ಯುವ ಮತ್ತು ಸ್ವಪ್ನಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಉದಯ್ ಅಮ್ಮನ್ಯ ಅವರ ಬೆಂಬಲ ಚಿತ್ರಕ್ಕಿದೆ. ಕ್ಲಾಂತಗೆ ಎಪಿ ಚಂದ್ರಕಾಂತ್ ಅವರ ಸಂಗೀತ, ಮೋಹನ್ ಲೋಕನಾಥನ್ ಅವರ ಛಾಯಾಗ್ರಹಣ ಮತ್ತು ಪಿಆರ್ ಸೌಂದರ್ ರಾಜ್ ಅವರ ಸಂಕಲನವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT