ನಿರೂಪ್ ಭಂಡಾರಿ 
ಸಿನಿಮಾ ಸುದ್ದಿ

'ಲೀಡರ್ ರಾಮಯ್ಯ' ಬಯೋಪಿಕ್‌ನಲ್ಲಿ 'ಯಂಗ್' ಸಿದ್ದರಾಮಯ್ಯ ಪಾತ್ರಕ್ಕೆ ನಿರೂಪ್ ಭಂಡಾರಿ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಚರಿತ್ರೆ ಕುರಿತು ಸಿನಿಮಾ ಆಗುತ್ತಿರುವ ಬಗ್ಗೆ ನಾವು ಇತ್ತೀಚೆಗೆ ವರದಿ ಮಾಡಿದ್ದೇವು, ಈ ಸಿನಿಮಾವನ್ನು ಸತ್ಯರತ್ನಂ ನಿರ್ದೇಶಿಸಲಿದ್ದಾರೆ ಮತ್ತು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಚರಿತ್ರೆ ಕುರಿತು ಸಿನಿಮಾ ಆಗುತ್ತಿರುವ ಬಗ್ಗೆ ನಾವು ಇತ್ತೀಚೆಗೆ ವರದಿ ಮಾಡಿದ್ದೇವು, ಈ ಸಿನಿಮಾವನ್ನು ಸತ್ಯರತ್ನಂ ನಿರ್ದೇಶಿಸಲಿದ್ದಾರೆ ಮತ್ತು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗುವುದು.

ಲೀಡರ್ ರಾಮಯ್ಯ ಎಂಬ ಶೀರ್ಷಿಕೆಯಡಿ, ಎರಡನೇ ಭಾಗದಲ್ಲಿ ವಿಜಯ್ ಸೇತುಪತಿ ನಿರ್ಣಾಯಕ ಪಾತ್ರ ನಿರ್ವಹಿಸಲು ತಯಾರಕರು ಉತ್ಸುಕರಾಗಿದ್ದಾರೆ . ಸಿನಿಮಾ ತಂಡ ವಿಜಯ್ ಸೇತುಪತಿ ಅವರು ಡೇಟ್ಸ್ ಗಾಗಿ ಕಾಯುತ್ತಿದ್ದಾರೆ.

ನಿರ್ದೇಶಕರು ನಾಯಕ ಪಾತ್ರವನ್ನು ಅಂತಿಮಗೊಳಿಸುವ ಕೆಲಸ ಮಾಡುತ್ತಿದ್ದಾರೆ, ಇದೇ ವೇಳೆ, ಸಿದ್ದರಾಮಯ್ಯನವರ ಕಿರಿಯ ಆವೃತ್ತಿಯಲ್ಲಿ ರಂಗಿತರಂಗ ಸಿನಿಮಾ ನಾಯಕ ನಿರೂಪ್ ಭಂಡಾರಿ  ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ.  ಈ ಸಂಬಂಧ ನಿರೂಪ್ ಭಂಡಾರಿ ಅವರೊಂದಿಗೆ ಆರಂಭಿಕ ಚರ್ಚೆ ನಡೆದಿದ್ದು, ಈ ಸಂಬಂಧ ಮತ್ತಷ್ಟು ಮಾಹಿತಿ ಶೀಘ್ರವೇ ಹೊರಬೀಳುವ ಸಾಧ್ಯತೆಯಿದೆ.

ಈ ಬಯೋಪಿಕ್‌ಗೆ ಶಶಾಂಕ್ ಶೇಷಗಿರಿ ಅವರ ಸಂಗೀತ ಮತ್ತು ಉದಯ್ ಲೀಲಾ ಅವರ ಛಾಯಾಗ್ರಹಣವಿದೆ. ಈ ತಿಂಗಳು ಶೂಟಿಂಗ್ ಪ್ರಾರಂಭವಾಗಲಿದ್ದು, ಲೀಡರ್ ರಾಮಯ್ಯ ಚಿತ್ರದ ಉಳಿದ ಪಾತ್ರಗಳ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.

ಸುದೀಪ್ ಅಭಿನಯದ ಅನುಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಿರೂಪ್ ಭಂಡಾರಿ ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರ ಮುಂಬರುವ ಚಿತ್ರದ ಭಾಗವಾಗಿದ್ದಾರೆ, ಇದು ಸದ್ಯ ಚಿತ್ರೀಕರಣದ ಹಂತದಲ್ಲಿದೆ. ತಂಡವು ಈಗಾಗಲೇ ಚಿತ್ರೀಕರಣವನ್ನು ಪ್ರಾರಂಭಿಸಿದೆ ಮತ್ತು ಬೆಂಗಳೂರಿನಲ್ಲಿ ಕೆಲವು ಭಾಗಗಳಲ್ಲಿ ಶೂಟಿಂಗ್ ಪೂರ್ಣಗೊಳಿಸಿದ್ದು, ಮುಂದೆ ಯುಎಸ್ಎಗೆ ಹೋಗುವ ಯೋಜನೆ ಇದೆ. ಇದರ ಜೊತೆಗೆ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಮತ್ತು ಪೃಥ್ವಿ ಅಂಬಾರ್ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT