ನಟ ಮೋಹನ್ 
ಸಿನಿಮಾ ಸುದ್ದಿ

ಮದುರೈ: ತಮಿಳು ಹಾಸ್ಯ ನಟ ನಿಧನ; ಬೀದಿಯಲ್ಲಿ ಶವವಾಗಿ ಪತ್ತೆ!

80-90ರ ದಶಕದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದ ಖ್ಯಾತ ಹಾಸ್ಯ ನಟ ಮೋಹನ್‌ (60 ವರ್ಷ) ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ ತಮಿಳುನಾಡಿನ ಮದುರೈನ ತಿರುಪರಂಕುಂದ್ರಂನ ಬೀದಿಯಲ್ಲಿ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ಮಧುರೈ: 1980-90ರ ದಶಕದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದ ಖ್ಯಾತ ಹಾಸ್ಯ ನಟ ಮೋಹನ್‌ (60 ವರ್ಷ) ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ ತಮಿಳುನಾಡಿನ ಮದುರೈನ ತಿರುಪರಂಕುಂದ್ರಂನ ಬೀದಿಯಲ್ಲಿ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ವರದಿಗಳ ಪ್ರಕಾರ, 60 ವರ್ಷದ ನಟ ಮೋಹನ್ ಅವರು ತೀವ್ರ ಬಡತನಕ್ಕೆ ತುತ್ತಾಗಿದ್ದರು ಹಾಗೂ ಕೆಲಸ ಗಿಟ್ಟಿಸಲು ತೀವ್ರ ಒದ್ದಾಟ ಪಡುತ್ತಿದ್ದರು ಎಂದು ಹೇಳಲಾಗಿದೆ. ಅವರ ಪತ್ನಿಯು 10 ವರ್ಷಗಳ ಹಿಂದೆಯೇ ನಿಧನರಾಗಿದ್ದರು.

ಕಮಲ್‌ ಹಾಸನ್‌ ನಟನೆಯ ಸೂಪರ್‌ ಹಿಟ್‌ ಸಿನಿಮಾ ತಮಿಳಿನ ಅಪೂರ್ವ ಸಹೋದರ್‌ ಗಳ್‌ ಹಾಗೂ ನಾನ್‌ ಕಡವುಳ್ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ಮೋಹನ್‌ ನಟಿಸಿದ್ದರು. ಆದರೆ ಇತ್ತೀಚೆಗೆ ಅವರಿಗೆ ಅವಕಾಶಗಳ ಕೊರತೆಯಿಂದಾಗಿ ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು. ಅಷ್ಟೇ ಅಲ್ಲ ನಟ ಮೋಹನ್‌ ತಿರುಪರಂಕುಂದ್ರಂನ ದೇವಸ್ಥಾನದ ಸಮೀಪ ಭಿಕ್ಷೆ ಬೇಡಿ ಜೀವನ ಕಳೆಯುತ್ತಿದ್ದರು ಎಂದು ವರದಿ ವಿವರಿಸಿದೆ.

‘ಆದಿಷ್ಯ ಮನಿದಿರ್ಗಳ್’ ಹಾಗೂ ಬಾಲಾ ನಿರ್ದೇಶನದ, ಆರ್ಯ ನಾಯಕತ್ವದ ‘ನಾನ್ ಕಡುವುಳ್’ ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ, ಅವರು ತಮಗೆ ನಟಿಸಲು ಯಾವುದೇ ಅವಕಾಶ ದೊರೆಯದೆ ಹೋಗಿದ್ದರಿಂದ, ತಮ್ಮ ತವರು ನಗರವನ್ನು ತೊರೆದು ಕೆಲವು ವರ್ಷಗಳ ಹಿಂದೆ ತಿರುಪರಂಕುಂದ್ರಂ ಗೆ ವಾಸ್ತವ್ಯ ಬದಲಿಸಿದ್ದರು.

ಅವರು ಹಣದ ಕೊರತೆಯಿಂದ ಮುಖ್ಯ ರಥಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದರು ಎಂದು ಹೇಳಲಾಗಿದೆ. ಜುಲೈ 31ರಂದು ಅವರು ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿರುವ ಸ್ಥಳೀಯರು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಟ ಮೋಹನ್ ಗುರುತು ಸಿಗದಷ್ಟೂ ಕೊಳಕಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ವರದಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT