'ಘೋಸ್ಟ್' ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ ಅಭಿನಯದ 'ಘೋಸ್ಟ್' ಚಿತ್ರೀಕರಣ ಮುಕ್ತಾಯ, ದಸರಾಗೆ ರಿಲೀಸ್

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಮತ್ತು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಘೋಸ್ಟ್' ಚಿತ್ರೀಕರಣವನ್ನು ಮಂಗಳವಾರ ಪೂರ್ಣಗೊಳಿಸಿದ್ದು, ದಸರಾಗೆ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಶ್ರೀನಿ ಅವರು...

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಮತ್ತು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಘೋಸ್ಟ್' ಚಿತ್ರೀಕರಣವನ್ನು ಮಂಗಳವಾರ ಪೂರ್ಣಗೊಳಿಸಿದ್ದು, ದಸರಾಗೆ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಶ್ರೀನಿ ಅವರು ಹೇಳಿದ್ದಾರೆ.

'ಘೋಸ್ಟ್' ಚಿತ್ರದ ಚಿತ್ರೀಕರಣ ಮುಗಿಸಿದ ಶ್ರೀನಿ, ತಮ್ಮ ಮುಂದಿನ ಥ್ರಿಲ್ಲರ್ ಸಿನಿಮಾ ಬೀರ್​ಬಲ್ 2 ನ ಕೆಲವು ಭಾಗಗಳನ್ನು ಸಹ ಚಿತ್ರೀಕರಿಸಿದ್ದಾರೆ. ಅಲ್ಲದೇ ಘೋಸ್ಟ್ ಚಿತ್ರದಲ್ಲಿ ಬೀರ್​ಬಲ್​ ಚಿತ್ರದ ಪಾರ್ಟ್​-2 ಹಿಂಟ್ ಕೂಡ ಬಿಟ್ಟುಕೊಡಲಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಬೀರ್​ಬಲ್ ಸೀಕ್ವೆಲ್‌ನ ಸೆಟ್‌ಗಳಿಂದ ಫಸ್ಟ್ ಲುಕ್ ಅನ್ನು ಹಂಚಿಕೊಂಡ ತಯಾರಕರು, ಮೇಕಿಂಗ್‌ನಲ್ಲಿ ಸಿನಿಮಾದ ಮಲ್ಟಿವರ್ಸ್‌ನ ಬಗ್ಗೆ ಸುಳಿವು ನೀಡಿದ್ದಾರೆ. ಚಿತ್ರದಲ್ಲಿ ಹಾಲಿವುಡ್​​ನ ಸಿನಿಮ್ಯಾಟಿಕ್ ಯುನಿವರ್ಸ್​ ಟೆಕ್ನಿಕ್ ಬಳಸುತ್ತಿದ್ದಾರೆ. ಬಾಲಿವುಡ್​ ಮಂದಿಗೆ ಈ ಒಂದು ಟೆಕ್ನಿಕ್​ ಹೊಸದೇನೂ ಅಲ್ಲ. ಆದರೆ ಕನ್ನಡಿಗರಿಗೆ ಈ ಮೂಲಕ ಹೊಸದೊಂದು ವಿಷಯ ತಿಳಿಸಲು ಶ್ರೀನಿ ಮುಂದಾಗಿದ್ದಾರೆ.

ನಾನು ಘೋಸ್ಟ್ ಚಿತ್ರವನ್ನು ಬೀರ್​ಬಲ್ ನ ಸೀಕ್ವೆಲ್‌ನೊಂದಿಗೆ ಲಿಂಕ್ ಮಾಡುತ್ತಿದ್ದೇನೆ. ಅದು ಪ್ರತಿಯಾಗಿ, ಘೋಸ್ಟ್ 2 ನೊಂದಿಗೆ ನಂಟು ಹೊಂದಿರಲಿದೆ. ಹಾಗಾಗಿ, ಮಂಗಳವಾರ, ನಾನು ಘೋಸ್ಟ್‌ಗಾಗಿ ಬಾಕಿ ಉಳಿದಿರುವ ಪ್ಯಾಚ್‌ವರ್ಕ್‌ನೊಂದಿಗೆ ಸಂಪೂರ್ಣ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ. ಬೀರ್​ಬಲ್ ಸೀಕ್ವೆಲ್‌ಗಾಗಿ ನಾನು ಕೆಲವು ಶಾಟ್‌ಗಳನ್ನು ಸಹ ಚಿತ್ರೀಕರಿಸಿದ್ದೇನೆ ಎಂದು ಶ್ರೀನಿ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT