ರಾಚೆಲ್ ಡೇವಿಡ್ 
ಸಿನಿಮಾ ಸುದ್ದಿ

ಹಿಂದಿನ ಚಿತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದದ್ದನ್ನು ಮಾಡುವ ಗುರಿ ಹೊಂದಿದ್ದೇನೆ: ರಾಚೆಲ್ ಡೇವಿಡ್

ಮಲಯಾಳಂ ಮತ್ತು ಕನ್ನಡ ಸಿನಿಮಾರಂಗದಲ್ಲಿ ಹಗ್ಗಜಗ್ಗಾಟ ನಡೆಸುತ್ತಿರುವ ನಟಿ ರಾಚೆಲ್ ಡೇವಿಡ್, ಲವ್ ಮಾಕ್‌ಟೇಲ್ 2 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಇದೀಗ ಕನ್ನಡ ಚಿತ್ರಗಳ ಅವಕಾಶ ಸಿಗುತ್ತಿರುವುದಕ್ಕೆ ಅವರು ಸಂತೋಷವಾಗಿದ್ದಾರೆ. 

ಮಲಯಾಳಂ ಮತ್ತು ಕನ್ನಡ ಸಿನಿಮಾರಂಗದಲ್ಲಿ ಹಗ್ಗಜಗ್ಗಾಟ ನಡೆಸುತ್ತಿರುವ ನಟಿ ರಾಚೆಲ್ ಡೇವಿಡ್, ಲವ್ ಮಾಕ್‌ಟೇಲ್ 2 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಇದೀಗ ಕನ್ನಡ ಚಿತ್ರಗಳ ಅವಕಾಶ ಸಿಗುತ್ತಿರುವುದಕ್ಕೆ ಅವರು ಸಂತೋಷವಾಗಿದ್ದಾರೆ. ಅವರ ಮುಂಬರುವ ಚಿತ್ರಗಳಲ್ಲಿ ಒಂದಾದ ಚೆಫ್ ಚಿದಂಬರ ಕೂಡ ಒಂದು. ಈ ಚಿತ್ರವನ್ನು ಆನಂದ್ ರಾಜ್ ನಿರ್ದೇಶಿಸಿದ್ದು, ನಟ ಅನಿರುದ್ಧ್ ಜಟ್ಕರ್ ನಟಿಸಿದ್ದಾರೆ.

ಬಬ್ಲಿ ಪಾತ್ರ ಎಂದು ಬಿಂಬಿಸಲಾದ ಈ ಪಾತ್ರವನ್ನು ಒಪ್ಪಿಕೊಳ್ಳಲು ಮತ್ತು ಅನಿರುದ್ಧ್ ಅವರಂತಹ ಅನುಭವಿ ನಟರೊಂದಿಗೆ ತೆರೆ ಹಂಚಿಕೊಳ್ಳುವ ಬಗ್ಗೆ ಕೇಳಿದಾಗ ರಾಚೆಲ್, 'ಇದೇ ಪ್ರಶ್ನೆ ನನ್ನ ಮನಸ್ಸಲ್ಲೂ ಮೂಡಿತು ಮತ್ತು ನಾನು ಅದನ್ನು ನಿರ್ದೇಶಕ ಆನಂದ್ ರಾಜ್ ಅವರೊಂದಿಗೆ ಚರ್ಚಿಸಿದೆ. ಪರದೆ ಮೇಲೆ ವಯಸ್ಸಿನ ವ್ಯತ್ಯಾಸ ಮುಖ್ಯವೇ ಎಂದು ನಾನು ಕೇಳಿದೆ. ಅನಿರುದ್ಧ್ ಅವರನ್ನು ಈ ಹಿಂದೆಂದು ಭೇಟಿಯಾಗದ ಕಾರಣ ನನಗೂ ಸ್ವಲ್ಪ ಆತಂಕವಿತ್ತು. ಆದಾಗ್ಯೂ, ಆನಂದ್ ರಾಜ್ ಅವರು ಉತ್ತಮವಾಗಿ ತೋರಿಸುವುದಾಗಿ ಮತ್ತು ನಮ್ಮ ಜೋಡಿಯು ನಿಸ್ಸಂದೇಹವಾಗಿ ಸುಂದರವಾಗಿ ಮೂಡಿಬರುತ್ತದೆ ಎಂದು ನನಗೆ ಭರವಸೆ ನೀಡಿದರು ಎನ್ನುತ್ತಾರೆ.

'ಈಗಿನ ಕಾಲದಲ್ಲಿ, ತೆರೆಯ ಮೇಲೆ ಕಾಣಿಸಿಕೊಳ್ಳಲು ವಯಸ್ಸು ಅಡ್ಡಿಯಾಗಬಾರದು ಎಂದು ನಾನು ನಂಬುತ್ತೇನೆ. ನನಗೆ ಹೆಚ್ಚು ಮುಖ್ಯವಾದುದು ಕಂಟೆಂಟ್. ನನ್ನ ಹಿಂದಿನ ಚಿತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದುದನ್ನು ಮಾಡುವ ಗುರಿಯನ್ನು ಹೊಂದಿದ್ದೇನೆ. ನಾನು ಯಾವುದೇ ಹೊಸ ಅಥವಾ ಅನುಭವಿ ನಟರೊಂದಿಗೆ ಜೋಡಿಯಾಗಿದ್ದರೂ, ನನ್ನ ಪಾತ್ರಕ್ಕೆ ಎಷ್ಟು ಮೌಲ್ಯವಿದೆ ಎಂಬುದು ನನಗೆ ಮುಖ್ಯ ವಿಚಾರ. ಈ ಸಂದರ್ಭದಲ್ಲಿ, ನಾನು ಸಂಪೂರ್ಣವಾಗಿ ನಿರ್ದೇಶಕರ ಇಚ್ಛೆಯಂತೆ ಹೋಗಿದ್ದೇನೆ' ಎನ್ನುತ್ತಾರೆ ರಾಚೆಲ್.

ರಾಚೆಲ್ ಡೇವಿಡ್

ಚಿತ್ರತಂಡ ಇತ್ತೀಚೆಗಷ್ಟೇ ಅನಿರುದ್ಧ್ ಅವರನ್ನೊಳಗೊಂಡ ಫಸ್ಟ್‌ ಲುಕ್ ಅನ್ನು ಬಿಡುಗಡೆ ಮಾಡಿದೆ ಮತ್ತು ಆಗಸ್ಟ್ 10ರಂದು ಮುಹೂರ್ತ ಕಾರ್ಯಕ್ರಮದೊಂದಿಗೆ ಶೂಟಿಂಗ್ ಪ್ರಾರಂಭವಾಗಲಿದೆ. ಆಗಸ್ಟ್ 12ರಂದು ರಾಚೆಲ್ ಡೇವಿಡ್ ಸೆಟ್‌ಗೆ ಸೇರಲಿದ್ದಾರೆ. ಈ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಚೆಫ್ ಚಿದಂಬರ ಸಿನಿಮಾದೊಂದಿಗೆ ರಾಚೆಲ್ ಅವರು 'ಭುವನಂ ಗಗನಂ', 'ಅನ್‌ಲಾಕ್ ರಾಘವ' ಮತ್ತು ಮುಂಬರುವ ಯೋಜನೆಯಾದ 'ಕಂಟ್ರಿ ಪಿಸ್ತೂಲ್‌' ಸಿನಿಮಾದ ಭಾಗವಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT