ಸಿನಿಮಾ ಸುದ್ದಿ

ಆಗಸ್ಟ್ 25ಕ್ಕೆ ಟೋಬಿ ರಿಲೀಸ್, ಹೊಸ ಮುಖಗಳ ಪರಿಚಯದೊಂದಿಗೆ ವಿಭಿನ್ನತೆಗೆ ಪ್ರೋತ್ಸಾಹ: ರಾಜ್ ಬಿ ಶೆಟ್ಟಿ

Nagaraja AB

ರಾಜ್ ಬಿ ಶೆಟ್ಟಿ ಅವರ ಚಿತ್ರಗಳಲ್ಲಿ ಹಿರಿಯ ಕಲಾವಿದರು ಹಾಗೂ ಉದಯೋನ್ಮುಖ ಪ್ರತಿಭೆಗಳ ಮಿಶ್ರಣವನ್ನು ಯಾವಾಗಲೂ ನೋಡಬಹುದು. ಈ  ಸಂಪ್ರದಾಯವು ಮತ್ತೊಮ್ಮೆ ಅವರ ಮುಂಬರುವ 'ಟೋಬಿ'ಯಲ್ಲಿ ಸ್ಪಷ್ಟವಾಗಿದೆ.

ರಾಜ್ ಬಿ ಶೆಟ್ಟಿ, ಚೈತ್ರಾ ಆಚಾರ್, ಸಂಯುಕ್ತ ಹೊರನಾಡು ಮತ್ತು ಗೋಪಾಲ್ ಕೃಷ್ಣ ದೇಶಪಾಂಡೆ ಒಳಗೊಂಡಿರುವ ಈ ಚಿತ್ರದಲ್ಲಿ ಭರತ್ ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ, ಯತೀಶ್ ಕಾನ್‌ಸ್ಟೆಬಲ್ ಆಗಿ, ಯೋಗಿ ಬಂಕೇಶ್ವರ್ ತಂದೆಯ ಪಾತ್ರದಲ್ಲಿ ಮತ್ತು ಸಂಧ್ಯಾ ಅರಿಕೆರೆ ನೆರೆಹೊರೆಯ ಮಹಿಳೆಯಾಗಿ ನಟಿಸಿದ್ದಾರೆ. ಆಗಸ್ಟ್ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಟ್ರೇಲರ್‌ನೊಂದಿಗೆ ಗಮನ ಸೆಳೆದ ಕೆಲ ಹೊಸ ಮುಖಗಳಿವು.

ಹೊಸಬರನ್ನು ಪರಿಚಯಿಸುವ ಈ ವಿಧಾನ, ಕಥೆಯಲ್ಲಿ  ಹೊಸತನವನ್ನು ತುಂಬುತ್ತದೆ. ಇದು ಉದ್ಯಮದ ವೈವಿಧ್ಯತೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ರಾಜ್ ಬಿ ಶೆಟ್ಟಿ ಪ್ರತಿಪಾದಿಸುತ್ತಾರೆ. 'ಒಂದು ಮೊಟ್ಟೆಯ ಕಥೆಯಲ್ಲಿ' ನಾವು ಪರಿಚಯಿಸಿದ ಪ್ರಕಾಶ್ ತೂಮಿನಾಡ್, ಶನಿಲ್ ಗುರು ಮತ್ತು ಇತರ ಕಲಾವಿದರು ತೆರೆಯಲ್ಲಿ ವಿಶಿಷ್ಠತೆ ತಂದಿದ್ದಾರೆ. ಹೊಸ ಮುಖಗಳನ್ನು ಪಾತ್ರಗಳಾಗಿ ಪರಿವರ್ತಿಸುವುದು ತುಂಬ ಪ್ರಯೋಜನಕಾರಿ ಎನ್ನುತ್ತಾರೆ. 

ಟೋಬಿಯೊಳಗೆ ಪೊಲೀಸ್ ಅಧಿಕಾರಿ ಮತ್ತು ಕಾನ್‌ಸ್ಟೆಬಲ್ ಪಾತ್ರಗಳನ್ನು ಕ್ರಮವಾಗಿ ಭರತ್ ಮತ್ತು ಯತೀಶ್ ನಿರ್ವಹಿಸಿದ್ದಾರೆ. ಅವರನ್ನು ಯಾರಾದರೂ ಪೊಲೀಸ್ ಮತ್ತು ಕಾನ್‌ಸ್ಟೆಬಲ್ ಎಂದು ನಂಬಬಹುದು ಆದರೆ, ವಿಭಿನ್ನವಾಗಿ ಕಾಣಿಸುತ್ತಾರೆ. ಅದೇ ರೀತಿ, ನೆರೆಹೊರೆಯವರ ಪಾತ್ರದಲ್ಲಿ ನಟಿಸಿರುವ ಸಂಧ್ಯಾ ಅರಿಕೆರೆ ಕಥೆಗೆ ಮತ್ತೊಂದು ಲೇಯರ್ ಆಗಿದೆ.  ಟೋಬಿಯಂತೆಯೇ ಅದೇ ಸಮುದಾಯ ಮತ್ತು ಸಾಮಾಜಿಕ ವಲಯದಲ್ಲಿ ಆಕೆಯ ಉಪಸ್ಥಿತಿಯು ಪಾತ್ರಕ್ಕೆ ತಕ್ಕದಂತಿದೆ. ರಂಗಭೂಮಿಯಲ್ಲಿ ವ್ಯಾಪಕ ಅನುಭವದೊಂದಿಗೆ, ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿಶೇಷವಾಗಿ ಅವರ ಪಾತ್ರಕ್ಕೆ ನೀಡಿರುವ ಪ್ರಭಾವಶಾಲಿ ಸಂಭಾಷಣೆಯ ಸಾಲುಗಳನ್ನು ರಾಜ್ ಬಿ ಶೆಟ್ಟಿ ಹಂಚಿಕೊಂಡರು.

ಸಹಜ ರೀತಿಯಲ್ಲಿ ಅಭಿನಯಿಸುವಂತೆ ಬಾಲ ಕಲಾವಿದೆ (ಸ್ನಿಗ್ಧಾ) ಅವರಿಗೆ ಹೇಳುವ ಮೂಲಕ ನೈಜ ರೀತಿಯಲ್ಲಿ ಪಾತ್ರ ಮೂಡಿಬರುವಂತೆ ಮಾಡಲಾಯಿತು ಎಂದು ಹೇಳಿದ ರಾಜ್ ಬಿ ಶೆಟ್ಟಿ, ಸಂಭಾಷಣಾ ಲಯವು ನಾಟಕೀಯ ಶೈಲಿಯೊಂದಿಗೆ ಹೊಂದಿಕೆಯಾಗುತ್ತದೆಯೇ ಅಥವಾ ಪಾತ್ರಕ್ಕೆ ಸರಿಹೊಂದುತ್ತದೆಯೇ ಅಥವಾ ಅವರು ಅದಕ್ಕೆ ಅನುಗುಣವಾಗಿ ಹೊಂದಿಕೊಳ್ಳುತ್ತಾರೆಯೇ ಎಂಬುದನ್ನು ನಿರೂಪಣೆಯ ಲಯದೊಂದಿಗೆ ಸಮನ್ವಯಗೊಳಿಸುವ ಸಾಮರ್ಥ್ಯವಿರುವ ವ್ಯಕ್ತಿಗಳನ್ನು ಆಯ್ಕೆ ಮಾಡುವುದಾಗಿ ಸ್ಪಷ್ಟಪಡಿಸಿದರು. 

ಲೈಟರ್ ಬುದ್ಧ ಫಿಲಂಸ್ ಮತ್ತು ಅಗಸ್ತ್ಯ ಫಿಲ್ಮ್ಸ್ ನಿರ್ಮಿಸಿರುವ ಟೋಬಿ, ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ವಿತರಣೆಗೆ ಸಿದ್ಧವಾಗಿದೆ. ಇದಕ್ಕೆ ಮಿಧುನ್ ಮುಕುಂದನ್ ಸಂಗೀತ ನೀಡಿದ್ದು, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಒದಗಿಸಿದ್ದಾರೆ. 

SCROLL FOR NEXT