ಸಿನಿಮಾ ಸುದ್ದಿ

ಪಿಆರ್​ಕೆ ಪ್ರೊಡಕ್ಷನ್ಸ್ ನಿರ್ಮಾಣದ ಆಚಾರ್ & ಕೋ. ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ

Ramyashree GN

ಆಚಾರ್ & ಕೋ. ಕನ್ನಡ ಸಿನಿಮಾ ಆಗಸ್ಟ್ 22ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಪ್ರೈಮ್ ವಿಡಿಯೋ ಈ ಸುದ್ದಿಯನ್ನು ಸೋಮವಾರವೇ ಪ್ರಕಟಿಸಿತ್ತು. ಸಿಂಧು ಶ್ರೀನಿವಾಸ ಮೂರ್ತಿ ಅವರು ಬರೆದು ನಿರ್ದೇಶಿಸಿದ್ದು, ಕಾನನ್ ಗಿಲ್ ಸಹ-ಕಥೆ ಬರೆದಿದ್ದಾರೆ. ಸಿನಿಮಾದಲ್ಲಿ ಸಿಂಧು ಶ್ರೀನಿವಾಸಮೂರ್ತಿ ಜೊತೆಗೆ ಅನಿರುದ್ಧ್ ಆಚಾರ್ಯ, ಹರ್ಷಿಲ್ ಕೌಶಿಕ್, ಸುಧಾ ಬೆಳವಾಡಿ ಮತ್ತು ಅಶೋಕ್ ನಟಿಸಿದ್ದಾರೆ.

ಈ ಸಿನಿಮಾ 1960ರ ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಮಧುಸೂಧನ್ ಆಚಾರ್ ಮತ್ತು ಅವರ ಪತ್ನಿ ಸಾವಿತ್ರಿ ಅವರ ಸಾಂಪ್ರದಾಯಿಕ ಕುಟುಂಬವು, ಕುಟುಂಬದ ಪರಂಪರೆಯೊಂದಿಗೆ ಆಧುನೀಕರಣದೊಂದಿಗೆ ಸೆಣಸಾಡುತ್ತಿರುವ ಜೀವನದ ಸುತ್ತ ಕೇಂದ್ರೀಕೃತವಾಗಿದೆ. ಆದರೆ, ಕುಟುಂಬದ ಮುಖ್ಯಸ್ಥ ಮಧುಸೂಧನ್ ಅವರು ಅನಿರೀಕ್ಷಿತವಾಗಿ ನಿಧನರಾದಾಗ, ಕುಟುಂಬವು ಹಠಾತ್ತನೆ ಬದಲಾಗುತ್ತಿರುವ ವಾಸ್ತವದೊಂದಿಗೆ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಅದು ಮನೆಯ ಎಲ್ಲಾ ಸದಸ್ಯರಿಗೂ ಮನೆಯ ಜವಾಬ್ದಾರಿಗಳನ್ನು ಹಂಚುತ್ತದೆ.

ವಿಕಸನಗೊಳ್ಳುತ್ತಿರುವ ಆಧುನಿಕತೆ ಮತ್ತು ಸಾಮಾಜಿಕ ಮಾನದಂಡಗಳ ಹಿನ್ನೆಲೆಯಲ್ಲಿ, ಆಚಾರ್ & ಕೋ. ದೊಡ್ಡ ಕುಟುಂಬವನ್ನು ಬೆಳೆಸುವ, ಅದರ ಯೋಗಕ್ಷೇಮವನ್ನು ನೋಡಿಕೊಳ್ಳುವ ಮತ್ತು ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವ ಸವಾಲುಗಳನ್ನು ಚಿತ್ರಿಸುತ್ತದೆ.

ಚಿತ್ರವು 1960ರ ಕಾಲಘಟ್ಟದಲ್ಲಿ ಸಾಗುವ ಕಥೆಯನ್ನು ಹೊಂದಿದ್ದರೂ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಮುಂತಾದ ವಿಚಾರಗಳ ಬಗ್ಗೆ ಸಿನಿಮಾ ಸೂಕ್ಷ್ಮವಾಗಿ ಹೇಳುತ್ತದೆ. ಅಂತಹ ಪಿಡುಗುಗಳನ್ನ ಎದುರಿಸಿ ಹೊರನಡೆಯುವ ಹೆಣ್ಣು ಮಗಳೊಬ್ಬಳ ಕಥೆ ಈ ಸಿನಿಮಾದಲ್ಲಿದೆ.

SCROLL FOR NEXT