ಜಯನಗರ ಬಿಎಂಟಿಸಿ ಡಿಪೋಗೆ ರಜನಿ ಭೇಟಿ 
ಸಿನಿಮಾ ಸುದ್ದಿ

ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರು ರೌಂಡ್ಸ್: ಜಯನಗರ ಬಿಎಂಟಿಸಿ ಡಿಪೋ, ಚಾಮರಾಜಪೇಟೆ ರಾಯರ ಮಠಕ್ಕೆ ಭೇಟಿ

ಜೈಲರ್ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಬೆಂಗಳೂರಿಗೆ ತಲೈವಾ ರಜನಿಕಾಂತ್ ಭೇಟಿ ನೀಡಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸಿದ್ದ ಜಯನಗರ ಡಿಪೋಗೆ ರಜನಿ ಅಚ್ಚರಿಯ ಭೇಟಿ ನೀಡಿದ್ದಾರೆ.

ಬೆಂಗಳೂರು: ಜೈಲರ್ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಬೆಂಗಳೂರಿಗೆ ತಲೈವಾ ರಜನಿಕಾಂತ್ ಭೇಟಿ ನೀಡಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸಿದ್ದ ಜಯನಗರ ಡಿಪೋಗೆ ರಜನಿ ಸರ್ಪ್ರೈಸ್ ವಿಸಿಟ್ ನೀಡಿದ್ದಾರೆ.

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್  ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಸಾಕಷ್ಟು ವರ್ಷಗಳ ಕಾಲ ರಜನಿಕಾಂತ್ ಬೆಂಗಳೂರಿನಲ್ಲೇ ನೆಲೆಸಿದ್ದರು. ಬೆಂಗಳೂರಿಗೂ ತಲೈವಾಗೂ ನಂಟಿದೆ. ಚಿತ್ರರಂಗಕ್ಕೆ ಬರುವ ಮುನ್ನ ಜಯನಗರದ ಡಿಪೋದಲ್ಲಿ ಕಂಡಕ್ಟರ್ ಆಗಿ ರಜನಿಕಾಂತ್ ಕಾರ್ಯ ನಿರ್ವಹಿಸಿದ್ದರು.

ತಾವು ಕರ್ತವ್ಯ ನಿರ್ವಹಿಸಿದ್ದ ಜಾಗಕ್ಕೆ ಸರ್ಪ್ರೈಸ್ ವಿಸಿಟ್ ನೀಡಿ, ಕಂಡಕ್ಟರ್- ಡ್ರೈವರ್ ಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸುಮಾರು ಹತ್ತು ನಿಮಿಷಗಳ ಕಾಲ ನಟ ಮಾತುಕತೆ ನಡೆಸಿದ್ದಾರೆ. ರಜನಿಕಾಂತ್ ಭೇಟಿಗೆ ಚಾಲಕರು ಶಾಕ್ ಆಗಿದ್ದಾರೆ.

ಬೆಂಗಳೂರಿನ ಜಯನಗರ ಡಿಪೋಗೆ ಭೇಟಿ ನೀಡಿ ಹಳೆಯ ನೆನಪನ್ನು ನಟ ಸ್ಮರಿಸಿದ್ದರು. ತಲೈವಾ ಭೇಟಿ ಜಯನಗರದ ಚಾಲಕರಲ್ಲಿ ಸಂಭ್ರಮ ಮನೆ ಮಾಡಿತ್ತು. ಚಾಮರಾಜಪೇಟೆಯ ರಾಯರ ಮಠಕ್ಕೂ ರಜನಿಕಾಂತ್‌ ಭೇಟಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ