ರಂಗಸಮುದ್ರ ತಂಡದೊಂದಿಗೆ ಎಂಎಂ ಕೀರವಾಣಿ 
ಸಿನಿಮಾ ಸುದ್ದಿ

ರಂಗಸಮುದ್ರದ ದೇಸಿ ಮೋಹನ್'ರ ಹೊಸ ಹಾಡಿಗೆ ಎಂಎಂ ಕೀರವಾಣಿ ಧ್ವನಿ

ರಂಗಸಮುದ್ರ ಸಿನಿಮಾ ಪದ್ಮಶ್ರೀ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಮಾಂತ್ರಿಕ ಎಂಎಂ ಕೀರವಾಣಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ತರುತ್ತಿದೆ. ಬಾಹುಬಲಿ, ಆರ್‌ಆರ್‌ಆರ್‌ನಂತಹ ಬ್ಲಾಕ್‌ಬಸ್ಟರ್ ಚಲನಚಿತ್ರಗಳಿಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ ಕೀರವಾಣಿ, ದೇಸಿ ಮೋಹನ್ ಅವರ ಸಂಗೀತದೊಂದಿಗೆ ರೆಟ್ರೋ ಸಿನಿಮಾದ ಒಂದು ಹಾಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

ರಂಗಸಮುದ್ರ ಸಿನಿಮಾ ಪದ್ಮಶ್ರೀ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಮಾಂತ್ರಿಕ ಎಂಎಂ ಕೀರವಾಣಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ತರುತ್ತಿದೆ. ಬಾಹುಬಲಿ, ಆರ್‌ಆರ್‌ಆರ್‌ನಂತಹ ಬ್ಲಾಕ್‌ಬಸ್ಟರ್ ಚಲನಚಿತ್ರಗಳಿಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ ಕೀರವಾಣಿ, ದೇಸಿ ಮೋಹನ್ ಅವರ ಸಂಗೀತದೊಂದಿಗೆ ರೆಟ್ರೋ ಸಿನಿಮಾದ ಒಂದು ಹಾಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

ಈ ಬಗ್ಗೆ ನಿರ್ದೇಶಕ ರಾಜ್‌ಕುಮಾರ್ ಅಸ್ಕಿ ಮತ್ತು ಗೀತೆ ರಚನೆಕಾರ ವಾಗೀಶ್ ಚನ್ನಗಿರಿ  ಹರ್ಷ ವ್ಯಕ್ತಪಡಿಸಿದ್ದು, ಕೀರವಾಣಿ ಅವರ ಧ್ವನಿ ಸೇರ್ಪಡೆಯಿಂದಾಗಿ ಸಿನಿಮಾ ಗಮನಾರ್ಹವಾಗಿ ಮೇಲೇಳಲಿದೆ ಎಂದಿದ್ದಾರೆ. ಹಲವು ವರ್ಷಗಳ ನಂತರ ಕೀರವಾಣಿ ಅವರನ್ನು ಗೌರವ ಮತ್ತು ಪ್ರೀತಿಯಿಂದ ಸಂಪರ್ಕಿಸಿ, ಹೈದರಾಬಾದ್‌ಗೆ ಆಹ್ವಾನಿಸಿದ್ದೇವು.ಅಲ್ಲಿ ಅವರು ಹಾಡಿಗೆ ಧ್ವನಿ ನೀಡಲು ಒಪ್ಪಿಕೊಂಡರು ಎಂದು ನಿರ್ದೇಶಕರು ಹೇಳಿದರು.

ಕೀರವಾಣಿ ಅವರು ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಣ್ಣ ಕೊಠಡಿಯಲ್ಲಿ ತಂಗಿದ್ದ ದಿನಗಳು ಹಾಗೂ ಆತ್ಮೀಯ ಸ್ನೇಹಿತ ದೊಡ್ಡಣ್ಣ ಅವರನ್ನು ಹೆಚ್ಚು ನೆನೆಸಿಕೊಂಡರು. ಬಿಡುಗಡೆಯಾದ ಮೇಲೆ ರಾಜಮೌಳಿ ಜೊತೆಗೆ ಚಿತ್ರವನ್ನು ವೀಕ್ಷಿಸುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ನಿರ್ಮಾಪಕರು ತಿಳಿಸಿದರು. 

ಹೆಸರಾಂತ ಗಾಯಕರಾದ ಕೈಲಾಶ್ ಖೇರ್, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ ಮತ್ತು ದೇಸಿ ಮೋಹನ್ ನಾಲ್ಕು ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದು, ನವೀನ್ ಸಜ್ಜು ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದಾರೆ. ಹೊಯ್ಸಳ ನಿರ್ಮಾಣದ ರಂಗಸಮುದ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್, ರಂಗಾಯಣ ರಘು, ಸಂಪತ್ ರಾಜ್, ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ, ಉಗ್ರಂ ಮಂಜು, ಕಾರ್ತಿಕ್ ರಾವ್, ದಿವ್ಯಾಗೌಡ, ಮಹೇಂದ್ರ ಮತ್ತಿತರರ ತಾರಾಗಣವಿದೆ. ಜನವರಿ 12 ರಂದು ರಂಗಸಮುದ್ರ  ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT