ವಿಜಯಲಕ್ಷ್ಮಿ ದರ್ಶನ್ 
ಸಿನಿಮಾ ಸುದ್ದಿ

'ಕಾಟೇರ' ಸಿನಿಮಾ ಮಾಸ್ಟರ್ ಪೀಸ್: ದರ್ಶನ್- ಆರಾಧನಾ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಡಿ.29ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಸಿನಿಮಾ ನೋಡಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರತಿಕ್ರಿಯೆ ನೀಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಡಿ.29ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಸಿನಿಮಾ ನೋಡಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ತಮ್ಮ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ನಾನು ‘ಕಾಟೇರ’ ಸಿನಿಮಾ ವೀಕ್ಷಿಸಿದೆ. ಅನುಭವ ಅದ್ಭುತವಾಗಿತ್ತು. ಸಿನಿಮಾದಲ್ಲಿನ ಅನೇಕ ದೃಶ್ಯಗಳಿಗೆ ನಾನು ಕಣ್ಣೀರು ಸುರಿಸಿದ್ದೇನೆ. ಸಿನಿಮಾ ನೋಡಿ ಹೊರನಡೆಯುತ್ತಿದ್ದಂತೆ ದರ್ಶನ್ ಅವರ ಶ್ರಮದ ಬಗ್ಗೆ ಹೆಮ್ಮೆ ಮತ್ತು ಗೌರವ ಆವರಿಸಿತು.

ಖಂಡಿತವಾಗಿಯೂ ದರ್ಶನ್‌ ನಟನೆಯ ಕಾಟೇರ ಸಿನಿಮಾ ನನ್ನ ಅಚ್ಚುಮೆಚ್ಚಿನ ಸಿನಿಮಾವಾಗಿದೆ. ಎಲ್ಲಾ ದರ್ಶನ್‌ ಅಭಿಮಾನಿಗಳಿಗೆ ಕೇಳುವುದಿಷ್ಟೇ, ಈ ಮಾಸ್ಟರ್‌ಪೀಸ್‌ ಸಿನಿಮಾ ನೋಡಲು ಮರೆಯಬೇಡಿ. ಕಾಟೇರದ ತಂಡಕ್ಕೆ ಶುಭಹಾರೈಕೆಗಳು, ದೊಡ್ಡ ಮಟ್ಟದ ಯಶಸ್ಸು ದೊರಕಲಿ ಎಂದು ವಿಜಯಲಕ್ಷ್ಮಿ ಹಾರೈಸಿದ್ದಾರೆ.

ಇದೇ ಸಮಯದಲ್ಲಿ ಕಾಟೇರ ಸಿನಿಮಾದ ನಿರ್ದೇಶಕರಾದ ತರುಣ್‌ ಸುಧೀರ್‌ ಕುರಿತೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ತರುಣ್‌ ನಿಮ್ಮ ಈ ಸಿನಿಮಾದ ಕುರಿತು ಖಂಡಿತವಾಗಿಯೂ ಹೇಳಬೇಕಾದ ಮಾತಿದೆ. ಕಾಟೇರಾ ಇಲ್ಲಿಯವರೆಗಿನ ಸಿನಿಮಾಗಳಲ್ಲಿ ಅತ್ಯುತ್ತಮವಾದದ್ದು" ಎಂದು ಹೇಳಿದ್ದಾರೆ.

ಕಾಟೇರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಆರಾಧನಾ ರಾಮ್‌ಗೆ ಶುಭಾಶಯಗಳು, ಸಾಕಷ್ಟು ಪ್ರೀತಿಯಿಂದ ಬೆಸ್ಟ್‌ ವಿಶಸ್‌" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ