ಗಿರಿಜಾ ಶೆಟ್ಟರ್ 
ಸಿನಿಮಾ ಸುದ್ದಿ

ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಮೂಲಕ ಗೀತಾಂಜಲಿ ಖ್ಯಾತಿಯ ಗಿರಿಜಾ ಬೆಳ್ಳಿ ತೆರೆಗೆ

ಮಣಿರತ್ನಂ ಅವರ ತೆಲುಗು ಬ್ಲಾಕ್‌ಬಸ್ಟರ್, ನಾಗಾರ್ಜುನ ನಟಿಸಿದ ಗೀತಾಂಜಲಿ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಸಿನಿಪ್ರಿಯರ ಹೃದಯವನ್ನು ಗೆದ್ದಿದ್ದ ನಟಿ ಗಿರಿಜಾ ಅವರು ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶಕನಾಗಿರುವ ಚಂದ್ರಜಿತ್ ಬೆಳ್ಳಿಯಪ್ಪ ಅವರ ಮುಂಬರುವ ರೋಮ್ಯಾಂಟಿಕ್ ಸಿನಿಮಾ 'ಇಬ್ಬನಿ ತಬ್ಬಿದ ಇಳೆಯಲಿ'ಯೊಂದಿಗೆ ನಟಿ ಬೆಳ್ಳಿತೆರೆಗೆ ಮರಳುತ್ತಿದ್ದಾರೆ.

ಮಣಿರತ್ನಂ ಅವರ ತೆಲುಗು ಬ್ಲಾಕ್‌ಬಸ್ಟರ್, ನಾಗಾರ್ಜುನ ನಟಿಸಿದ ಗೀತಾಂಜಲಿ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಸಿನಿಪ್ರಿಯರ ಹೃದಯವನ್ನು ಗೆದ್ದಿದ್ದ ನಟಿ ಗಿರಿಜಾ ಅವರು ಮೋಹನ್‌ಲಾಲ್‌ರೊಂದಿಗಿನ ವಂದನಂ ಸೇರಿದಂತೆ ಮಲಯಾಳಂನಲ್ಲಿ ಒಂದೆರಡು ಚಿತ್ರಗಳ ನಂತರ, 2003 ರಲ್ಲಿ ತುಜೆ ಮೇರಿ ಕಸಮ್‌ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಗಿರಿಜಾ ಅವರು 90ರ ದಶಕದಲ್ಲಿ ಸಿನಿಮಾ ರಂಗಕ್ಕೆ ವಿದಾಯ ಹೇಳಿದ್ದರು.

ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶಕನಾಗಿರುವ ಚಂದ್ರಜಿತ್ ಬೆಳ್ಳಿಯಪ್ಪ ಅವರ ಮುಂಬರುವ ರೋಮ್ಯಾಂಟಿಕ್ ಸಿನಿಮಾ 'ಇಬ್ಬನಿ ತಬ್ಬಿದ ಇಳೆಯಲಿ'ಯೊಂದಿಗೆ ನಟಿ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ರಕ್ಷಿತ್ ಶೆಟ್ಟಿಯವರ ಪರಂವಃ ಸ್ಟುಡಿಯೋಸ್‌‌ ಬ್ಯಾನರ್ ಅಡಿಯ ಈ ಚಿತ್ರಕ್ಕೆ ಅವರು ಕನ್ನಡಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ವೈದ್ಯರಾಗಿದ್ದ ಗಿರಿಜಾ ಅವರ ತಂದೆ ಕೂಡ ಕನ್ನಡಿಗರು ಮತ್ತು ಅವರ ತಾಯಿ ಬ್ರಿಟಿಷಾಗಿದ್ದರು. ಚಿತ್ರತಂಡ ಅವರ ಪಾತ್ರದ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಅವರು ಪಂಚತಂತ್ರ ಖ್ಯಾತಿಯ ನಾಯಕ ವಿಹಾನ್ ಮತ್ತು ಧಾರಾವಾಹಿ ನಟಿ ಮತ್ತು ಗಾಯಕಿ ಅಂಕಿತಾ ಅಮರ್ ನಟಿಸಿರುವ ಚಿತ್ರದ ಮೂಲಕ ಪುನರಾಗಮನಕ್ಕೆ ಸಿದ್ಧರಾಗಿದ್ದಾರೆ. ಗಿರಿಜಾ ಅವರು ಶೀಘ್ರದಲ್ಲೇ ಇಬ್ಬನಿ ತಬ್ಬಿದ ಇಳೆಯಲಿ ಸೆಟ್‌ಗೆ ಸೇರುವ ನಿರೀಕ್ಷೆಯಿದೆ. ಈಮಧ್ಯೆ, ಪ್ರೇಮಿಗಳ ದಿನದ ಸಂದರ್ಭದಲ್ಲಿ ಚಿತ್ರತಂಡ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಹಿಂದಿನ ಪ್ರಣಯದ ಸಾರವನ್ನು ಸೆರೆಹಿಡಿಯಲು ಮತ್ತು ಇಂದಿನ ಪ್ರೀತಿಯ ಪ್ರಸ್ತುತತೆಯನ್ನು ಅನ್ವೇಷಿಸಲು ಮತ್ತು ಭವಿಷ್ಯದ ಪರೀಕ್ಷೆಯನ್ನು ಗೆಲ್ಲಲು ಸಾಧ್ಯವಾದರೆ ಅದನ್ನು ಸೆರೆಹಿಡಿಯುವ ಪ್ರಯತ್ನವೇ ಇಬ್ಬನಿ ತಬ್ಬಿದ ಇಳೆಯಲಿ ಎಂದು ನಿರ್ದೇಶಕರು ಈಗಾಗಲೇ ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಅವರ 7 ಆಡ್ಸ್ ಬರವಣಿಗೆ ತಂಡದ ಸದಸ್ಯಲ್ಲಿ ಒಬ್ಬರಾಗಿ 'ಅವನೇ ಶ್ರೀಮನ್ನಾರಾಯಣ' ಮತ್ತು 'ಕಿರಿಕ್ ಪಾರ್ಟಿ'ಗೆ ಬರಹಗಾರರಾಗಿ ಕೆಲಸ ಮಾಡಿದ್ದ ಚಂದ್ರಜಿತ್ ಬೆಳ್ಳಿಯಪ್ಪ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ರಿಷಬ್ ಶೆಟ್ಟಿ ಪರಿಕಲ್ಪನೆಯ ಕಥಾಸಂಗಮದಲ್ಲಿ 'ರೇನ್‌ಬೊ ಲ್ಯಾಂಡ್‌' ಕಿರುಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಜಿತ್ ಬೆಳ್ಳಿಯಪ್ಪ ಅವರೀಗ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜಿಸುತ್ತಿದ್ದು, ಶ್ರೀವತ್ಸನ್ ಸೆಲ್ವರಾಜನ್ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಪ್ತ ಗುಂಪಿನಿಂದ ಸ್ಪೋಟಕ ಸಂದೇಶ, ಡಾ. ಜಿ. ಪರಮೇಶ್ವರ್ ಹೇಳಿದ್ದೇನು?

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

SCROLL FOR NEXT