ಆರ್ ಬೋನಿ ಗೇಬ್ರಿಯಲ್ 
ಸಿನಿಮಾ ಸುದ್ದಿ

ಮಿಸ್ ಯುಎಸ್ ಎ ಆರ್'ಬೋನಿ ಗೇಬ್ರಿಯಲ್ ಗೆ ಭುವನ ಸುಂದರಿ ಕಿರೀಟ, ಕರ್ನಾಟಕದ ದಿವಿತಾ ರೈಗೆ ನಿರಾಸೆ

ಅಮೆರಿಕದ ಎ ಆರ್'ಬೋನಿ ಗೇಬ್ರಿಯಲ್  ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಲೂಸಿಯಾನದ ಓರ್ಲಿಯನ್ಸ್‌ನಲ್ಲಿ ಭಾನುವಾರ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ ಇತರ 83 ಸುಂದರಿಯರನ್ನು ಹಿಂದಿಕ್ಕಿದ್ದ ಆರ್'ಬೋನಿ ಗೇಬ್ರಿಯಲ್, ವಿಶ್ವ ಸುಂದರಿ ಕಿರೀಟ ಧರಿಸಿದರು.  

ಲೂಸಿಯಾನ: ಅಮೆರಿಕದ ಎ ಆರ್'ಬೋನಿ ಗೇಬ್ರಿಯಲ್  ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಲೂಸಿಯಾನದ ಓರ್ಲಿಯನ್ಸ್‌ನಲ್ಲಿ ಭಾನುವಾರ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ ಇತರ 83 ಸುಂದರಿಯರನ್ನು ಹಿಂದಿಕ್ಕಿದ್ದ ಆರ್'ಬೋನಿ ಗೇಬ್ರಿಯಲ್, ನೂತನ ಭುವನ ಸುಂದರಿ ಕಿರೀಟ ಧರಿಸಿದರು.  

71 ನೇ ಆವೃತ್ತಿಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಿಸ್ ಇಂಡಿಯಾ-ಯೂನಿವರ್ಸ್ ದಿವಿತಾ ರೈ ಅವರು ಅಗ್ರ 16 ರಲ್ಲಿ ಸ್ಥಾನ ಪಡೆದರು ಆದರೆ ಅಗ್ರ 5 ರೊಳಗೆ ಪ್ರವೇಶಿಸಲು ವಿಫಲರಾದರು. ಗೇಬ್ರಿಯಲ್ ಮಾಡೆಲ್, ಫ್ಯಾಷನ್ ಡಿಸೈನರ್ ಆಗಿದ್ದು, ಉತ್ತರ ಟೆಕ್ಸಾಸ್ ವಿಶ್ವವಿದ್ಯಾನಿಲಯದಿಂದ ಫ್ಯಾಶನ್ ಡಿಸೈನ್‌ನಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದಾರೆ.

ಗೇಬ್ರಿಯಲ್ ತನ್ನದೇ ಆದ ಪರಿಸರ ಸ್ನೇಹಿ ಉಡುಪುಗಳ ಕಂಪನಿ ಸಹ ನಡೆಸುತ್ತಿದ್ದಾರೆ. ಮಿಸ್ ವೆನೆಜುವೆಲಾ ಅಮಂಡಾ ಡುಡಾಮೆಲ್ ಮೊದಲ ರನ್ನರ್ ಅಪ್ ಆದರು.  ಡೊಮಿನಿಕನ್ ರಿಪಬ್ಲಿಕ್‌ನ ಆಂಡ್ರೀನಾ ಮಾರ್ಟಿನೆಜ್ ಫೌನಿಯರ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು,  11 ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕಾದವರು ಭುವನ ಸುಂದರಿ ಕಿರೀಟವನ್ನು ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel