ಸಿನಿಮಾ ಸುದ್ದಿ

ಕ್ಯಾನ್ಸರ್ ನಂತರ ಮತ್ತೊಂದು ಕಾಯಿಲೆಯಿಂದ ಬಳಲುತ್ತಿರುವ ಸುದೀಪ್ 'ಗೂಳಿ' ನಟಿ ಮಮತಾ ಮೋಹನ್ ದಾಸ್

Shilpa D

ಬೆಂಗಳೂರು:  ಮಲಯಾಳಂ ನಟಿ ಮಮತಾ ಮೋಹನ್​ದಾಸ್ ಅವರು ಸುದೀಪ್ ನಟನೆಯ ‘ಗೂಳಿ’ ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದರು. ಇದು ಅವರು ಕನ್ನಡದಲ್ಲಿ ನಟಿಸಿದ ಮೊದಲ ಹಾಗೂ ಕೊನೆಯ ಸಿನಿಮಾ.

2022ರಲ್ಲಿ ಬಿಡುಗಡೆಯಾದ ಮಾಲಿವುಡ್‌ ನಟ ಪೃಥ್ವಿರಾಜ್ ಸುಕುಮಾರನ್ ಅವರ ʻಜನ ಗಣ ಮನʼ ಸಿನಿಮಾದ ನಟಿ ಮಮತಾ ಮೋಹನ್ ದಾಸ್ ನಟಿಸಿದ್ದರು, ಸದ್ಯ ಅವರಿಗೆ ವಿಟಲಿಗೋ ಎಂಬ ಆಟೋಇಮ್ಯೂನ್ ಕಾಯಿಲೆ ಇರುವುದು ಪತ್ತೆಯಾಗಿದೆ. ಸೋಷಿಯಲ್ ಮೀಡಿಯಾ ಮೂಲಕ ನಟಿಯೇ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಸಮಂತಾ ರುತ್ ಪ್ರಭು ನಂತರ ತನಗೆ ಆಟೋಇಮ್ಯೂನ್ ಕಾಯಿಲೆ ಇದೆ ಎಂದು ಬಹಿರಂಗಪಡಿಸಿದ ಎರಡನೇ ನಟಿ ಇವರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಮಮತಾ ಅವರಿಗೆ ಕ್ಯಾನ್ಸರ್ ಮರುಕಳಿಸಿತ್ತು. ಮಮತಾ ಅವರು ಕ್ಯಾನ್ಸರ್ ನಿಂದ ಗೆದ್ದು ಬಂದ ಮಹಿಳೆ. ಇದೀಗ ಮಮತಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕಾಯಿಲೆ ಬಗ್ಗೆ ಕಾವ್ಯಾತ್ಮಕವಾಗಿ ಬರೆದುಕೊಂಡಿದ್ದಾರೆ.

“ಪ್ರಿಯ (ಸೂರ್ಯನ ಎಮೋಜಿ) , ಸೂರ್ಯನೇ ನಾನು ನಿನ್ನನ್ನು ಅಪ್ಪಿಕೊಳ್ಳುತ್ತಿದ್ದೇನೆ. ನಾನು ಬಣ್ಣವನ್ನು ಕಳೆದುಕೊಳ್ಳುತ್ತಿದ್ದೇನೆ. ಸಾಕಷ್ಟು ಮುಂಜಾನೆ ನಿನ್ನ ಕಿರಣಗಳನ್ನು ನೋಡಬೇಕೆಂದು ನಿನಗಿಂತ ಮೊದಲು ನಾನು ಎದ್ದಿದ್ದೇನೆ. ನಿನ್ನ ಕೃಪೆಗೆ ನಾನು ಸದಾ ಋಣಿ’ ಎಂದು ಅವರು ಬರೆದುಕೊಂಡಿದ್ದಾರೆ.

ವಿಟಲಿಗೋ ಕಾಯಿಲೆಯಿಂದ ಬಳಲುವರು ಚರ್ಮದ ಬಣ್ಣವನ್ನು ಕಳೆದುಕೊಳ್ಳುತ್ತಾರೆ. ಮೆಲಟೋನಿನ್ ಅನ್ನು ಉತ್ಪಾದಿಸುವ ಚರ್ಮದ ಕೋಶಗಳನ್ನು ಸಾಯುವಂತೆ ಮಾಡುತ್ತದೆ ಅಥವಾ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಈ ಸ್ಥಿತಿಯು ಮಾರಣಾಂತಿಕವಲ್ಲ ಅಥವಾ ಸಾಂಕ್ರಾಮಿಕವಲ್ಲ. ಜಾಗತಿಕವಾಗಿ, 1% ಜನರು ವಿಟಲಿಗೋವನ್ನು ಹೊಂದಿದ್ದಾರೆ, ಇದು ಸಾಮಾನ್ಯವಾಗಿ ಕೈಗಳು, ಪಾದಗಳು, ತೋಳುಗಳು, ಮುಖ ಮತ್ತು ಕಾಲುಗಳ ಮೇಲೆ ಪರಿಣಾಮ ಬೀರುತ್ತದೆ.

SCROLL FOR NEXT