ಕರಿ ಹೈದ ಕರಿ ಅಜ್ಜ ಸಿನಿಮಾದ ಫೋಸ್ಟರ್ 
ಸಿನಿಮಾ ಸುದ್ದಿ

ಸುಧೀರ್ ಅತ್ತಾವರ್ ನಿರ್ದೇಶನದ 'ಕರಿ ಹೈದ ಕರಿ ಅಜ್ಜ' ಸಿನಿಮಾದಲ್ಲಿ ನೃತ್ಯ ನಿರ್ದೇಶಕ ಸಂದೀಪ್ ಸೋಪರ್ಕರ್

ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಕುರಿತು ಸುಧೀರ್ ಅತ್ತಾವರ್ ನಿರ್ದೇಶನದ ತಯಾರಾಗುತ್ತಿರುವ 'ಕರಿ ಹೈದ ಕರಿ ಅಜ್ಜ' ಸಿನಿಮಾದಲ್ಲಿ  ಭರತ್ ಸೂರ್ಯ, ಭವ್ಯ, ಶ್ರುತಿ ಮತ್ತು ಜನಪ್ರಿಯ ಹಿಂದಿ ನಟ ಕಬೀರ್ ಬೇಡಿ ನಟಿಸುತ್ತಿರುವುದು ಗೊತ್ತೇ ಇದೆ. ಇದೀಗ  ಈ ಸಿನಿಮಾಕ್ಕೆ ಹಾಲಿವುಡ್ ಮತ್ತು ಬಾಲಿವುಡ್ ನ ಪ್ರಸಿದ್ಧ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಸೇರಿದ್ದಾರೆ. 

ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಕುರಿತು ಸುಧೀರ್ ಅತ್ತಾವರ್ ನಿರ್ದೇಶನದ ತಯಾರಾಗುತ್ತಿರುವ 'ಕರಿ ಹೈದ ಕರಿ ಅಜ್ಜ' ಸಿನಿಮಾದಲ್ಲಿ  ಭರತ್ ಸೂರ್ಯ, ಭವ್ಯ, ಶ್ರುತಿ ಮತ್ತು ಜನಪ್ರಿಯ ಹಿಂದಿ ನಟ ಕಬೀರ್ ಬೇಡಿ ನಟಿಸುತ್ತಿರುವುದು ಗೊತ್ತೇ ಇದೆ. ಇದೀಗ  ಈ ಸಿನಿಮಾಕ್ಕೆ ಹಾಲಿವುಡ್ ಮತ್ತು ಬಾಲಿವುಡ್ ನ ಪ್ರಸಿದ್ಧ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಸೇರಿದ್ದಾರೆ. 

ಈ ಸಿನಿಮಾದೊಂದಿಗೆ ನೃತ್ಯ ಸಂಯೋಜಕ ಹಾಗೂ  ಹಾಲಿವುಡ್, ಬಾಲಿವುಡ್ ಮತ್ತು ಫ್ರೆಂಚ್ ಚಲನಚಿತ್ರಗಳಲ್ಲಿ ನಟಿಸಿರುವ ನಟ ಸಂದೀಪ್ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂದೀಪ್ ಗುಳಿಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ದೇವಂತೆ ಪೂಜಿಸುವ 12 ನೇ ಶತಮಾನದ ಆದಿವಾಸಿ ಕೊರಗಜ್ಜನ ಜೀವನಾಧಾರಿತ ಚಿತ್ರವಾಗಿದೆ. 

ಕರಿ ಹೈದ ಕರಿ ಅಜ್ಜ ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ತ್ರಿವಿಕ್ರಮ್ ಸಪಲಯ್ಯ ಅವರ ಬೆಂಬಲದೊಂದಿಗೆ, ಚಿತ್ರಕ್ಕೆ ಸುಧೀರ್ ಮತ್ತು ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ ಮತ್ತು ಪವನ್ ಮತ್ತು ಗಣೇಶ್ ಕೆಳಮನೆ ಅವರ ಛಾಯಾಗ್ರಹಣವಿರಲಿದೆ. ಬಾಂಬೆ ಮತ್ತು ದಿಲ್ ಸೆಯಂತಹ ಚಿತ್ರಗಳ ಸಂಕಲನಕಾರ ಸುರೇಶ್ ಅರಸ್ ಅವರ ಸಂಕಲನವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video