ಹೊಯ್ಸಳ ಸಿನಿಮಾದ ಪೋಸ್ಟರ್ಸ್ 
ಸಿನಿಮಾ ಸುದ್ದಿ

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ನಟ ಧನಂಜಯ್ ಅವರ 'ಹೊಯ್ಸಳ' ಚಿತ್ರ

ಧನಂಜಯ್ ಅವರ 25ನೇ ಚಿತ್ರ ಹೊಯ್ಸಳ ಸಿನಿಮಾಗೆ ವಿಶೇಷ ಎನ್ನುವಂತದ್ದೇ ನಡೆಯುತ್ತಿದೆ. ಮಾರ್ಚ್ 30 ರಂದು ಬಿಡುಗಡೆಯಾಗಲಿರುವ ಈ ಚಿತ್ರವು ತನ್ನ ಆಡಿಯೋ ಆಲ್ಬಂನೊಂದಿಗೆ ಸ್ವಲ್ಪ ಸದ್ದು ಮಾಡುತ್ತಿದೆ.

ಧನಂಜಯ್ ಅವರ 25ನೇ ಚಿತ್ರ ಹೊಯ್ಸಳ ಸಿನಿಮಾಗೆ ವಿಶೇಷ ಎನ್ನುವಂತದ್ದೇ ನಡೆಯುತ್ತಿದೆ. ಮಾರ್ಚ್ 30 ರಂದು ಬಿಡುಗಡೆಯಾಗಲಿರುವ ಈ ಚಿತ್ರವು ತನ್ನ ಆಡಿಯೋ ಆಲ್ಬಂನೊಂದಿಗೆ ಸ್ವಲ್ಪ ಸದ್ದು ಮಾಡುತ್ತಿದೆ.

ಆನಂದ್ ಆಡಿಯೋ ದಾಖಲೆ ಬೆಲೆಗೆ ಚಿತ್ರದ ಆಡಿಯೋ ರೈಟ್ಸ್ ಅನ್ನು ಪಡೆದುಕೊಂಡಿದೆ. ಇದು ಧನಂಜಯ್ ಅವರ ವೃತ್ತಿಜೀವನದ ಸಿನಿಮಾಗಳ ಪೈಕಿಯೇ ಅಧಿಕ ಬೆಲೆಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.

ಬರಹಗಾರ-ನಿರ್ದೇಶಕ ವಿನಯ್ ಎನ್ ಅವರ ಚೊಚ್ಚಲ ಚಿತ್ರವಾಗಿರುವ ಹೊಯ್ಸಳ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ರತ್ನನ್ ಪ್ರಪಂಚ ನಂತರ ಕೆಆರ್‌ಜಿ ಸ್ಟುಡಿಯೋಸ್‌ನೊಂದಿಗೆ ನಟ ಧನಂಜಯ ಅವರ ಎರಡನೇ ಚಿತ್ರ ಇದಾಗಿದೆ. 

ನಟ ಮತ್ತು ಪ್ರೊಡಕ್ಷನ್ ಹೌಸ್ ಉತ್ತರಾಖಂಡ ಚಿತ್ರಕ್ಕಾಗಿ ನಿರ್ದೇಶಕ ರೋಹಿತ್ ಪದಕಿಯೊಂದಿಗೆ ಕೈಜೋಡಿಸುತ್ತಿದೆ. ಧನಂಜಯ್ ಅವರ ಕನ್ನಡ-ತೆಲುಗು ದ್ವಿಭಾಷಾ ಚಿತ್ರವಾದ ಜೀಬ್ರಾವನ್ನು ಪೂರ್ಣಗೊಳಿಸಿದ ನಂತರ ಉತ್ತರಕಾಂಡ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದಲ್ಲಿ ಸತ್ಯದೇವ್ ಕೂಡ ನಟಿಸಿದ್ದಾರೆ.

ಈ ಮಧ್ಯೆ ಉತ್ತರ ಕರ್ನಾಟಕದಲ್ಲಿ ಸೆಟ್ಟೇರಿರುವ ಹೊಯ್ಸಳ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಿಸಿದ್ದಾರೆ. ಹೊಯ್ಸಳ ಸಿನಿಮಾದಲ್ಲಿ ಧನಂಜಯ್ ಅವರೊಂದಿಗೆ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಇವರಿಬ್ಬರು ಈ ಹಿಂದೆ ಸೂರಿ ಅವರ ಪಾಪ್‌ಕಾರ್ನ್ ಮಂಕಿ ಟೈಗರ್ ಮತ್ತು ಶಂಕರ್ ಗುರು ಅವರ ಬಡವ ರಾಸ್ಕಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಹೊಯ್ಸಳ ಸಿನಿಮಾದ ಪ್ರಮುಖ ತಾರಾಗಣದಲ್ಲಿ ನವೀನ್ ಶಂಕರ್, ಅವಿನಾಶ್ ಬಿಎಸ್, ಮಯೂರಿ ನಟರಾಜ್ ಮತ್ತು ಪ್ರತಾಪ್ ನಾರಾಯಣ್ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

RSS ಪಥಸಂಚಲನದಲ್ಲಿ ಭಾಗಿ: ಯಾದಗಿರಿಯ ಇಬ್ಬರು ಸರ್ಕಾರಿ ಶಿಕ್ಷಕರ ಅಮಾನತು

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ