ನಿಧಿ ಸುಬ್ಬಯ್ಯ, ಅನಿರುದ್ಧ್ ಜಟ್ಕರ್ ಮತ್ತು ರಾಚೆಲ್ ಡೇವಿಡ್ 
ಸಿನಿಮಾ ಸುದ್ದಿ

ಆನಂದ್ ರಾಜ್ ನಿರ್ದೇಶನದ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅನಿರುದ್ಧ್ ಜಟ್ಕರ್ ಪುನರಾಗಮನ

ಜೊತೆ ಜೊತೆಯಲಿ ಮತ್ತು ಸೂರ್ಯವಂಶದಂತಹ ಧಾರಾವಾಹಿಗಳಲ್ಲಿನ ಅಭಿನಯದಿಂದ ಖ್ಯಾತಿ ಗಳಿಸಿದ ನಟ ಅನಿರುದ್ಧ್ ಜಟ್ಕರ್, ಐದು ವರ್ಷಗಳ ನಂತರ ನಿರ್ದೇಶಕ ಆನಂದ್ ರಾಜ್ ಅವರ ಸಿನಿಮಾದಲ್ಲಿ ಮುಖ್ಯ ಪಾತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ಚಿಟ್ಟೆ ಚಿತ್ರ, ತುಂಟಾಟ ಮತ್ತು ರಾಮ ಶಾಮ ಭಾಮಾ ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ನಟ ಅನಿರುದ್ಧ್ ಜಟ್ಕರ್ ಅವರು ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳತ್ತ ಗಮನ ಹರಿಸುತ್ತಿದ್ದರು. ಜೊತೆ ಜೊತೆಯಲಿ ಮತ್ತು ಸೂರ್ಯವಂಶದಂತಹ ಧಾರಾವಾಹಿಗಳಲ್ಲಿನ ಅಭಿನಯದಿಂದ ಖ್ಯಾತಿ ಗಳಿಸಿದ ನಟ, ಐದು ವರ್ಷಗಳ ನಂತರ ನಿರ್ದೇಶಕ ಆನಂದ್ ರಾಜ್ ಅವರ ಸಿನಿಮಾದಲ್ಲಿ ಮುಖ್ಯ ಪಾತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಗಣೇಶ್ ಪರಶುರಾಮ್ ಬರೆದಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾದ ನಿರ್ಮಾಣದ ಹೊಣೆಯನ್ನು ಸವೊತ್ತಮ್‌ ಹೊತ್ತುಕೊಂಡಿದ್ದು, ನಟಿಯರಾದ ನಿಧಿ ಸುಬಯ್ಯ ಮತ್ತು ರಾಚೆಲ್ ಡೇವಿಡ್ ನಾಯಕಿಯರಾಗಿದ್ದಾರೆ.

ಜುಲೈ 20 ರಂದು ಮೈಸೂರಿನ ಡಾ. ವಿಷ್ಣುವರ್ಧನ್ ಅವರ ಸ್ಮಾರಕದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆಯಿತು. ಚಿತ್ರದ ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ಉದಯ ಲೀಲಾ ಮತ್ತು ಸಂಗೀತ ಸಂಯೋಜಕ ರಿತ್ವಿಕ್ ಮುರಳೀಧರ್ ಇದ್ದಾರೆ.

ಚಿತ್ರವು ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಜ ಸಜ್ಜಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

SCROLL FOR NEXT