ಚೈತ್ರಾ ವಾಸುದೇವನ್‌ 
ಸಿನಿಮಾ ಸುದ್ದಿ

ಮುರಿದು ಬಿತ್ತು ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ದಾಂಪತ್ಯ: ವಿಚ್ಛೇದನದ ಮಾಹಿತಿ ನೀಡಿದ ನಿರೂಪಕಿ!

ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತೇನೆ.

ಬಿಗ್ ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿಯಾಗಿ ಎಲ್ಲರ ಗಮನಸೆಳೆದಿದ್ದವರು ಚೈತ್ರಾ ವಾಸುದೇವನ್‌. ಮೂಲತಃ ನಿರೂಪಕಿಯಾಗಿರುವ ಚೈತ್ರಾ, ತಮ್ಮ ದಾಂಪತ್ಯ ಬದುಕಿನ ಮಹತ್ವದ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ

ಕನ್ನಡ ಕಿರುತೆರೆ, ಸಿನಿಮಾ, ಯೂಟ್ಯೂಬ್‌ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಂಡಿದ್ದಾರೆ ನಟಿ ಚೈತ್ರಾ ವಾಸುದೇವನ್‌. ಬಿಗ್‌ ಬಾಸ್‌ ಸೀಸನ್‌ 7ರಲ್ಲಿ ಕಾಣಿಸಿಕೊಂಡು ಟಿವಿ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರು ಈ ಚೆಲುವೆ.

ಇದೆಲ್ಲದರ ಜತೆಗೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಚೈತ್ರಾ ಕೆಲಸ ಮಾಡಿದ್ದಾರೆ. ಈಗ ಇದೆಲ್ಲದರ ಆಚೆಗಿನ ವೈಯಕ್ತಿಕ ವಿಚಾರದ ಸಲುವಾಗಿ ಚೈತ್ರಾ ಸುದ್ದಿಯಲ್ಲಿದ್ದಾರೆ. ಪತಿ ಸತ್ಯ ನಾಯ್ಡು ಜತೆಗಿನ ಬಂಧವನ್ನು ಕಡಿದುಕೊಂಡಿದ್ದಾರೆ.

ಚೈತ್ರಾ ವಾಸುದೇವನ್‌

ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಇವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನು ಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ಪೋಸ್ಟ್‌ ಹಾಕಿದ್ದಾರೆ.

2021ರಲ್ಲಿ ಚೈತ್ರಾ ವಾಸುದೇವನ್ ಅವರು ಸ್ವಂತ ಮನೆಯೊಂದನ್ನು ಖರೀದಿ ಮಾಡಿದ್ದರು. 2022ರಲ್ಲಿ ದುಬಾರಿ ಮೌಲ್ಯದ ರೇಂಜ್‌ ರೋವರ್ ಕಾರನ್ನು ಖರೀದಿಸಿದ್ದರು. ಮನೆ ಖರೀದಿ ಮಾಡಿದಾಗ ಚೈತ್ರಾ ವಾಸುದೇವನ್‌ ಒಂದು ಪೋಸ್ಟ್ ಹಂಚಿಕೊಂಡಿದ್ದರು.

ಕುಟುಂಬದವರ ಆಪೇಕ್ಷೆ ಮೇರೆಗೆ 2017ರಲ್ಲಿ ಸತ್ಯ ನಾಯ್ಡು ಜೊತೆ ಚೈತ್ರಾ ವಾಸುದೇವನ್ ಮದುವೆ ಆಗಿತ್ತು. ಆದರೆ ಈಗ ವಿಚ್ಛೇದನದ ಮೂಲಕ ಸತ್ಯ ಮತ್ತು ಚೈತ್ರಾ ದಾಂಪತ್ಯ ಬದುಕನ್ನು ಅಂತ್ಯಗೊಳಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ