ರೋಡ್ ಕಿಂಗ್ ಚಿತ್ರಕ್ಕೆ ಹಾಲಿವುಡ್ ನಿರ್ದೇಶಕ 
ಸಿನಿಮಾ ಸುದ್ದಿ

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಿರ್ದೇಶನಗೊಂಡ ಮೊದಲ ಚಿತ್ರ 'ರೋಡ್ ಕಿಂಗ್'

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಿರ್ದೇಶನಗೊಂಡ ಮೊದಲ ಚಿತ್ರ ಎಂಬ ಖ್ಯಾತಿಗೆ 'ರೋಡ್ ಕಿಂಗ್' ಪಾತ್ರವಾಗಿದೆ.

ಬೆಂಗಳೂರು: ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಿರ್ದೇಶನಗೊಂಡ ಮೊದಲ ಚಿತ್ರ ಎಂಬ ಖ್ಯಾತಿಗೆ 'ರೋಡ್ ಕಿಂಗ್' ಪಾತ್ರವಾಗಿದೆ.

ಇತ್ತೀಚಿನ ಚಲನಚಿತ್ರ ತಯಾರಕರು ತಮ್ಮ ಕೆಲಸದಲ್ಲಿ ತಂತ್ರಜ್ಞಾನವನ್ನು ಹೆಚ್ಚಾಗಿ ಅಳವಡಿಸಿಕೊಂಡಿದ್ದಾರೆ.. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ನವ ನಾಯಕ ಮತೀನ್ ಹುಸೇನ್ ನಟಿಸಿರುವ 'ರೋಡ್ ಕಿಂಗ್' ಚಿತ್ರ ಹೊಸ ಕೀರ್ತಿಗೆ ಭಾಜನವಾಗಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಿರ್ದೇಶನಗೊಂಡ ಮೊದಲ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಹಾಲಿವುಡ್ ತಂತ್ರಜ್ಞರೊಬ್ಬರು ಕನ್ನಡ ಸಿನಿಮಾ ರೋಡ್ ಕಿಂಗ್ ಅನ್ನು ನಿರ್ದೇಶಿಸಿದ್ದು ಈ ಸಿನಿಮಾದ ಬಿಡುಗಡೆ ಇನ್ನು ಕೆಲವೇ ದಿನಗಳಲ್ಲಿ ಆಗಲಿದೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಿರ್ದೇಶಿಸಿದ ಮೊದಲ ಚಲನಚಿತ್ರ ಇದು ಎಂದು ಹೇಳಿಕೊಳ್ಳಲಾಗಿದೆ. ಈ ರೋಡ್ ಕಿಂಗ್ ಕನ್ನಡ ಚಲನಚಿತ್ರವು ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್ ಅವರ ಚೊಚ್ಚಲ ಚಿತ್ರವಾಗಿದ್ದು, ಈ ಚಿತ್ರ ಕೆಲವು ವರ್ಷಗಳ ಹಿಂದೆ ಕೋಲಾರದಲ್ಲಿ ಸಂಭವಿಸಿದ ನೈಜ ಘಟನೆಯನ್ನು ಆಧರಿಸಿದ ಚಿತ್ರವಾಗಿದೆ ಎಂದು ಹೇಳಲಾಗಿದೆ.

ನಟನೆಗೆ ಪಾದಾರ್ಪಣೆ ಮಾಡುತ್ತಿರುವ ಮತೀನ್ ಹುಸೇನ್ ಈ ಚಿತ್ರಕ್ಕೆ ನಿರ್ಮಾಪಕರೂ ಆಗಿದ್ದಾರೆ. ಜೂನ್ 23 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮತೀನ್ ಹುಸೇನ್, ಚಿತ್ರಕ್ಕಾಗಿ ತಾವು ಹಲವು ನಿರ್ದೇಶಕರನ್ನು ಸಂಪರ್ಕಿಸಿದೆ. ಆದರೆ ಅವರಲ್ಲಿ ಹೆಚ್ಚಿನವರು ಬಜೆಟ್ ನಿರ್ಬಂಧಗಳಿಂದ ನಿರಾಕರಿಸಿದರು ಎಂದು ಹೇಳಿದರು. 

"ನಾನು USA ಯಲ್ಲಿ ಬೆಳೆದಾಗಿನಿಂದ, ನಾನು ರಾಂಡಿ ಕೆಂಟ್ (ಲೈಫ್ ಆಫ್ ಲೆಮನ್ ಮತ್ತು ಪರ್ಫೆಕ್ಟ್ ಹೌಸ್) ಅವರನ್ನು ಬಹಳ ಸಮಯದಿಂದ ಬಲ್ಲೆ. ನನ್ನ ಈ ಚಿತ್ರವನ್ನು ನಿರ್ದೇಶಿಸಲು ನಾನು ಅವರಲ್ಲಿ ವಿನಂತಿಸಿದೆ. ಆರಂಭದಲ್ಲಿ, ಭಾಷೆಯ ಅಡೆತಡೆಯಿಂದಾಗಿ ಅವರು ಹಿಂಜರಿದರು, ಆದರೆ ಅಂತಿಮವಾಗಿ ಚಿತ್ರವನ್ನು ನಿರ್ದೇಶಿಸಲು ಒಪ್ಪಿಕೊಂಡರು. ವೀಸಾ ಸಮಸ್ಯೆಗಳಿಂದಾಗಿ, ರಾಂಡಿ ಕೆಂಟ್ ಬೆಂಗಳೂರಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ.. ಹೀಗಾಗಿ ಇದು ಸ್ಕೈಪ್ ಮೂಲಕ ಚಲನಚಿತ್ರವನ್ನು ನಿರ್ದೇಶಿಸುವ ನಿರ್ಧಾರಕ್ಕೆ ಬರಲಾಯಿತು. ಎರಡು ಪ್ರಯತ್ನಗಳ ಹೊರತಾಗಿಯೂ, ಅವರು ವಿವಿಧ ಕಾರಣಗಳಿಗಾಗಿ ವೀಸಾವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವರು ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ಅವರು ಅಮೆರಿಕದಿಂದಲೇ ಸ್ಕೈಪ್ ಮೂಲಕ  ಚಿತ್ರವನ್ನು ನಿರ್ದೇಶಿಸಿದರು, ಇದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಿರ್ದೇಶಿಸಿದ ಮೊದಲ ಚಲನಚಿತ್ರವಾಗಿದೆ ಎಂದು ಮತೀನ್ ಹೇಳಿದ್ದಾರೆ.

ಇನ್ನು ರೋಡ್ ಕಿಂಗ್ 'ಒಬ್ಸೆಸಿವ್ ಎಕ್ಸ್ ಸಿಂಡ್ರೋಮ್' ಎಂಬ ಅಪರೂಪದ ಸಮಸ್ಯೆಯ ಸುತ್ತ ಸುತ್ತುತ್ತದೆ. ಬೆಂಗಳೂರು ಮತ್ತು ಇತರ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು. ಮತೀನ್ ಜೊತೆಗೆ, ಚಿತ್ರದಲ್ಲಿ ರುಕ್ಸಾರ್ ಧಿಲ್ಲೋನ್, ಲೀಲಾ ಮೋಹನ್, ಹರೀಶ್ ಸೆಜೆಕನ್, ನಯನಾ ಶೆಟ್ಟಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಆರಿಫ್ ಲಲಾನಿ ಛಾಯಾಗ್ರಹಣವಿದ್ದು, ವಿವಿಧ ಹಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿ ಖ್ಯಾತರಾಗಿರುವ ಸೌಂಡ್ ಡಿಸೈನರ್ ಸ್ಕಾಟ್ ವುಲ್ಫ್ ಅವರು ರೋಡ್ ಕಿಂಗ್‌ ನಲ್ಲಿ ಕೆಲಸ ಮಾಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT