ಜಿಮ್ಮಿ ಸಿನಿಮಾದ ಪೋಸ್ಟರ್ 
ಸಿನಿಮಾ ಸುದ್ದಿ

ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ 'ಜಿಮ್ಮಿ' ಚಿತ್ರಕ್ಕೆ ಅಧಿಕೃತ ಚಾಲನೆ

ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅವರು 'ಜಿಮ್ಮಿ' ಚಿತ್ರದ ಮೂಲಕ ನಟ ಮತ್ತು ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಕೆಲವು ದಿನಗಳ ಚಿತ್ರದ ಮುಹೂರ್ತ ನೆರವೇರಿದ್ದು, ಅಧಿಕೃತವಾಗಿ ಯೋಜನೆ ಆರಂಭಗೊಂಡಿದೆ. ಇದೀಗ, ಪ್ರಚಾರದ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅವರು 'ಜಿಮ್ಮಿ' ಚಿತ್ರದ ಮೂಲಕ ನಟ ಮತ್ತು ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಕೆಲವು ದಿನಗಳ ಹಿಂದೆ ಚಿತ್ರದ ಮುಹೂರ್ತ ನೆರವೇರಿದ್ದು, ಅಧಿಕೃತವಾಗಿ ಯೋಜನೆ ಆರಂಭಗೊಂಡಿದೆ. ಇದೀಗ, ಪ್ರಚಾರದ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

ಕ್ಯಾರೆಕ್ಟರ್ ಟೀಸರ್ ಆಗಿರುವ ಈ ವಿಡಿಯೋವನ್ನು ವಾಸುಕಿ ವೈಭವ್ ಸಂಯೋಜಿಸಿದ್ದಾರೆ ಮತ್ತು ಸುದೀಪ್ ಅವರ ಪುತ್ರಿ ಸಾನ್ವಿ ಧ್ವನಿ ನೀಡಿದ್ದಾರೆ.

ಈ ವಿಡಿಯೋವನ್ನು ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದ್ದು, ಶಿವರಾಜಕುಮಾರ್, ರವಿಚಂದ್ರನ್, ಶಾಸಕ ಮುನಿರತ್ನ, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ಆರ್ ಚಂದ್ರು ಮತ್ತು ಸ್ವತಃ ಕಿಚ್ಚ ಸುದೀಪ್ ಅವರಂತಹ ಗಣ್ಯರು ಆಗಮಿಸಿದ್ದರು.
ತಮ್ಮ ಸೋದರಳಿಯನ ಈ ಪ್ರಯತ್ನಕ್ಕೆ ಆಶೀರ್ವದಿಸಿದ ಹಿರಿಯ ನಟರಿಗೆ ಸುದೀಪ್ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ, ಸಂಚಿತ್ ಸಂಜೀವ್ ಅವರು ತಮ್ಮ ಚೊಚ್ಚಲ ಸಿನಿಮಾದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಜಿಮ್ಮಿಗೆ ನೀಡಿದ ಕೊಡುಗೆಗಾಗಿ ವಿಕ್ರಾಂತ್ ರೋಣ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಸುದೀಪ್ ಅಭಿನಂದನೆ ಸಲ್ಲಿಸಿದರು ಮತ್ತು ಪ್ರತಿಭಾವಂತ ನಿರ್ದೇಶಕ ಹೇಗೆ ಅದ್ಭುತ ವ್ಯಕ್ತಿಯಾಗಿದ್ದರು ಎಂಬುದನ್ನು ಉಲ್ಲೇಖಿಸಿದರು.

ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನೂಪ್ ಅವರನ್ನು ಆಹ್ವಾನಿಸಿದ್ದಾಗಿ ಸುದೀಪ್ ಬಹಿರಂಗಪಡಿಸಿದ್ದಾರೆ. ಸಂಚಿತ್‌ನ ಪಾತ್ರವನ್ನು ಒಳಗೊಂಡ ದೃಶ್ಯವನ್ನು ವಿವರಿಸಿದ ನಂತರ, ಅನೂಪ್‌ಗೆ ಶೀರ್ಷಿಕೆಯನ್ನು ನೀಡಲು ಕೇಳಲಾಯಿತು ಮತ್ತು ಅವರು ಚಿತ್ರಕ್ಕೆ ಜಿಮ್ಮಿ ಎಂದು ಹೆಸರಿಟ್ಟರು.

ಜಿಮ್ಮಿ ಚಿತ್ರವನ್ನು ಲಹರಿ ಫಿಲಂಸ್, ವೀನಸ್ ಎಂಟರ್ಟೈನರ್ಸ್ ಮತ್ತು ಸುಪ್ರಿಯಾನ್ವಿಪಿಕ್ಚರ್ಸ್‌ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜಿ ಮನೋಹರನ್ ಮತ್ತು ಕೆಪಿ ಶ್ರೀಕಾಂತ್ ಜಂಟಿಯಾಗಿ ನಿರ್ಮಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT