ಸಿನಿಮಾ ಸುದ್ದಿ

'ಬ್ಯಾಡ್ ಮ್ಯಾನರ್ಸ್' ಚಿತ್ರ ಅಭಿಷೇಕ್ ರನ್ನು ಕಮರ್ಷಿಯಲ್ ಆಗಿ ಸಮರ್ಥ ನಾಯಕನಾಗಿ ಪರಿಚಯಿಸುತ್ತದೆ: ಸೂರಿ

Ramyashree GN

ನಿರ್ದೇಶಕ ಸೂರಿ ಇತ್ತೀಚೆಗಷ್ಟೇ ತಮ್ಮ ಮುಂಬರುವ ಚಿತ್ರ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಮುಗಿಸಿದ್ದಾರೆ. ನಟ ಅಭಿಷೇಕ್ ಅಂಬರೀಶ್ ಅಭಿನಯದ ಇಂಟ್ರಡಕ್ಷನ್ ಸಾಂಗ್‌ನೊಂದಿಗೆ ಚಿತ್ರೀಕರಣ ಪೂರ್ಣಗೊಂಡಿದೆ. ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗೆ ತಂಡವು ಹಂಚಿಕೊಂಡ ಕೆಲವು ಚಿತ್ರಗಳು ನಟನನ್ನು ಹೊಸ ಅವತಾರದಲ್ಲಿ ತೋರಿಸಿವೆ. ಚರಣ್ ರಾಜ್ ಸಂಗೀತವಿರುವ ಇಂಟ್ರಡಕ್ಷನ್ ಹಾಡಿಗೆ ಗೀತರಚನೆಕಾರ ಮತ್ತು ಕಿರಿಕ್ ಪಾರ್ಟಿ ನಟ ಧನಂಜಯ್ ಸಾಹಿತ್ಯ ಬರೆದಿದ್ದಾರೆ. ಡ್ಯಾನ್ಸ್ ಮಾಸ್ಟರ್ ಧನಂಜಯ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ ಮತ್ತು ಕಾಸ್ಟ್ಯೂಮ್ಸ್ ಅನ್ನು ಕಾರ್ತಿಕ್ ಸಿದ್ಧಗೊಳಿಸಿದ್ದಾರೆ.

ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಸೂರಿ, ಬ್ಯಾಡ್ ಮ್ಯಾನರ್ಸ್ ಚಿತ್ರೀಕರಣವನ್ನು ಪೂರ್ಣಗೊಳಿಸಿರುವುದಕ್ಕೆ ಖುಷಿಯಾಗಿದ್ದಾರೆ. ನಿರ್ದೇಶಕರು ತಮ್ಮ ಸಂಕ್ಷಿಪ್ತ ಸಂಭಾಷಣೆಯಲ್ಲಿ, ಅಭಿಷೇಕ್ ಅವರೊಂದಿಗೆ ಕೆಲಸ ಮಾಡಿದ ಅನುಭವ, ಅವರ ಚಿತ್ರವು ದೊಡ್ಡ ಮಟ್ಟವನ್ನು ತಲುಪುವ ನಿರೀಕ್ಷೆಗಳು ಮತ್ತು ಇತ್ತೀಚಿನ ಬ್ಲಾಕ್‌ಬಸ್ಟರ್‌ಗಳು ಕನ್ನಡ ಉದ್ಯಮಕ್ಕೆ ಹೇಗೆ ಮಾರುಕಟ್ಟೆಯನ್ನು ತೆರೆದಿವೆ ಎಂಬುದರ ಕುರಿತು ಕೆಲವು ಮಾತುಗಳನ್ನು ಹಂಚಿಕೊಳ್ಳುತ್ತಾರೆ.

ನಿರ್ದೇಶಕ ಸೂರಿ

'ಚಿತ್ರೀಕರಣದ ವೇಳೆ ಅಭಿಷೇಕ್‌ ಬಗ್ಗೆ ನಾನು ಗಮನಿಸಿದ ಸಂಗತಿಯಿಂದ, ಅವರು ನಟ ಎಂದು ಹೇಳಬಹುದು. ಇದು ಬಹುಶಃ ಅವರ ತಂದೆಯಿಂದ ಬಂದ ಉಡುಗೊರೆ. ಅವರು ಸಾಕಷ್ಟು ವಿಶೇಷವಾದ ಕಣ್ಣುಗಳು, ನಗು ಮತ್ತು ನೆನಪಿನ ಶಕ್ತಿಯನ್ನು ಹೊಂದಿದ್ದಾರೆ. ಅವರು ತಮ್ಮದೇ ಆದ ಸಿದ್ಧತೆಗಳನ್ನು ಮಾಡಿಕೊಳ್ಳುವ ಕಲಾವಿದರಾಗಿದ್ದಾರೆ ಮತ್ತು ಬ್ಯಾಡ್ ಮ್ಯಾನರ್ಸ್‌ ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ತೆಗೆದುಕೊಂಡ ಶ್ರಮವನ್ನು ಗಮನಿಸುವುದು ಆಸಕ್ತಿದಾಯಕವಾಗಿದೆ. ಅಭಿಷೇಕ್ ಅವರು ಅಂಬರೀಶ್ ಅವರ ಮಗನಾಗಿರುವುದು ಕೇವಲ ನೆಪವಷ್ಟೇ. ಅಭಿಷೇಕ್ ಪಾತ್ರ ಮತ್ತು ಸಿನಿಮಾ ಮಾಡಲು ತಮ್ಮದೇ ಆದ ಪ್ರಯತ್ನಗಳನ್ನು ಮಾಡುತ್ತಾರೆ. ನಮ್ಮಲ್ಲಿ ಎರಡು ಹಾಡುಗಳಿವೆ. ಇವುಗಳಿಗೆ ಅವರು ಒಂದು ತಿಂಗಳು ಅಭ್ಯಾಸ ಮಾಡಿದರು. ಔಟ್‌ಪುಟ್ 'ಬೃಹತ್ ಮತ್ತು ಸ್ಟೈಲಿಶ್' ಆಗಿತ್ತು. ಬ್ಯಾಡ್ ಮ್ಯಾನರ್ಸ್ ಅಭಿಷೇಕ್ ಅವರನ್ನು ಕಮರ್ಷಿಯಲ್ ಆಗಿ ಸಮರ್ಥ ನಾಯಕನನ್ನಾಗಿ ಪರಿಚಯಿಸುತ್ತದೆ' ಎಂದು ಸೂರಿ ಹೇಳುತ್ತಾರೆ.

ಚಿತ್ರವು ಉತ್ತಮ ಬೇಡಿಕೆಯನ್ನು ಸೃಷ್ಟಿಸಿದೆ ಮತ್ತು ಕೆಎಂ ಸುಧೀರ್ ಅವರ ಸ್ಟುಡಿಯೋ 18 ರ ನಿರ್ಮಾಣ ಮೌಲ್ಯವು ಈ ಚಿತ್ರದ ಮೂಲಕ ಮತ್ತಷ್ಟು ದೊಡ್ಡದಾಗಿದೆ. ಸರಾಸರಿ ಬಜೆಟ್ ಚಿತ್ರವಾಗಿ ಪ್ರಾರಂಭವಾದದ್ದು ಈಗ 30 ಕೋಟಿಗಳಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ರಾಕ್‌ಲೈನ್ ​​ವೆಂಕಟೇಶ್, ಮೋಹನ್, ಕೆಪಿ ಶ್ರೀಕಾಂತ್ ಮತ್ತು ಜಯಣ್ಣ ಅವರಂತಹ ನಿರ್ಮಾಪಕರು ಮತ್ತು ವಿತರಕರು ಚಿತ್ರದ ಬೆಂಬಲಕ್ಕೆ ಬರುತ್ತಿದ್ದಾರೆ. ಬರಹಗಾರರಾದ ಸುರೇಂದ್ರ ನಾಥ್, ಅಮ್ರಿ ಮತ್ತು ಛಾಯಾಗ್ರಾಹಕ ಶೇಖರ್ ಸೇರಿದಂತೆ ನನ್ನ ತಂಡವು ಸಮಾನ ಪ್ರಯತ್ನಗಳನ್ನು ಮಾಡಿದೆ ಎನ್ನುತ್ತಾರೆ ಸೂರಿ.

ಸದ್ಯ ಕನ್ನಡ ಇಂಡಸ್ಟ್ರಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ ಮತ್ತು ಇದರ ಪರಿಣಾಮವಾಗಿ ಚಲನಚಿತ್ರ ನಿರ್ಮಾಪಕರು ಗುಣಮಟ್ಟದ ಸ್ಕ್ರಿಪ್ಟ್‌ಗಳು, ಹೊಸ ವಿಷಯ, ಆಲೋಚನೆಗಳು ಮತ್ತು ಸಹಯೋಗಕ್ಕಾಗಿ ಹುಡುಕುತ್ತಿದ್ದಾರೆ ಎನ್ನುವ ದುನಿಯಾ ಸಿನಿಮಾದ ನಿರ್ದೇಶಕರು, ಕನ್ನಡ ಇಂಡಸ್ಟ್ರಿಯು ಅದರ ಗುಣಮಟ್ಟದ ಚಿತ್ರಗಳಿಗಾಗಿ ಪದೇ ಪದೆ ಪ್ರಶಂಸೆಗೆ ಒಳಗಾಗಿದೆ. ಆದರೆ, ಈ ಕ್ರೆಡಿಟ್‌ ಕೆಜಿಎಫ್ ಸರಣಿಗಾಗಿ ವಿಜಯ್ ಕಿರಗಂದೂರ್, ನಟ ಯಶ್ ಮತ್ತು ಪ್ರಶಾಂತ್ ನೀಲ್ ಅವರಿಗೆ ಸಲ್ಲಬೇಕು. ನಂತರ ನಾವು ಸುದೀಪ್ ಮತ್ತು ಅನೂಪ್ ಭಂಡಾರಿಯವರ ವಿಕ್ರಾಂತ್ ರೋಣ ಮತ್ತು ಕಿರಣರಾಜ್ ಅವರ ಚೊಚ್ಚಲ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿಯವರ 777 ಚಾರ್ಲಿಯನ್ನು ಹೊಂದಿದ್ದೇವೆ ಎಂದರು.

'ಸಹಜವಾಗಿ, ರಿಷಬ್ ಶೆಟ್ಟಿಯವರ ಕಾಂತಾರ ಕನ್ನಡ ಇಂಡಸ್ಟ್ರಿಯನ್ನು ಮತ್ತೊಂದು ವಿಭಿನ್ನ ಹಂತಕ್ಕೆ ಕೊಂಡೊಯ್ದಿದೆ. ಉಪೇಂದ್ರ ಅವರ ಕಬ್ಜ ಈ ಆಟಕ್ಕೆ ಮತ್ತಷ್ಟು ಮೆರುಗನ್ನು ತರುತ್ತದೆ. ಉಪೇಂದ್ರ ಹೊರತುಪಡಿಸಿ ಶಿವಣ್ಣ ಮತ್ತು ಸುದೀಪ್ ಅವರಂತಹ ಅನೇಕ ಸೂಪರ್‌ಸ್ಟಾರ್‌ಗಳನ್ನು ಹೊಂದಿರುವ ಆರ್ ಚಂದ್ರು ನಿರ್ದೇಶನದ ಚಿತ್ರವು ಈಗಾಗಲೇ ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಇತರ ಚಲನಚಿತ್ರ ನಿರ್ಮಾಪಕರು ಈ ಅವಕಾಶವನ್ನು ಬಳಸಿಕೊಳ್ಳಲು ಇದು ಅತ್ಯುತ್ತಮ ಸಮಯ' ಎಂದು ಅವರು ಹೇಳುತ್ತಾರೆ.

ಈಮಧ್ಯೆ, ಬ್ಯಾಡ್ ಮ್ಯಾನರ್ಸ್ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಗೊಳಿಸುವ ಗುರಿಯನ್ನು ನಿರ್ದೇಶಕರು ಹೊಂದಿದ್ದಾರೆ. ಅಂಬರೀಶ್ ಅವರ ಜನ್ಮದಿನದಂದು (ಮೇ 29) ಚಿತ್ರವು ಥಿಯೇಟರ್‌ಗೆ ಬರಬಹುದು ಎನ್ನಲಾಗಿದೆ. 

'ನಾವು ಇದೀಗ ಕಂಪ್ಯೂಟರ್ ಗ್ರಾಫಿಕ್ಸ್ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಗ್ರೇಡಿಂಗ್ ಮತ್ತು ರೀ ರೆಕಾರ್ಡಿಂಗ್‌ಗೆ ನಮಗೆ ಒಂದು ತಿಂಗಳು ಬೇಕಾಗುತ್ತದೆ. ನಾವು ಶೀಘ್ರದಲ್ಲೇ ಹಾಡುಗಳನ್ನು ನಿಯಮಿತ ಮಧ್ಯಂತರದಲ್ಲಿ ಬಿಡುಗಡೆ ಮಾಡುತ್ತೇವೆ' ಎಂದು ಹೇಳುತ್ತಾರೆ ಸೂರಿ.

SCROLL FOR NEXT