ಲವ್ ಮಾಕ್ಟೇಲ್-3 
ಸಿನಿಮಾ ಸುದ್ದಿ

ಲವ್ ಮಾಕ್ಟೇಲ್-3: ಅಭಿಮಾನಿಗಳಿಗೆ ಯುಗಾದಿ ಗಿಫ್ಟ್ ನೀಡಿದ ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್!

ಲವ್ ಮಾಕ್ಟೇಲ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಜೋಡಿ ಇದೀಗ ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಲವ್ ಮಾಕ್ಟೇಲ್ 3 ಚಿತ್ರದ ಕುರಿತು ಮಾಹಿತಿ ನೀಡಿದೆ.

ಬೆಂಗಳೂರು: ಲವ್ ಮಾಕ್ಟೇಲ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಜೋಡಿ ಇದೀಗ ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಲವ್ ಮಾಕ್ಟೇಲ್ 3 ಚಿತ್ರದ ಕುರಿತು ಮಾಹಿತಿ ನೀಡಿದೆ.

ಹೌದು..ಸ್ಯಾಂಡಲ್‌ವುಡ್ ನ ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಜೋಡಿ ಯುಗಾದಿ ಸಂಭ್ರಮದ ಶುಭದಿನದಂದು ತಮ್ಮ ಮುಂದಿನ ಕೆಲಸ ಬಗ್ಗೆ ಡಾರ್ಲಿಂಗ್ ಕೃಷ್ಣ ದಂಪತಿ ಕೂಡ ʻಲವ್ ಮಾಕ್ಟೈಲ್ʼ (Love Moctail) ಸೀಕ್ವೇಲ್ ಬಗ್ಗೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.

ʻಲವ್ ಮಾಕ್ಟೈಲ್ʼ ಪಾರ್ಟ್ 1 ಮತ್ತು ಪಾರ್ಟ್ 2ನಲ್ಲಿ ಆದಿ-ನಿಧಿಮಾ ಸ್ಟೋರಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಚೆಂದದ ಲವ್ ಸ್ಟೋರಿ ಜೊತೆ ಎಮೋಷನಲಿ ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗಿತ್ತು. ಮತ್ತೆ ಇದರ ಮುಂದುವರೆದ ಭಾಗ ಬರುತ್ತೋ ಇಲ್ವೋ ಅಂತಾ ಎಂಬ ಸ್ಪಷ್ಟತೆ ಇರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದೆ.

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರಿಗೆ ಪಾರ್ಟ್ 3 ಮಾಡುವ ಉದ್ದೇಶ ಅವರಿಗೆ ಇತ್ತು. ಆದರೆ ಒಳ್ಳೆಯ ಕಥೆ ಸಿಕ್ಕರೆ ಮಾತ್ರ ಮಾಡುತ್ತೇವೆ ಎಂದು ಅವರು ಹೇಳಿದ್ದರು. ಈಗ ಸೂಕ್ತವಾದ ಕಥೆ ಸಿಕ್ಕಿದೆ. ಹಾಗಾಗಿ ಅಧಿಕೃತವಾಗಿ `ಲವ್ ಮಾಕ್ಟೇಲ್ 3′ (Love Mocktail 3) ಬಗ್ಗೆ ಅನೌನ್ಸ್ ಮಾಡಲಾಗಿದೆ. 

ಮತ್ತೆ ಆದಿ- ನಿಧಿಮಾ ಕಥೆ ಹೇಳಲು ʻಕ್ರಿಸ್‌ಮೀʼ ಜೋಡಿ ರೆಡಿಯಾಗಿದ್ದಾರೆ. `ಲವ್ ಮಾಕ್ಟೈಲ್ 3’ಗಾಗಿ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಮತ್ತಷ್ಟು ಅಪ್‌ಡೇಟ್ ಅನ್ನ ಈ ಜೋಡಿ ಕೊಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT