ರಾಜ್. ಬಿ ಶೆಟ್ಟಿ 
ಸಿನಿಮಾ ಸುದ್ದಿ

ಬಿಗ್ ಬಜೆಟ್ ಸಿನಿಮಾ ನಿರ್ದೇಶನಕ್ಕಿಳಿದ ರಾಜ್ ಬಿ ಶೆಟ್ಟಿ: 'ಟೋಬಿ' ಟೈಟಲ್ ಫಿಕ್ಸ್!

ಆದಷ್ಟು ಕಡಿಮೆ ಬಜೆಟ್ ನಲ್ಲಿ ಚಿತ್ರೀಕರಣ ಮುಗಿಸುವುದು ರಾಜ್‌ ಬಿ ಶೆಟ್ಟಿ ಶೈಲಿ. ಅದೇ ಪ್ರಕಾರ ಅವರು ಸ್ವಾತಿ ಮುತ್ತಿನ ಮಳೆ ಸಿನಿಮಾ ಶೂಟಿಂಗ್‌ ಮುಗಿಸಿದ್ದಲ್ಲದೇ ಸೈಲೆಂಟಾಗಿ ಟೋಬಿ ಸಿನಿಮಾ ಕೆಲಸವನ್ನೂ ಮುಗಿಸಿದ್ದಾರೆ.

ಆದಷ್ಟು ಕಡಿಮೆ ಬಜೆಟ್ ನಲ್ಲಿ ಚಿತ್ರೀಕರಣ ಮುಗಿಸುವುದು ರಾಜ್‌ ಬಿ ಶೆಟ್ಟಿ ಶೈಲಿ. ಅದೇ ಪ್ರಕಾರ ಅವರು ಸ್ವಾತಿ ಮುತ್ತಿನ ಮಳೆ ಸಿನಿಮಾ ಶೂಟಿಂಗ್‌ ಮುಗಿಸಿದ್ದಲ್ಲದೇ ಸೈಲೆಂಟಾಗಿ ಟೋಬಿ ಸಿನಿಮಾ ಕೆಲಸವನ್ನೂ ಮುಗಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟದಾರಿಯನ್ನು ರಾಜ್‌ ಕಂಡುಕೊಂಡಂತಿದೆ.

ರಾಜ್ ಬಿ ಶೆಟ್ಟಿ ಅವರು ರಿವೇಂಜ್ ಸ್ಟೋರಿ ಸಿನಿಮಾ ಬಗ್ಗೆ ನಾವು ಈ ಹಿಂದೆ ವರದಿಯಾಗಿತ್ತು, ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಅವರ ಸಹ ನಿರ್ದೇಶತ ಬಾಸಿಲ್ ಅಲ್ಚಕ್ಕಲ್ ನಿರ್ದೇಶಿಸಿದ್ದಾರೆ. ಟೋಬಿ ಎಂಬ ಟೈಟಲ್ ನ ಈ ಚಿತ್ರಕ್ಕೆ ರಾಜ್ ಕಥೆ  ಬರೆದಿದ್ದು ಪ್ರಮುಖ ಪಾತ್ರವನ್ನು ಸಹ ನಿರ್ವಹಿಸುತ್ತಿದ್ದಾರೆ.

ಇತ್ತೀಚಿನ ಸಂಗತಿಯೆಂದರೆ, ನಿರ್ಮಾಪಕರು ಚೈತ್ರ ಆಚಾರ್ (ಸಪ್ತ ಸಾಗರದಾಚೆ ಎಲ್ಲೋ) ಮತ್ತು ಸಂಯುಕ್ತ ಹೊರ್ನಾಡ್ (ಲವ್ ಬರ್ಡ್ಸ್) ಅವರನ್ನು ನಾಯಕಿಗಳಾಗಿ ಆಯ್ಕೆ ಮಾಡಿದ್ದಾರೆ. ಕುತೂಹಲಕಾರಿಯಾಗಿ, ಬಜೆಟ್ ನಿರ್ಬಂಧಗಳೊಂದಿಗೆ ಚಿತ್ರಗಳಲ್ಲಿ ಕೆಲಸ ಮಾಡಲು ಹೆಸರುವಾಸಿಯಾದ ರಾಜ್, ದೊಡ್ಡ ಕ್ಯಾನ್ವಾಸ್‌ನಲ್ಲಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದ ಬಂಡವಾಳಕ್ಕಿಂತ ಟೋಬಿಯ ಸಿನಿಮಾ ಬಜೆಟ್ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ತಮ್ಮ ಪ್ರಾಜೆಕ್ಟ್‌ಗಳಿಗೆ ತಾವೇ ಸ್ಟಂಟ್‌ ಕೊರಿಯೋಗ್ರಾಫ್ ಮಾಡಲು ಹೆಸರುವಾಸಿಯಾಗಿರುವ ರಾಜ್, ಈ ಬಾರಿ ಫೈಟ್ ಸೀಕ್ವೆನ್ಸ್‌ಗಳನ್ನು ನಿರ್ವಹಿಸಲು ಸ್ಟಂಟ್ ಮಾಸ್ಟರ್ ನೇಮಿಸಿಕೊಂಡಿದ್ದಾರೆ. ಇದು ಪ್ರೇಕ್ಷಕರಿಗೆ ಹೊಸ ಅನುಭವವಾಗಲಿದೆ.

ಮೊನ್ನೆಯಷ್ಟೇ ಸಿನಿಮಾದ ಘೋಷಣೆ ಮಾಡುವಾಗ ‘ಕಲಾವಿದನಿಗೆ ನೋವು ಕೊಟ್ಟಾಗ ಕವಿತೆಯೊಂದು ಬರುತ್ತೆ ಎಂಬ  ಎಂಬ ಗೂಢಾರ್ಥ ಸಂದೇಶವನ್ನು ರಾಜ್ ಬಿ ಶೆಟ್ಟಿ ಹಾಕಿದ್ದರು. ಹೀಗಾಗಿ ರಾಜ್ ಬರೆದಿರುವ ಈ ಕಥೆಯಲ್ಲಿ ಏನಾದರೂ ಹೊಸತು ಇರಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.  ಟೋಬಿ ಒಂದು ಕಾಲ್ಪನಿಕ ಕಥೆಯಾಗಿದ್ದು, ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣವಿರುವ ಟೋಬಿಗೆ ಮಿಥುನ್ ಮುಂಕುಂದನ್ ಸಂಗೀತ ನೀಡಿದ್ದಾರೆ.

ರಾಜ್ ಬಿ ಶೆಟ್ಟಿ ಸ್ವಾತಿ ಮುತ್ತಿನ ಮಳೆ ಹನಿ ಪೂರ್ಣಗೊಳಿಸಿದ್ದಾರೆ, ಇದು ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಟಿ ರಮ್ಯಾ ಅವರ ಮೊದಲ ನಿರ್ಮಾಣವಾಗಿದೆ. ಚಿತ್ರವು ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.

ಇದರ ಜೊತೆಗೆ ನಿರ್ದೇಶಕರು ಮೊದಲ ಮಲಯಾಳಂ ಚಿತ್ರ ರುಧಿರಾಮ್‌ನಲ್ಲಿ  ಕೆಲಸ ಮಾಡುತ್ತಿದ್ದಾರೆ.  ಏಪ್ರಿಲ್ ಮೊದಲ ವಾರದವರೆಗೆ ಕೇರಳದಲ್ಲಿ ಬೀಡುಬಿಟ್ಟಿದ್ದಾರೆ. ರಾಜ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ '45' ಭಾಗವಾಗಿದೆ,  ಇದರಲ್ಲಿ ಶಿವರಾಜಕುಮಾರ್ ಮತ್ತು ಉಪೇಂದ್ರ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT