ಅಜಯ್ ರಾವ್ - ಅರ್ಚನಾ ಜೋಯಿಸ್ 
ಸಿನಿಮಾ ಸುದ್ದಿ

ಅಜಯ್ ರಾವ್ ನಟನೆಯ ‘ಯುದ್ಧಕಾಂಡ’ಕ್ಕೆ ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಆಯ್ಕೆ

ಪವನ್ ಭಟ್ (ಕಟಿಂಗ್ ಶಾಪ್) ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ವಕೀಲರಾಗಿ ಮತ್ತು ಸುಪ್ರಿತಾ ಸತ್ಯನಾರಾಯಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. "ಹೊಂದಿಸಿ ಬರೆಯಿರಿ" ಚಿತ್ರದ ನಟಿ ಅರ್ಚನಾ ಜೋಯಿಸ್ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

'ಯುದ್ಧಕಾಂಡ' ಚಿತ್ರದ ನಾಯಕ ಹಾಗೂ ನಿರ್ಮಾಪಕರಾಗಿರುವ ಅಜಯ್ ರಾವ್ ಅವರು ಶೇ 50ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಪವನ್ ಭಟ್ (ಕಟಿಂಗ್ ಶಾಪ್) ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ವಕೀಲರಾಗಿ ಮತ್ತು ಸುಪ್ರಿತಾ ಸತ್ಯನಾರಾಯಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. "ಹೊಂದಿಸಿ ಬರೆಯಿರಿ" ಚಿತ್ರದ ನಟಿ ಅರ್ಚನಾ ಜೋಯಿಸ್ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಅಜಯ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಆದರೆ, ಪಾತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ. 'ಅರ್ಚನಾ ಜೋಯಿಸ್ ಅವರು ನಮ್ಮ ಚಿತ್ರದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಕೆಜಿಎಫ್‌ನಲ್ಲಿನ ಅವರ ಪಾತ್ರ ಮತ್ತು ಅಭಿನಯಕ್ಕಾಗಿ ಸ್ಕ್ರಿಪ್ಟಿಂಗ್ ಹಂತದಲ್ಲಿಯೇ ಅವರನ್ನು ಯುದ್ಧಕಾಂಡ ಸಿನಿಮಾಗೆ ಆಯ್ಕೆ ಮಾಡಲಾಯಿತು' ಎನ್ನುತ್ತಾರೆ.

ಬಜೆಟ್ ಅಥವಾ ಶೂಟಿಂಗ್ ದಿನಗಳ ಸಂಖ್ಯೆಗೆ ಮಿತಿಯನ್ನು ಹಾಕಿಲ್ಲ ಎನ್ನುವ ಅಜಯ್, 'ನಾವು ಕೇವಲ ಒಂದು ಶಾಟ್‌ಗಾಗಿ ನಾಲ್ಕು ದಿನಗಳನ್ನು ತೆಗೆದುಕೊಂಡಿದ್ದೇವೆ. ಪ್ರತಿ ಬಾರಿ, ಏನಾದರೂ ತಪ್ಪಾಗುತ್ತಿತ್ತು. ಆದರೆ, ನಾವು ಸರಿಯಾದ ಶಾಟ್ ಅನ್ನು ಪಡೆಯುವವರೆಗೂ ನಾವು ಬಿಡಲಿಲ್ಲ. ಇದನ್ನು ಬೇರೆ ನಿರ್ಮಾಪಕರು ನಿಭಾಯಿಸಿದ್ದರೆ, ಇದು ಸಾಧ್ಯವಾಗುತ್ತಿರಲಿಲ್ಲ' ಎಂದು ಹೇಳುತ್ತಾರೆ.

ಅಜಯ್ ಜೂನ್ ಮಧ್ಯದಲ್ಲಿ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಯೋಜಿಸಿದ್ದಾರೆ. ಶೇ 90 ರಷ್ಟು ಚಲನಚಿತ್ರದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿಯೇ ನಡೆಸಲು ಯೋಜಿಸಲಾಗಿದೆ.

ರವಿಚಂದ್ರನ್ ಅಭಿನಯದ 1989 ರ ಚಲನಚಿತ್ರದ ಶೀರ್ಷಿಕೆಯನ್ನೇ ಎರವಲು ಪಡೆದುಕೊಂಡಿರುವ ಸಿನಿಮಾಗೆ ಕೆಬಿ ಪ್ರವೀಣ್ ಅವರ ಸಂಗೀತ ಮತ್ತು ಕಾರ್ತಿಕ್ ಶರ್ಮಾ ಅವರ ಛಾಯಾಗ್ರಹಣವನ್ನು ಹೊಂದಿದೆ. 

ಈಮಧ್ಯೆ, ನಟ ಅಜಯ್ ಅವರು ಮಂಜು ಸ್ವರಾಜ್ ಅವರೊಂದಿಗೆ ಮತ್ತೊಂದು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಇದು ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಮೇ ಮೂರನೇ ವಾರದಲ್ಲಿ ಚಿತ್ರೀಕರಣವನ್ನು ಪುನರಾರಂಭಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT