ಪ್ರವೀರ್ ಶೆಟ್ಟಿ 
ಸಿನಿಮಾ ಸುದ್ದಿ

ವಿಷಯ ಆಧಾರಿತ ಚಿತ್ರಗಳು ಇಂದು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡುತ್ತವೆ: ನಟ ಪ್ರವೀರ್ ಶೆಟ್ಟಿ

ಕರಾವೆ ಕಾರ್ಯಕರ್ತ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ತಮ್ಮ ತಂದೆಗಿಂತ ಭಿನ್ನವಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸೈರನ್ ಚಿತ್ರದ ಮೂಲಕ ಹೀರೋ ಆಗಿ ಹೊರಹೊಮ್ಮುತ್ತಿದ್ದಾರೆ.

ಕರಾವೆ ಕಾರ್ಯಕರ್ತ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ತಮ್ಮ ತಂದೆಗಿಂತ ಭಿನ್ನವಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸೈರನ್ ಚಿತ್ರದ ಮೂಲಕ ಹೀರೋ ಆಗಿ ಹೊರಹೊಮ್ಮುತ್ತಿದ್ದಾರೆ.

ಪ್ರವೀರ್ ನಟನಾಗುವ ಕನಸು ಕಂಡಿದ್ದರು. ಸ್ಕಿಟ್‌ಗಳು, ನೃತ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಬಾಲ್ಯದ ಆಸಕ್ತಿಗಳು ನಟನೆಯನ್ನು ಮುಂದುವರಿಸುವ ಅವರ ಅಚಲ ನಿರ್ಣಯವನ್ನು ಹೇಗೆ ಗಟ್ಟಿಗೊಳಿಸಿದವು ಎಂಬುದನ್ನು ನವ ನಟ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.

ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಹೊಂದರು. ವೈದ್ಯನಾಗಬೇಕೆಂಬ ತನ್ನ ತಂದೆಯ ಆಸೆಯನ್ನು ಧೈರ್ಯದಿಂದ ಧಿಕ್ಕರಿಸಿದರು. ಬದಲಿಗೆ ತನ್ನದೇ ಆದ ಛಾಪು ಮೂಡಿಸುವ ಗುರಿಯನ್ನು ಹೊಂದಿರುವ ನಟನ ಹಾದಿಯನ್ನು ಆರಿಸಿಕೊಂಡರು. 

ಯಶ್ ಅವರ ಆಯಸ್ಕಾಂತಿ ವರ್ಚಸ್ಸು ಮತ್ತು ಖಡಕ್ ಡೈಲಾಗ್ ಡೆಲಿವರಿ ಅವರ ಬಗ್ಗೆ ಅಭಿಮಾನ ಹೆಚ್ಚಾಯಿತು. ಪ್ರವೀರ್ ಒಂದು ಘಟನೆಯನ್ನು ಹಂಚಿಕೊಂಡಿದ್ದು ನಾನು ರಾಕಿಂಗ್ ಸ್ಟಾರ್ ಅವರ ಕಟ್ಟಾ ಅಭಿಮಾನಿ. ರಾಜಾ ಹುಲಿ ಬಿಡುಗಡೆಯಾದಾಗ ನನಗೆ ಸ್ಪಷ್ಟವಾಗಿ ನೆನಪಿದೆ. ನಾನು ನನ್ನ ಕೂದಲಿಗೆ ಬಣ್ಣ ಹಚ್ಚಿದ್ದೆ ಅದು ನನ್ನ ಟೀಚರ್ ಗೆ ಸರಿಹೊಂದಲಿಲ್ಲ. ಹೀಗಾಗಿ ನನ್ನ ತಂದೆಯನ್ನು ಕರೆ ತರುವಂತೆ ಒತ್ತಾಯಿಸಿದರು. ಆ ಸಮಯದಲ್ಲಿ, ನಾನು ತಪ್ಪು ದಾರಿಯಲ್ಲಿ ಹೋಗುತ್ತಿದ್ದೇನೆ ಎಂದು ಆಕೆ ನನ್ನ ತಂದೆಗೆ ದೂರಿದರು. ನನ್ನ ಕೂದಲಿಗೆ ಕತ್ತರಿ ಹಾಕಿದೆ. ಆದರೂ ನಟನೆಯಲ್ಲಿ ನನ್ನ ಒಲವು ಹಾಗೆ ಉಳಿಯಿತು ಎಂದು ಹೇಳಿದರು. 

ನಟನೆಗೆ ಕೇವಲ ಕನಸುಗಳಿದ್ದರೆ ಸಾಲುದು. ಅದಕ್ಕಿಂತ ಹೆಚ್ಚಿನ ಅವಶ್ಯಕತೆಯಿದೆ ಎಂದು ಅರ್ಥಮಾಡಿಕೊಂಡ ಅವರ ತಂದೆ ಅದನ್ನು ವೃತ್ತಿಯಾಗಿ ಮುಂದುವರಿಸುವ ಮೊದಲು ನಟನೆಯನ್ನು ಅಧ್ಯಯನ ಮಾಡಲು ಸಲಹೆ ನೀಡಿದರು. ಪ್ರವೀರ್ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಔಪಚಾರಿಕ ಶಿಕ್ಷಣದ ಮಹತ್ವವನ್ನು ಅರಿತುಕೊಂಡರು. 

ನನ್ನನ್ನು ಅನುಪಮ್ ಖೇರ್ ಸ್ಕೂಲ್ ಆಫ್ ಆಕ್ಟಿಂಗ್‌ಗೆ ಕಳುಹಿಸಿದರು. ಅಲ್ಲಿ ನಾನು ನಟನೆಯ ಪ್ರಥಮ ಪಾಠಗಳನ್ನು ಕಲಿತೆ. ನಟನಾ ಶಾಲೆಗಳು ಮಾನ್ಯತೆ ನೀಡುವಾಗ, ಇದು ಅಂತಿಮವಾಗಿ ನೀವು ನಟನಾಗಿ ನಿಮ್ಮನ್ನು ಹೇಗೆ ಸ್ಥಾಪಿಸಲು ಬಯಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ನವ ನಟ ಹೇಳಿದರು. ನಾನು ಪೊಗರು ಚಿತ್ರದ ಅಂತಿಮ ಹಂತದ ಶೆಡ್ಯೂಲ್‌ನಲ್ಲಿ ನಂದ ಕಿಶೋರ್‌ಗೆ ಸಹಾಯ ಮಾಡುವ ಅವಕಾಶ ಸಿಕ್ಕಿತು. 

ಏತನ್ಮಧ್ಯೆ, ನನ್ನ ಚೊಚ್ಚಲ ಚಿತ್ರಕ್ಕೆ ಸರಿಯಾದ ರೀತಿಯ ಸ್ಕ್ರಿಪ್ಟ್‌ಗಾಗಿ ನಾನು ಹುಡುಕುತ್ತಿದ್ದೆ. ಕಳೆದ ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಿರ್ದೇಶಕ ರಾಜಾ ವೆಂಕಯ್ಯ ಬಲವಾದ ಸ್ಕ್ರಿಪ್ಟ್‌ನೊಂದಿಗೆ ಬಂದರು. ಸೈರನ್ ನನ್ನ ನಟನೆಯ ಜೊತೆಗೆ ನಿರ್ದೇಶಕರನ್ನೂ ಸಹ ಗುರುತಿಸುತ್ತದೆ ಎಂದು ಈ ವಾರ ಬಿಡುಗಡೆಯಾಗುತ್ತಿರುವ ಸೈರನ್ ಚಿತ್ರದ ಬಗ್ಗೆ ಪ್ರವೀರ್ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT