ರೋಹಿತ್ 
ಸಿನಿಮಾ ಸುದ್ದಿ

'ರಕ್ತಾಕ್ಷ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಮಾಡೆಲ್ ರೋಹಿತ್!

ರೂಪದರ್ಶಿ ಮತ್ತು ರಂಗಭೂಮಿ ಕಲಾವಿದ ರೋಹಿತ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಹವಣಿಸುತ್ತಿದ್ದಾರೆ. ಬಿಡುಗಡೆಯಾಗದ ಚಿತ್ರ ಎಬಿ ಪಾಸಿಟಿವ್‌ನಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು.

ರೂಪದರ್ಶಿ ಮತ್ತು ರಂಗಭೂಮಿ ಕಲಾವಿದ ರೋಹಿತ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಹವಣಿಸುತ್ತಿದ್ದಾರೆ. ಬಿಡುಗಡೆಯಾಗದ ಚಿತ್ರ ಎಬಿ ಪಾಸಿಟಿವ್‌ನಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು.

ಉದಯೋನ್ಮುಖ ನಟ ಈಗ ತನ್ನ ಮುಂದಿನ ಸಿನಿಮಾ ರಕ್ತಾಕ್ಷ ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ.  ವಾಸುದೇವ ಎಸ್‌ಎನ್ ನಿರ್ದೇಶನದ ಈ ಚಿತ್ರವು ಸಾಯಿ ಪ್ರೊಡಕ್ಷನ್ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗಿದೆ, ರೋಹಿತ್ ಅವರ ಚೊಚ್ಚಲ ಚಿತ್ರವಾಗಿದ್ದುಬಿಡುಗಡೆಗೆ ಸಜ್ಜಾಗಿದೆ.

ಮರ್ಡರ್ ಮಿಸ್ಟ್ರಿ ಕುರಿತ ಸಿನಿಮಾ ಇದಾಗಿದೆ. ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದರ್ ದಾಸ್ ದಾಸ್ಮೋಡ ಸಂಗೀತದ ಟೈಟಲ್ ಟ್ರ್ಯಾಕ್‌ಗೆ ವಸಿಷ್ಠ ಸಿಂಹ ಧ್ವನಿಯಾಗಿದ್ದಾರೆ. ಸಿನಿಮಾ ಬಗ್ಗೆ ಹಾಗೂ ಹಾಡಿನ ಬಗ್ಗೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮ ಸಂವಾದದ ಸಂದರ್ಭದಲ್ಲಿ, ಬಾಲ್ಯದಿಂದಲೂ ಕಲಾವಿದನಾಗಬೇಕು ಎಂಬ ಕನಸಿತ್ತು. ಇದು ಈಗ ನನಸಾಗಿದೆ. 3 ತಿಂಗಳಲ್ಲಿ ಲುಕ್, ಫಿಸಿಕ್ಸ್ ಬದಲಾಯಿಸಲು ಹೇಳಿದರೆ ಬದಲಾಯಿಸುತ್ತೇನೆ. ಈ ಚಿತ್ರಕ್ಕಾಗಿ ಎರಡರಿಂದ ಮೂರು ಬಾರಿ ಬಾಡಿ ಟ್ರಾನ್ಸ್ಫರ್ಮೇಶನ್ ಮಾಡಿದ್ದೇನೆ.

ರಕ್ತಾಕ್ಷ ಚಿತ್ರದ ಪೋಸ್ಟರ್

ನಾನು ರೀಲ್ ಹೀರೊ ಆಗಲು ಬಂದಿಲ್ಲ. ರಿಯಲ್ ಹೀರೊ ಆಗಲು ಬಂದಿದ್ದೇನೆ. ನನ್ನ ಕೆಲಸ ಮುಖಾಂತರ ಎಲ್ಲರಿಗೂ ಪರಿಚಯವಾಗಬೇಕು. ಉತ್ತರಕರ್ನಾಟಕದಲ್ಲಿಯೂ ತುಂಬಾ ಟ್ಯಾಲೆಂಟ್ಸ್ ಇದ್ದಾರೆ. ಅವರಿಗೆಲ್ಲಾ ನನ್ನ ಕೈಯಲ್ಲಾದ ಅವಕಾಶ ಕೊಡುತ್ತೇನೆ. ಈ ಚಿತ್ರದಲ್ಲಿ ಕೆಲವೊಂದು ಸತ್ಯಘಟನೆಯನ್ನು ಉಲ್ಲೇಖ ಮಾಡಲಾಗಿದೆʼʼ ಎಂದರು.

ರಾಯಚೂರಿನ ಮುದಗಲ್ ಎಂಬ ಪಟ್ಟಣದವರಾದ ಅವರು ಸಿನಿಮಾ ಲೋಕದಲ್ಲಿ ಗಣನೀಯ ಸಾಧನೆ ಮಾಡುವ ಹಂಬಲ ಹೊಂದಿದ್ದಾರೆ. ರೋಹಿತ್ ಚಿತ್ರವು ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಕುತೂಹಲಕಾರಿ ಪರಿಕಲ್ಪನೆಗಳನ್ನು ಒಳಗೊಂಡಿರುವ ಥ್ರಿಲ್ಲರ್ ಆಗಿರುತ್ತದೆ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT