ಸಿನಿಮಾ ಸುದ್ದಿ

ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರಕ್ಕೆ ಯಶಸ್ ಸೂರ್ಯ ಆಯ್ಕೆಯಾಗಿದ್ದೇಗೆ; ನಟ ಹೇಳಿದ್ದೇನು?

Ramyashree GN

ಯುಗ ಯುಗಗಳೇ ಸಾಗಲಿ ಎಂಬ ಸಿನಿಮಾ ಮೂಲಯ ತಮ್ಮ ನಟನಾ ಪಯಣ ಆರಂಭಿಸಿದ ಯಶಸ್ ಸೂರ್ಯ ಅವರು, ತಮ್ಮ 15 ವರ್ಷಗಳ ಪಯಣದಲ್ಲಿ ಸುಮಾರು 23 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ಟಾರ್‌ಡಮ್ ಸಾಧಿಸುವ ಗುರಿಯನ್ನು ಹೊಂದಿರುವ ಅವರು, ಚಿತ್ರರಂಗದಲ್ಲಿ ಅದೃಷ್ಟದ ಪಾತ್ರ ಮತ್ತು ಸರಿಯಾದ ಅವಕಾಶಗಳನ್ನು ಪಡೆದುಕೊಳ್ಳುವುದು ಮುಖ್ಯ. ಅಲ್ಲದೆ, ಪ್ರೇಕ್ಷಕರ ಮೆಚ್ಚುಗೆ ಮತ್ತು ಕಮರ್ಷಿಯಲ್ ಸಿನಿಮಾದ ಯಶಸ್ಸು ಎರಡೂ ಅಗತ್ಯವಾಗಿರುತ್ತದೆ ಎಂದು ಒತ್ತಿ ಹೇಳುತ್ತಾರೆ. ನವೆಂಬರ್ 10 ರಂದು ಬಿಡುಗಡೆಯಾಗಲಿರುವ ಅವರ ಮುಂಬರುವ ಚಿತ್ರ 'ಗರಡಿ' ಮೇಲೆ ಸೂರ್ಯ ಭರವಸೆ ಇಟ್ಟುಕೊಂಡಿದ್ದಾರೆ.

ಗರಡಿ ಚಿತ್ರದಲ್ಲಿ ಸೂರ್ಯ
<strong>ಗರಡಿ ಚಿತ್ರದಲ್ಲಿ ಸೂರ್ಯ</strong>

ಎಷ್ಟೋ ಬಾರಿ ಚಿತ್ರರಂಗದಿಂದ ಹಿಂದೆ ಸರಿಯಲು ಯೋಚಿಸಿದ ಸಂದರ್ಭಗಳಿವೆ ಎನ್ನುವ ಅವರು, 'ಪ್ರತಿ ಬಾರಿ ನಾನು ವಿಫಲವಾದಾಗಲೆಲ್ಲಾ ನಾನು ಚಿತ್ರರಂಗದಿಂದ ಹಿಂದೆ ಸರಿಯಲು ಬಯಸಿದ್ದೆ. ಆದರೆ, ಅದೃಷ್ಟ ನನ್ನನ್ನು ಮರಳಿ ಕರೆತಂದಿತು. ಇತ್ತೀಚೆಗೆ, ನನ್ನ ಮದುವೆಯ ನಂತರವೂ ನಾನು ದೂರ ಹೋಗಬೇಕೆಂದು ಯೋಚಿಸಿದೆ. ಆದರೆ, ಮತ್ತೆ ನನ್ನ ವೃತ್ತಿ ಮತ್ತು ನನ್ನ ಜೀವನಕ್ಕೆ ಹೆಗಲು ನೀಡಿದ ದರ್ಶನ್ ಸರ್ ನನ್ನ ಬೆಂಬಲಕ್ಕೆ ನಿಂತರು. ಅವರು ಗರಡಿ ಸಿನಿಮಾಗಾಗಿ ಯೋಗರಾಜ್ ಭಟ್ ಅವರಿಗೆ ನನ್ನನ್ನು ಉಲ್ಲೇಖಿಸಿದರು ಮತ್ತು ನಿರ್ಮಾಪಕ ಬಿಸಿ ಪಾಟೀಲ್ ಅವರೊಂದಿಗೆ ಚರ್ಚೆಗಳು ನಡೆದವು. ಅಂತಿಮವಾಗಿ ನನ್ನನ್ನು ಚಿತ್ರಕ್ಕೆ ಆಯ್ಕೆಮಾಡಲಾಯಿತು. ಚಿತ್ರಕ್ಕೆ ನಾನು ಆಯ್ಕೆಯಾದರೆ, ಆ ಚಿತ್ರದಲ್ಲಿ ವಿಶೇಷ ಪಾತ್ರ ಮಾಡುವುದಾಗಿ ದರ್ಶನ್ ಸರ್ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಮಾತು ನೀಡಿದರು' ಎಂದು ಸೂರ್ಯ ಅವರು ಅವಕಾಶವನ್ನು ಹೇಗೆ ಪಡೆದುಕೊಂಡರು ಎಂಬುದನ್ನು ವಿವರಿಸುತ್ತಾರೆ.

'ಈ ಚಿತ್ರವು ನನಗೆ ಹೆಸರಾಂತ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೆಚ್ಚುಗೆ ಪಡೆದ ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ಮತ್ತು ವಿ ಹರಿಕೃಷ್ಣ ಸಂಗೀತ ನಿರ್ದೇಶಕರಾಗಿ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ದರ್ಶನ್ ಸರ್ ಜೊತೆಗೆ ಕೆಲಸ ಮಾಡುವ ಅವಕಾಶ ನೀಡಿತು.  ಗರಡಿ ಸಿನಿಮಾ ನನ್ನ ವೃತ್ತಿಜೀವನದಲ್ಲಿ ಮಾಡು ಇಲ್ಲವೇ ಮಡಿಯುವ ಕ್ಷಣವಾಗಿದೆ. ಹೀಗಾಗಿ, ನಾನು ಯಾವುದೇ ತಪ್ಪುಗಳನ್ನು ಮಾಡದಿರಲು ನಿರ್ಧರಿಸಿದ್ದೇನೆ' ಎಂದು ಅವರು ಹೇಳುತ್ತಾರೆ.

ಗರಡಿಯಲ್ಲಿನ ತನ್ನ ಪಾತ್ರವನ್ನು ವಿವರಿಸುವ ಅವರು, 'ಅದು ತನ್ನ ನಿಜ ಜೀವನದ ಅನುಭವಗಳೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ. ನಾನು ನಿರೂಪಿಸುವ ಪಾತ್ರವು ಪದೇ ಪದೆ ವೈಫಲ್ಯಗಳನ್ನು ಎದುರಿಸುತ್ತಿರುವ ವ್ಯಕ್ತಿಯದ್ದಾಗಿದ್ದು, ಯಶಸ್ಸನ್ನು ಸಾಧಿಸುವಲ್ಲಿ ಅಚಲವಾದ ವಿಶ್ವಾಸ ಉಳಿಸಿಕೊಳ್ಳುತ್ತದೆ. ಪಾತ್ರವು ಮುಗ್ಧತೆಯನ್ನು ಮತ್ತು ಕುಸ್ತಿ ಪರಿಸರದಲ್ಲಿ ಕೆಲಸ ಮಾಡುವ ವಿನಮ್ರ ವ್ಯಕ್ತಿಯನ್ನು ಚಿತ್ರಿಸುತ್ತದೆ. ವೈಯಕ್ತಿಕ ಯಶಸ್ಸಿನತ್ತ ಪ್ರಯಾಣವನ್ನು ಕೊಂಡೊಯ್ಯುತ್ತದೆ' ಎಂದು ಅವರು ಹೇಳುತ್ತಾರೆ.

ಗರಡಿ ಚಿತ್ರದ ಸ್ಟಿಲ್

ಗರಡಿಯಲ್ಲಿನ ಪಾತ್ರಕ್ಕಾಗಿ ಮಾಡಿದ ತಯಾರಿ ಕುರಿತು ಮಾತನಾಡುವ ಅವರು, 'ನನಗೆ ಈ ಕಲಾ ಪ್ರಕಾರದ ಪರಿಚಯವಿಲ್ಲದಿದ್ದರೂ, ನಾನು ಕಿಕ್‌ಬಾಕ್ಸಿಂಗ್, ಮುಯೆ ಥಾಯ್ ಮತ್ತು ಕರಾಟೆಯಲ್ಲಿ ಮೂಲಭೂತ ತರಬೇತಿಯನ್ನು ಹೊಂದಿದ್ದೇನೆ. ಆದಾಗ್ಯೂ, ಕುಸ್ತಿಯು ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಬೇಡುತ್ತದೆ. ಇದೊಂದು ಅನನ್ಯ ಸವಾಲನ್ನು ಒಡ್ಡುತ್ತದೆ. ನಾನು ಎರಡು ತಿಂಗಳ ವಿಶೇಷ ತರಬೇತಿಯನ್ನು ಪಡೆದುಕೊಂಡಿದ್ದೇನೆ. ನಿಜವಾದ ಕುಸ್ತಿಪಟುಗಳ ಮಾರ್ಗದರ್ಶನದೊಂದಿಗೆ ಸೆಟ್‌ನಲ್ಲಿ ನನ್ನ ಕೌಶಲ್ಯಗಳನ್ನು ಮತ್ತಷ್ಟು ಪರಿಷ್ಕರಿಸಿದ್ದೇನೆ. ನಾನು ತಂಡದ ಇತರರೊಂದಿಗೆ ನಟನಾ ತರಗತಿಗಳಿಗೆ ಹಾಜರಾಗಿದ್ದೇನೆ. ಡೈಲಾಗ್‌ಗಳನ್ನು ಅಭ್ಯಾಸ ಮಾಡುತ್ತಿದ್ದೆ ಮತ್ತು ಶೂಟಿಂಗ್ ಸಮಯದಲ್ಲಿ ನಿಖರವಾಗಿರುತ್ತಿದ್ದೆ. ಈ ಪ್ರಯತ್ನ ಬೆಳ್ಳಿತೆರೆಯಲ್ಲಿ ಕಾಣಿಸುವುದು ಖಚಿತ' ಎನ್ನುತ್ತಾರೆ.

SCROLL FOR NEXT