ಯಶ್ ಮತ್ತು ರವಿ ತೇಜಾ 
ಸಿನಿಮಾ ಸುದ್ದಿ

ಕೆಜಿಎಫ್ ಸಿನಿಮಾ ಸಿಗುವುದಕ್ಕೆ ಯಶ್ ಬಹಳ ಲಕ್ಕಿ: ರಾಕಿ ಬಾಯ್ ಬಗ್ಗೆ ರವಿ ತೇಜಾ ಉಡಾಫೆ ಮಾತು; ಅಭಿಮಾನಿಗಳ ಬೇಸರ

ಟಾಲಿವುಡ್‌ ನಟ ರವಿ ತೇಜಾ ಅವರಿಗೆ ಏನ್ ಆಗಿದೆ? ಯಶ್ ಬಗ್ಗೆ ಕೇರ್‌ಲೆಸ್‌ ಆಗಿಯೇ ಮಾತನಾಡಿದ್ದಾರೆ. ಇದು ಯಶ್ ಫ್ಯಾನ್ಸ್‌ಗೆ ಬೇಸರ ತರಿಸೋ ವಿಷಯವೇ ಆಗಿದೆ. ಲಕ್ ಬೈ ಚಾನ್ಸ್ ಯಶ್ ಸೂಪರ್ ಸ್ಟಾರ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಟಾಲಿವುಡ್‌ ನಟ ರವಿ ತೇಜಾ ಅವರಿಗೆ ಏನ್ ಆಗಿದೆ? ಯಶ್ ಬಗ್ಗೆ ಕೇರ್‌ಲೆಸ್‌ ಆಗಿಯೇ ಮಾತನಾಡಿದ್ದಾರೆ. ಇದು ಯಶ್ ಫ್ಯಾನ್ಸ್‌ಗೆ ಬೇಸರ ತರಿಸೋ ವಿಷಯವೇ ಆಗಿದೆ. ಲಕ್ ಬೈ ಚಾನ್ಸ್ ಯಶ್ ಸೂಪರ್ ಸ್ಟಾರ್ ಆಗಿದ್ದಾರೆ ಎಂದು ಹೇಳಿದ್ದಾರೆ. ರವಿ ತೇಜಾ ಮಾತನಾಡಿರೋ ವಿಡಿಯೋ ವೈರಲ್ ಆಗುತ್ತಿದೆ.

ಬಾಹುಬಲಿ' ಸರಣಿ ನಂತರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಆ ಮಟ್ಟಿಗೆ ಸಕ್ಸಸ್ ಕಂಡ ಸಿನಿಮಾ 'KGF'. ಬರೀ ಕನ್ನಡದಲ್ಲಿ ಮಾತ್ರ ಮಾಡೋಣ ಎಂದುಕೊಂಡಿದ್ದ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದವರು ಯಶ್. ಇನ್ನು ರಾಕಿಭಾಯ್ ಆಗಿ ರಾಕಿಂಗ್ ಸ್ಟಾರ್ ಪರ್ಫಾರ್ಮನ್ಸ್‌ನ ಬಾಲಿವುಡ್ ಸೂಪರ್‌ ಸ್ಟಾರ್‌ಗಳೇ ಮೆಚ್ಚಿ ಕೊಂಡಾಡಿದ್ದಾರೆ.

ಆದರೆ ತೆಲುಗು ನಟ ಹಿಂದಿ ಸಂದರ್ಶನವೊಂದರಲ್ಲಿ ಯಶ್ ಬಗ್ಗೆ ನೀಡಿರುವ ಹೇಳಿಕೆ ಅಭಿಮಾನಿಗಳನ್ನು ಕೆರಳಿಸಿದೆ. 'ಟೈಗರ್ ನಾಗೇಶ್ವರ್‌ರಾವ್' ಸದ್ಯ ರವಿ ತೇಜಾ ನಟಿಸಿದ್ದಾರೆ. ದಸರಾ ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಸಿನಿಮಾ ಪ್ರಚಾರದಲ್ಲಿ ರವಿತೇಜ ಬ್ಯುಸಿಯಾಗಿದ್ದಾರೆ.

ಇತ್ತೀಚೆಗೆ ಹಿಂದಿ ಸಂದರ್ಶನದ ರ್ಯಾಪಿಡ್ ಫೈಯರ್ ರೌಂಡ್‌ನಲ್ಲಿ ಯಶ್ ಬಗ್ಗೆ ರವಿತೇಜಾ ಉಡಾಫೆಯಿಂದ ಮಾತನಾಡಿದ್ದಾರೆ. ಇದು ರಾಕಿಂಗ್ ಸ್ಟಾರ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ರವಿತೇಜಾನ ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದೇ ಈಗ ಹಾಟ್ ಟಾಪಿಕ್ ಆಗಿದೆ. ರವಿತೇಜಾ ತಮ್ಮ ಮಾತನ್ನು ವಾಪಸ್ ಪಡೆಯಬೇಕು. ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಮೊದಲಿಗೆ ರಾಮ್‌ಚರಣ್ ಹೆಸರು ಹೇಳಿದಾಗ ರಾಮ್‌ಚರಣ್ ಡ್ಯಾನ್ಸ್ ಸೂಪರ್ ಎಂದು ರವಿತೇಜಾ ಹೇಳಿದ್ದಾರೆ. ಪ್ರಭಾಸ್ ಹೆಸರು ಬಂದಾಗ ಅವರ ಅಪಿಯರೆನ್ಸ್ ಹಾಗೂ ಡಾರ್ಲಿಂಗ್ ಎಂದಿದ್ದಾರೆ. ರಾಜಮೌಳಿ ಹೆಸರು ಬಂದಾಗ ಅವರ ವಿಷನ್ ಸೂಪರ್ ಎಂದಿದ್ದಾರೆ. ಆದರೆ ಯಶ್ ಹೆಸರು ಕೇಳಿ "ನಾನು ಯಶ್ ಅವರ 'KGF' ಸಿನಿಮಾ ಮಾತ್ರ ನೋಡಿದ್ದೀನಿ" ಎಂದಿದ್ದಾರೆ.

ರವಿತೇಜಾ ಅಷ್ಟೇ ಹೇಳಿದ್ದರೂ ಪರವಾಗಿಲ್ಲ. ಮಾತು ಮುಂದುವರೆಸಿ "KGF ಸಿನಿಮಾ ಸಿಗುವುದಕ್ಕೆ ಯಶ್ ಬಹಳ ಲಕ್ಕಿ" ಎಂದು ಉಡಾಫೆಯಿಂದ ಹೇಳಿದ್ದಾರೆ. ಈ ಮಾತು ರಾಕಿಂಗ್ ಸ್ಟಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!