ಪ್ರಿಯಾಂಕಾ ಉಪೇಂದ್ರ 
ಸಿನಿಮಾ ಸುದ್ದಿ

ನನ್ನ ಮುಂದಿನ ಹಾರರ್ ಚಿತ್ರ ಮತ್ತಷ್ಟು ಭಯಾನಕ: ಪ್ರಿಯಾಂಕಾ ಉಪೇಂದ್ರ

ಮಮ್ಮಿ ಖ್ಯಾತಿಯ ನಿರ್ದೇಶಕ ಲೋಹಿತ್ ಹೊಸ ಹಾರರ್ ಸಿನಿಮಾ ನಿರ್ದೇಶಿಸಿದ್ದು, ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ನಟಿಸಿದ್ದಾರೆ.

ಮಮ್ಮಿ ಖ್ಯಾತಿಯ ನಿರ್ದೇಶಕ ಲೋಹಿತ್ ಹೊಸ ಹಾರರ್ ಸಿನಿಮಾ ನಿರ್ದೇಶಿಸಿದ್ದು, ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ನಟಿಸಿದ್ದಾರೆ.

ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಅವರು ನಿರ್ಮಾಣ ಮಾಡಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲು ರವಿರಾಜ್ ಯೋಜನೆ ಹಾಕಿಕೊಂಡಿದ್ದಾರೆ.

ಚಿತ್ರದ ಶೀರ್ಷಿಕೆ ಇನ್ನೂ ಘೋಷಣೆಯಾಗಿಲ್ಲ. ಆದರೆ, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಿಯಾಂಕಾ ಅವರ ಮುಖದಲ್ಲಿ ರಕ್ತ ಅಂಟಿಕೊಂಡಿರುವುದು, ತೀಕ್ಷ್ಣ ನೋಟದ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಕುತೂಹಲ ಹುಟ್ಟಿಸುವಂತಿದೆ.

ಸಂಪೂರ್ಣ ಚಿತ್ರವನ್ನು ಸಿಸಿಟಿವಿ ಕಾನ್ಸೆಪ್ಟ್ ನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಭಯ ಹುಟ್ಟಿಸುವ ರೀತಿಯ ಕಥೆಯನ್ನು ಹೊಂದಿದೆ ಎಂದು ಚಿತ್ರತಂಡ ತಿಳಿಸಿದೆ.

ಪ್ರಿಯಾಂಕಾ ಉಪೇಂದ್ರ

ಈ ಮೊದಲು ರಾಧಿಕ ಕುಮಾರಸ್ವಾಮಿ ನಿರ್ಮಾಣದ ಸಿನಿಮಾದಲ್ಲಿ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದ ರವಿರಾಜ್ ಅವರು ಹೊಸ ಚಿತ್ರವನ್ನು ಸ್ವತಂತ್ರವಾಗಿ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾ ಕುರಿತು ಮಾತನಾಡಿದ ಪ್ರಿಯಾಂಕಾ ಉಪೇಂದ್ರ ಅವರು, ಮೊದಲ ಹಾರರ್ ಚಿತ್ರಕ್ಕಿಂತಲೂ ಈ ಚಿತ್ರ ಭಯಾನಕವಾಗಿದೆ. ಲೋಹಿತ್ ಅವರ ವಿಭಿನ್ನ ರೀತಿಯ ದೃಷ್ಟಿಯಲ್ಲಿ ಚಿತ್ರವನ್ನು ಹೊರತಲಾಗುತ್ತಿದೆ. ಚಿತ್ರವನ್ನು ಸಂಪೂರ್ಣ ಸಿಸಿಟಿವಿ ಕಾನ್ಸೆಪ್ಟ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಆರಂಭದಲ್ಲಿ ಈ ರೀತಿಯ ಕಾನ್ಸೆಪ್ಟ್ ನಲ್ಲಿ ಚಿತ್ರ ಹೇಗೆ ಸಿದ್ಧವಾಗುತ್ತದೆ ಎಂಬುದ ಬಗ್ಗೆ ಚಿಂತೆಯಿತ್ತು. ಆದರೆ, ಉತ್ತಮವಾಗಿ ಮೂಡಿ ಬಂದಿದೆ ಎಂದು ಹೇಳಿದರು.

ಇದೀ ಸಿನಿಮಾವನ್ನು 30 ದಿನಗಳಲ್ಲಿ ಗೋವಾದಲ್ಲಿ ಚಿತ್ರೀಕರಿಸಲಾಗಿದೆ. ವೈವಿಧ್ಯಮಯ ಪಾತ್ರಗಳ ಅನ್ವೇಷಿಸಲು ಇದು ಉತ್ತಮ ಸಮಯವಾಗಿದೆ. ಸಿಸಿಟಿವಿ ಕಾನ್ಸೆಪ್ಟ್ ಉತ್ತಮವಾಗಿ ಪ್ರತಿಫಲ ನೀಡಲಿದೆ. ಸಿನಿಮಾವು ಪ್ರೇಕ್ಷಕರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಲೋಹಿತ್ ಅವರೊಂದಿಗೆ ಈಗಾಗಲೇ ಒಂದು ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಎರಡನೇ ಚಿತ್ರ ಬಲವಾದ ಬಾಂಧವ್ಯವನ್ನು ನಿರ್ಮಿಸಿದೆ. ನನ್ನ ಕುಟುಂಬದವರಂತೆ ಆಗಿ ಹೋಗಿದ್ದೇವೆ. ಲೋಹಿತ್ ಅವರ ನಿರ್ದೇಶನದೊಂದಿಗೆ ನನ್ನ ಸಿನಿಮಾವನ್ನು ನಿರ್ಮಾಣ ಮಾಡುವ ಚಿಂತನೆಗಳಿತ್ತು. ಆದರೆ, ದುರಾದೃಷ್ಟವಶಾತ್ ಕೋವಿಡ್ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ನಮ್ಮಿಬ್ಬರ ನಡುವ ಉತ್ತಮ ತಿಳುವಳಿಕೆಯಿದೆ. ಲೋಹಿತ್ ನನ್ನ ನಟನಾ ಶೈಲಿಯನ್ನು ಗ್ರಹಿಸುತ್ತಾರೆ ಮತ್ತು ಅವರ ನಿರ್ದೇಶನದಲ್ಲಿ ಅದನ್ನು ಅನುರಣಿಸುತ್ತಾರೆ. ನನ್ನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುತ್ತಾರೆಂದು ತಿಳಿಸಿದರು.

ನಿರ್ದೇಶಕ ಲೋಹಿತ್ ಹಾಗೂ ನಿರ್ಮಾಪಕ ರವಿರಾಜ್ ಜೊತೆಗೆ ನಟಿ ಪ್ರಿಯಾಂಕಾ ಉಪೇಂದ್ರ

ನಿರ್ಮಾಪಕ ರವಿರಾಜ್ ಅವರು ಮಾತನಾಡಿ, ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ಸ್ ಅಡಿಯಲ್ಲಿ ತಂದೆ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ತಂದೆಯ ಪರಂಪರೆಯನ್ನು ನಾನು ಬೆಳೆಸಿಕೊಂಡು ಹೋಗಬೇಕಿದೆ. ಅವರ ನಿಧನದ ನಂತರ ನಾನು ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡೆ. ಈ ಹಿಂದೆ ಉಪೇಂದ್ರ ಮತ್ತು ದರ್ಶನ್ ಅಭಿನಯದ ಅನಾಥರು ಚಿತ್ರವನ್ನು ನಮ್ಮ ಪ್ರೊಡಕ್ಷನ್ ಹೌಸ್ ಅಡಿಯಲ್ಲೇ ನಿರ್ಮಾಣಗೊಂಡಿತ್ತು. ನಮ್ಮ ಬ್ಯಾನರ್ ನಲ್ಲಿಯೇ ಚಿತ್ರ ನಿರ್ಮಾಣ ಮಾಡುವ ಹಂಬಲವಿತ್ತು. ಇದಕ್ಕಾಗಿ ಲೋಹಿತ್ ಹಾಗೂ ಪ್ರಿಯಾಂಕಾ ಅವರೊಂದಿಗೆ ಕೈಜೋಡಿಸಿ ಸಿನಿಮಾ ನಿರ್ಮಾಣವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT