ರಿಷಬ್ ಶೆಟ್ಟಿ 
ಸಿನಿಮಾ ಸುದ್ದಿ

ಸದ್ಯಕ್ಕೆ ನನ್ನ ಗಮನ ಕೇವಲ ಕಾಂತಾರ ಪ್ರೀಕ್ವೆಲ್ ಮೇಲೆ: ಅಶುತೋಷ್ ಗೋವಾರಿಕರ್ ಸಿನಿಮಾದಲ್ಲಿ ನಟಿಸುವ ಬಗ್ಗೆ ಗುಟ್ಟು ಬಿಡದ ರಿಷಬ್ ಶೆಟ್ಟಿ

ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಕಾಂತಾರ ಪ್ರೀಕ್ವೆಲ್‌ನ ತಯಾರಿಯಲ್ಲಿ  ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ, ಖ್ಯಾತ ಬಾಲಿವುಡ್ ನಿರ್ದೇಶಕ ಅಶುತೋಷ್ ಗೋವಾರಿಕರ್ ಮುಂದಿನ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಕಾಂತಾರ ಪ್ರೀಕ್ವೆಲ್‌ನ ತಯಾರಿಯಲ್ಲಿ  ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ, ಖ್ಯಾತ ಬಾಲಿವುಡ್ ನಿರ್ದೇಶಕ ಅಶುತೋಷ್ ಗೋವಾರಿಕರ್ ಮುಂದಿನ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಾಲಿವುಡ್‌ ನಲ್ಲಿ ʼಲಗಾನ್‌ʼ ʼಸ್ವದೇಸ್ʼ, ʼಜೋಧಾ ಅಕ್ಬರ್ʼ, ಹಾಗೂ ʼಖೇಲಿನ್ ಹಮ್ ಜೀ ಜಾನ್ ಸೆʼ ಮುಂತಾದ ಸಿನಿಮಾಗಳನ್ನು ಮಾಡಿರುವ ಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರು ಕನ್ನಡದ ʼಡಿವೈನ್‌ ಸ್ಟಾರ್ʼ ರಿಷಬ್‌ ಶೆಟ್ಟಿ ಅವರೊಂದಿಗೆ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2022 ರಲ್ಲಿ ರಿಲೀಸ್ ಆದ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಪ್ರಶಂಸೆ ಪಡೆಯಿತು.  

ಕೊನೆಯದಾಗಿ ಪಾಣಿಪತ್ ನಿರ್ದೇಶಿಸಿದ ಅಶುತೋಷ್, ರಿಷಬ್ ಶೆಟ್ಟಿ ಜೊತೆ ಕೈಜೋಡಿಸಲು ತೀವ್ರ ಆಸಕ್ತಿ ತೋರಿದ್ದಾರೆ. ಈ ಸಂಬಂಧ ಈಗಾಗಲೇ ಹಲವಾರು ಚರ್ಚೆ ನಡೆದಿವೆ. ಈ ಸಂಬಂಧ ಅಶುತೋಷ್ ಕಥೆ ಸಿದ್ದಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದು ರಿಷಬ್ ಶೆಟ್ಟಿ ವೃತ್ತಿ ಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಸದ್ಯ, ನನ್ನ ಗಮನವು ಕೇವಲ ಕಾಂತಾರ ಪ್ರೀಕ್ವೆಲ್ ಮೇಲೆ ಮಾತ್ರ ಇದೆ, ಅದು ತಯಾರಿ ಹಂತದಲ್ಲಿದೆ. ನನ್ನ ಪ್ರಸ್ತುತ ಯೋಜನೆ ಪೂರೈಸಿದ ನಂತರವೇ ನಾನು ನನ್ನ ಮುಂದಿನ ಸಿನಿಮಾ ಬಗ್ಗೆ ಚರ್ಚಿಸುತ್ತೇನೆ ಎಂದಿದ್ದಾರೆ.

ನಿರ್ದೇಶಕನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡ ರಿಷಬ್, ಬೆಲ್ ಬಾಟಮ್ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು , ನಾಯಕನಾಗಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಂತಾರ ಸಿನಿಮಾ ಮೂಲಕ ನಟನೆಯಲ್ಲೂ ತಮ್ಮ ಕೌಶಲ್ಯ ಪ್ರದರ್ಶಿಸಿದರು.

ನಿರ್ದೇಶಕ ಮತ್ತು ನಟನ ಕಡೆಯಿಂದ ಅಧಿಕೃತ ಪ್ರಕಟಣೆಗಾಗಿ ನಾವು ಕಾಯುತ್ತಿದ್ದೇವೆ. ಅಶುತೋಷ್ ಯಾವ ರೀತಿಯ ಸ್ಕ್ರಿಪ್ಟ್  ಹೊಂದಿದ್ದಾರೆ ಎಂಬುದರ ಕುರಿತು  ರಿಷಬ್ ಶೆಟ್ಟಿ ಆಶ್ಚರ್ಯಪಡಿಸಿರುವುದು ಕುತೂಹಲಕಾರಿಯಾಗಿದೆ. ಕಾಂತಾರ ಪ್ರೀಕ್ವೆಲ್ ಜೊತೆಗೆ  ಅವರು ಕಿರಿಕ್ ಪಾರ್ಟಿ 2 ಮತ್ತು ಬೆಲ್ ಬಾಟಮ್ 2 ನಲ್ಲಿ  ನಟಿಸಲು ಸಿದ್ದರಾಗುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲ ಗೆಹ್ಲೋಟ್!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!