ಪ್ರಮೋದ್ ಶೆಟ್ಟಿ 
ಸಿನಿಮಾ ಸುದ್ದಿ

'ಜಲಂಧರ' ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ ಪ್ರಮೋದ್ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಿಂದಲೇ ಪ್ರೇಕ್ಷಕರ ಮನ ಗೆದ್ದಿರುವ ನಟ ಪ್ರಮೋದ್​ ಶೆಟ್ಟಿ. ಪಾತ್ರದಿಂದ ಪಾತ್ರಕ್ಕೆ ಮ್ಯಾನರಿಸಂನ ಚೇಂಜ್​ ಮಾಡಿಕೊಳ್ಳುವ ಪ್ರಮೋದ್​ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಚಿತ್ರ ಜಲಂಧರ.

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಿಂದಲೇ ಪ್ರೇಕ್ಷಕರ ಮನ ಗೆದ್ದಿರುವ ನಟ ಪ್ರಮೋದ್​ ಶೆಟ್ಟಿ. ಪಾತ್ರದಿಂದ ಪಾತ್ರಕ್ಕೆ ಮ್ಯಾನರಿಸಂನ ಚೇಂಜ್​ ಮಾಡಿಕೊಳ್ಳುವ ಪ್ರಮೋದ್​ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಚಿತ್ರ 'ಜಲಂಧರ'.

ದಿ ಲಾಫಿಂಗ್ ಬುದ್ಧ ಮತ್ತು ಶಹಬ್ಬಾಸ್ ಬಡ್ಡಿ ಮಗನೇ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ, ಜಲಂಧರ ಎಂಬ ಶೀರ್ಷಿಕೆಯ ಎಂಬ ಟೈಟಲ್ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.

ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಪ್ರಮೋದ್​ ಶೆಟ್ಟಿಯವರ ಹುಟ್ಟುಹಬ್ಬಕ್ಕೆ ಈ ಚಿತ್ರದ ಪೋಸ್ಟರ್​ ಕೂಡ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ.

ವಿಷ್ಣು ವಿ ಪ್ರಸನ್ನ ಚೊಚ್ಚಲ ನಿರ್ದೇಶನದ ಈ ಚಿತ್ರ ಕ್ರೈಮ್​ ಥ್ರಿಲ್ಲರ್​ ಕಥಾಹಂದರ ಹೊಂದಿದೆ. ಕಾವೇರಿ ನದಿ ದಡದ ಮಧುವತ್ತಿ ಎಂಬ ಊರಿನಲ್ಲಿ ಈ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಲೋಕೇಶ್​ 'ಜಲಂಧರ' ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಸ್ಟೆಪ್​ ಅಪ್​ ಪಿಕ್ಚರ್ಸ್​ ಲಾಂಛನದಲ್ಲಿ ಮದನ್​ ಎಸ್​ ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರ ಮೋಹನ್​, ರಾಮಚಂದ್ರ ಹಾಗೂ ಪದ್ಮನಾಭನ್​ ಸಹ ನಿರ್ಮಾಪಕರಾಗಿದ್ದಾರೆ. ಮುತ್ತತ್ತಿ, ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

ಜಲಂಧರ ಸಿನಿಮಾ ಪೋಸ್ಟರ್

ಚಿತ್ರದಲ್ಲಿ ಪ್ರಮೋದ್​ ಶೆಟ್ಟಿ ಅಲ್ಲದೇ ಲೋಕೇಶ್​ ಗೌಡ, ರಘು ರಮಣಕೊಪ್ಪ, ಬಾಲ ರಾಜವಾಡಿ, ರಿಶಿಕಾ ರಾಜ್​, ಆರೋಹಿತ ಗೌಡ, ನವೀನ್​ ಸಾಗರ್​, ಪ್ರತಾಪ್​ ಮುಂತಾದವರು ಇದ್ದಾರೆ.

ಚಿತ್ರಕ್ಕೆ ಸರಿನ್​ ರವೀಂದ್ರನ್​ ಹಾಗೂ ವಿದ್ಯಾಶಂಕರ್​ ಛಾಯಾಗ್ರಹಣ, ಜತಿನ್​ ದರ್ಶನ್​ ಸಂಗೀತ ನಿರ್ದೇಶನ ಹಾಗೂ ವೆಂಕಿ ಯು.ಡಿ.ವಿ ಸಂಕಲನವಿದೆ. ಸದ್ಯದಲ್ಲೇ 'ಜಲಂಧರ' ಸಿನಿಮಾದ ಟ್ರೇಲರ್​ ಅನ್ನು ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT