ರಮೇಶ್ ಅರವಿಂದ್ 
ಸಿನಿಮಾ ಸುದ್ದಿ

ಶಿವಾಜಿ ಸುರತ್ಕಲ್ ಯಶಸ್ಸು: ಮತ್ತೊಂದು ಹಾರರ್ ಮಿಸ್ಟರಿ 'ದೈಜಿ' ಯಲ್ಲಿ ರಮೇಶ್ ಅರವಿಂದ್

ಶಿವಾಜಿ ಸುರತ್ಕಲ್ ಭಾಗ 1 ಮತ್ತು 2 ರ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕೈಜೋಡಿಸುತ್ತಿದ್ದಾರೆ.

ಶಿವಾಜಿ ಸುರತ್ಕಲ್ ಭಾಗ 1 ಮತ್ತು 2 ರ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕೈಜೋಡಿಸುತ್ತಿದ್ದಾರೆ.

'ದೈಜಿ' ಎಂಬ ಶೀರ್ಷಿಕೆಯಡಿ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ʼದೈಜಿʼ ಚಿತ್ರವನ್ನು ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ನಿರ್ಮಿಸುತ್ತಿದ್ದಾರೆ. ಇದು ರಮೇಶ್ ಅರವಿಂದ್ ಅವರ 106 ನೇ ಸಿನಿಮಾವಾಗಿದೆ.

ಇದಕ್ಕೂ ಮುಂಚೆ ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆ ಕಂಡ ಕಿರು ಚಿತ್ರ ಸುಳ್ಳೇ ಸತ್ಯ, ಪವನ್ ಕುಮಾರ್ ರವರ ಲೂಸಿಯಾ, ಡಾಲಿ ಧನಂಜಯ್ ಅವರು ನಟಿಸಿದ 'ಬದ್ಮಾಶ್' ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದವು.

ಚಿತ್ರದ ಶೀರ್ಷಿಕೆ 'ದೈಜಿ' ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು. ಹೀಗೆ ಹಲವು ಅರ್ಥಗಳಿವೆ. ಹಾರರ್ ಮಿಸ್ಟರಿ ಕಥೆಯುಳ್ಳ ಚಿತ್ರ.

ಹಿಂದೆಂದೂ ಕಾಣಿಸಿಕೊಳ್ಳದಂತಹ ಒಂದು ಪಾತ್ರದಲ್ಲಿ ನಟ ರಮೇಶ್‌ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಒಂದು ಸಾರ್ವತ್ರಿಕವಾದ ನೆಲೆ ಕಂಡುಕೊಳ್ಳುವ ಸಾಮರ್ಥ್ಯವಿದೆ ಎಂಬುದು ಚಿತ್ರ ತಂಡದ ಬಲವಾದ ನಂಬಿಕೆ. ಚಿತ್ರವು ಮಿಸ್ಟರಿ ಅಥವಾ ಹಾರರ್ ಜ಼ಾನರ್ ಗೆ ಬರುತ್ತದೆ. ಚಿತ್ರಕಥೆಯನ್ನು ಶಿವಾಜಿ ಸುರತ್ಕಲ್ ಬರೆದ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ರವರು ನಿರ್ಮಾಪಕ ರವಿ ಕಶ್ಯಪ್ ವಿವರಿಸಿದ ನೈಜ ಘಟನೆಗಳನ್ನು ಆಧರಿಸಿ ಬರೆದಿದ್ದಾರೆ.

ಚಿತ್ರದ ನಾಯಕಿಗಾಗಿ ಆಗಲೇ ಹುಡುಕಾಟ ಪ್ರಾರಂಭವಾಗಿದೆ. ಚಿತ್ರೀಕರಣ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಚಿತ್ರವು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣವಾಗಲಿದೆ. ಇತ್ತೀಚೆಗಷ್ಟೇ ೨೫ ವರ್ಷಗಳ ಸಂಭ್ರಮ ಆಚರಿಸಿದ ಅಮೆರಿಕ ಅಮೆರಿಕ ಚಿತ್ರದಂತೆಯೇ ಇದೂ ಕೂಡ ಬಹುತೇಕ ಅಮೆರಿಕದಲ್ಲಿಯೇ ನಡೆಯುವ ಕಥೆ.

ಇದು ಬಹುಮುಖ ಪ್ರತಿಭೆಯ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡ ನಟ ಶ್ರೀ ರಮೇಶ್ ಅರವಿಂದ ರವರ 106ನೇ ಚಿತ್ರ.  ರಮೇಶ್ ಅರವಿಂದ್ ಅವರು ಹಾರರ್ ಕಥೆಯೊಂದಿಗೆ ಮುಂದುವರಿಯಲು  ಖುಷಿಯಾಗಿದ್ದಾರೆ. ಅವರು ವಿವರಿಸುತ್ತಾರೆ.

ನನ್ನ ಸಿದ್ಧಾಂತವೆಂದರೆ ಪ್ರತಿಯೊಬ್ಬರಿಗೂ ಅವರವರದ್ದೆ ಭಯವಿದೆ. ಬದ್ಧತೆಯ ಭಯ ಅಥವಾ ಸಾರ್ವಜನಿಕವಾಗಿ ಮಾತನಾಡುವ ಭಯ ಇರಬಹುದು, ಇದು ಸಾಮಾನ್ಯ ಥ್ರೆಡ್ ಆಗಿದೆ.ಸದ್ಯಕ್ಕೆ ಎಲ್ಲರಿಗೂ ಅಲೌಕಿಕ ಭಯವಿದೆ ಎಂಬುದು ನಮ್ಮ ಗ್ರಹಿಕೆ. ಅಂತಹ ಪರಿಸ್ಥಿತಿಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಅಥವಾ ಕುಟುಂಬದ ವ್ಯಕ್ತಿ ಏನು ಮಾಡುತ್ತಾನೆ? ಇದು ಡೈಜಿಯಲ್ಲಿ ಪರಿಶೋಧಿಸಲ್ಪಡುವ ವಿಷಯವಾಗಿದೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.

ವಿವಿಧ ಪ್ರಕಾರಗಳಲ್ಲಿ ಗುರುತಿಸಿಕೊಳ್ಳುತ್ತಿರುವ ರಮೇಶ್ ಅರವಿಂದ್ ಈ ಹಿಂದೆ ಆಪ್ತಮಿತ್ರ ಮತ್ತು ಮುಂಬರುವ ಭೈರಾದೇವಿ ಸೇರಿದಂತೆ ಹಲವು ಹಾರರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT