ಮಾನ್ವಿತಾ ಕಾಮತ್ 
ಸಿನಿಮಾ ಸುದ್ದಿ

ಮೇ 1ರಂದು ಸ್ಯಾಂಡಲ್‌ವುಡ್‌ನ 'ಕೆಂಡಸಂಪಿಗೆ' ನಟಿ ಮಾನ್ವಿತಾ ಕಾಮತ್ ವಿವಾಹ!

ಸ್ಯಾಂಡಲ್‌ವುಡ್‌ನ 'ಕೆಂಡಸಂಪಿಗೆ' ನಟಿ ಮಾನ್ವಿತಾ ಕಾಮತ್ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಮಾನ್ವಿತಾ ಕಾಮತ್ ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿದ್ದು ಮೇ1 ರಂದು ಅವರು ಸಪ್ತಪದಿ ತುಳಿಯಲಿದ್ದಾರೆ.

ಸ್ಯಾಂಡಲ್‌ವುಡ್‌ನ 'ಕೆಂಡಸಂಪಿಗೆ' ನಟಿ ಮಾನ್ವಿತಾ ಕಾಮತ್ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಮಾನ್ವಿತಾ ಕಾಮತ್ ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿದ್ದು ಮೇ1 ರಂದು ಅವರು ಸಪ್ತಪದಿ ತುಳಿಯಲಿದ್ದಾರೆ.

ಸಂಗೀತ ನಿರ್ದೇಶಕ ಅರುಣ್ ಕುಮಾರ್ ಅವರು ಮಾನ್ವಿತಾ ಜೊತೆಗೆ ವಿವಾಹ ನಡೆಯಲಿದೆ. ನಟಿ ಮಾನ್ವಿತಾ ಮತ್ತು ಅರುಣ್ ಕುಮಾರ್ ಅವರ ವಿವಾಹವು ಮೇ 1ರಂದು ಮಂಗಳೂರಿನಲ್ಲಿ ಜರುಗಲಿದೆ. ಹಳದಿ ಶಾಸ್ತ್ರವು ಏಪ್ರಿಲ್‌ 29ರಂದು ನಡೆಯಲಿದೆ ಮತ್ತು ಸಂಗೀತ್ ಶಾಸ್ತ್ರವು ಏಪ್ರಿಲ್ 30ರಂದು ನಡೆಯಲಿದೆ. ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಮಾನ್ವಿತಾ ಮತ್ತು ಅರುಣ್ ದಾಂಪತ್ಯ ಬದುಕಿಗೆ ಕಾಲಿಡಲಿದ್ದಾರೆ. ಮದುವೆ ಕುರಿತಾದ ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಆರ್.ಜೆಯಾಗಿ ವೃತ್ತಿಯನ್ನು ಆರಂಭಿಸಿದ್ದ ಮಾನ್ವಿತಾ ಆನಂತರ ಸಿನಿಮಾ ರಂಗಕ್ಕೆ ಬಂದರು. ಸೂರಿ ನಿರ್ದೇಶನದ ಕೆಂಡ ಸಂಪಿಗೆ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟಿತು. ಆನಂತರ ಟಗರು ಸಿನಿಮಾದ ಮೂಲಕ ಸಾಕಷ್ಟು ಜನಕ್ಕೆ ಪರಿಚಯವಾದರು. ಅಲ್ಲಿಂದ ಟಗರು ಪುಟ್ಟಿ ಎಂದೇ ಫೇಮಸ್ ಆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ