ಉಸಿರೇ ಉಸಿರೇ ಚಿತ್ರದ ಸ್ಟಿಲ್. 
ಸಿನಿಮಾ ಸುದ್ದಿ

ಮೇ 3ಕ್ಕೆ "ಉಸಿರೇ ಉಸಿರೇ" ಚಿತ್ರ ರಿಲೀಸ್: ಅತಿಥಿ ಪಾತ್ರದಲ್ಲಿ ಕಿಚ್ಚ ಸುದೀಪ್!

ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ ಹಾಗೂ ನಟ ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಸಿಕೊಂಡಿರುವ "ಉಸಿರೇ ಉಸಿರೇ" ಚಿತ್ರ ಮೇ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ ಹಾಗೂ ನಟ ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಸಿಕೊಂಡಿರುವ "ಉಸಿರೇ ಉಸಿರೇ" ಚಿತ್ರ ಮೇ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಚಿತ್ರಕ್ಕಾಗಿ ನಾನು ಐದು ವರ್ಷಗಳನ್ನು ಮೀಸಲಿಟ್ಟಿದ್ದೆ. ಈ ಸಮಯದಲ್ಲಿ ಬೇರೆ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಈ ಚಿತ್ರಕ್ಕೆ ನನ್ನ ಸರ್ವಸ್ವವನ್ನೂ ನೀಡಿದ್ದೇನೆ. ಬೇರೆ ಯಾವುದಕ್ಕೂ ಸಮಯವನ್ನು ನೀಡಿರಲಿಲ್ಲ. ನಾನು ನಿಜವಾಗಿಯೂ ಪ್ರೀತಿಸಿದ ಚಿತ್ರ ಉಸಿರೇ ಉಸಿರೇ. ಪ್ರಯಾಣವು ಕಠಿಣವಾಗಿದ್ದರೂ ಚಿತ್ರದ ಔಟ್‌ಪುಟ್‌ ತೃಪ್ತಿ ತಂದಿದೆ. ಚಿತ್ರ ಉತ್ತಮ ರೀತಿಯಲ್ಲಿ ಮೂಡಿಬಂದಿದೆ ಎಂದು ರಾಜೀವ್ ಹನು ಹೇಳಿದ್ದಾರೆ.

ಇದು ನೈಜ ಕಥೆಯನ್ನು ಆಧರಿಸಿದ ಚಿತ್ರವಾಗಿದ್ದು, ಪ್ರತಿಯೊಬ್ಬರ ಹೃದಯವನ್ನು ಸ್ಪರ್ಶಿಸುವ ಕಥಾಹಂದರವನ್ನು ಹೊಂದಿದೆ. ಈ ಚಿತ್ರಕ್ಕೊಂದು ವಿಶಿಷ್ಟ ಕೋನವಿದೆ. ಅದು ಹಿಂದೂ-ಮುಸ್ಲಿಂ ಪ್ರೇಮಕಥೆಯಂತೆ ಕಂಡರೂ, ಕಥೆ ಹೆಚ್ಚು ಆಳವನ್ನು ಹೊಂದಿದೆ. ಸುದೀಪ್ ಅವರು ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ನಮಗೆ ಬೆಂಬಲ ನೀಡಿದ್ದಾರೆಂದು ತಿಳಿಸಿದ್ದಾರೆ.

ಉಸಿರೇ ಉಸಿರೇ ನನ್ನ ಚೊಚ್ಚಲ ಕನ್ನಡ ಚಿತ್ರ. ಪ್ರೀತಿ ಎಲ್ಲ ಧರ್ಮಗಳನ್ನು ಮೀರಿದ್ದು ಎಂಬ ಸಂದೇಶವನ್ನು ಸಾರುವ ಉತ್ತಮ ಕಥಾಹಂದರವನ್ನು ಚಿತ್ರ ಹೊಂದಿದೆ. ಚಿತ್ರದ ಭಾಗವಾಗಿದ್ದು ತುಂಬಾ ಸಂತೋಷ ತಂದಿದೆ. ಉತ್ತರ ಭಾರತದವನಾಗಿದ್ದರಿಂದ ನನ್ನ ಆಲೋಚನೆಗಳನ್ನು ಗ್ರಹಿಸುವುದು ಮತ್ತು ಚಿತ್ರಿಸುವುದು ಆರಂಭದಲ್ಲಿ ಸವಾಲಾಗಿತ್ತು. ಆದರೆ, ಚಿತ್ರರಂಗದ ಎಲ್ಲರ ಬೆಂಬಲದಿಂದ ಅದು ಸಾಧ್ಯವಾಯಿತು ಎಂದಿದ್ದಾರೆ.

ಚಿತ್ರದಲ್ಲಿ ದೇವರಾಜ್, ತಾರಾ, ಸುಚೇಂದ್ರ ಪ್ರಸಾದ್, ಬ್ರಹ್ಮ, ಅಲಿ, ಸಾಧು ಕೋಕಿಲ, ಮಂಜು ಪಾವಗಡ, ಶೈನ್ ಶೆಟ್ಟಿ ಮತ್ತು ಸೀತಾರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರದೀಪ್ ಯಾದವ್ ನಿರ್ಮಾಣದ ಈ ಚಿತ್ರಕ್ಕೆ ಸಿಎಂ ವಿಜಯ್ ಕಥೆ ಬರೆದು ನಿರ್ದೇಶಿಸಿದ್ದಾರೆ, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ಮತ್ತು ಮನು ಬಿಕೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT