ಪೆಪೆ ಮತ್ತು ಮೇಘಾ ಚಿತ್ರದಲ್ಲಿನ ಅಭಿನಯದಿಂದ ಮೆಚ್ಚಿಗೆ ಗಳಿಸಿರುವ ನಟಿ ಕಾಜಲ್ ಕುಂದರ್ ಅವರು ಬಿಳಿಚುಕ್ಕಿ ಹಳ್ಳಿಹಕ್ಕಿಯಲ್ಲಿ ನಾಯಕಿ ನಟಿಯಾಗಿ ನಟಿಸುತ್ತಿದ್ದಾರೆ.
ಮಹೇಶ್ ಗೌಡ ಅವರು ನಟಿಸಿ, ನಿರ್ಮಾಣ ಮಾಡಿ, ನಿರ್ದೇಶಿಸಿರುವ ಈ ಸಿನಿಮಾ ಚರ್ಮದ ಕಾಯಿಲೆ ತೊನ್ನು (vitiligo) ಬಗೆಗಿನ ಕಥಾ ಹಂದರವನ್ನೊಳಗೊಂಡಿದೆ. vitiligo ಸುತ್ತಾ ಜರುಗುವ, ಪಕ್ಕಾ ಕಮರ್ಶಿಯಲ್ ದಾಟಿಯ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಮೊದಲೆಂಬ ಹೆಗ್ಗಳಿಕೆಯನ್ನೂ ಹೊಂದಿದೆ.
ಚಿತ್ರದ ನಾಯಕಿ ಪಾತ್ರದಲ್ಲಿ ವೈಷ್ಣವಿ ಗೌಡ ನಟಿಸಲಿದ್ದಾರೆಂದು ಹೇಳಲಾಗಿತ್ತು. ಇದೀಗ ಪಾತ್ರಕ್ಕೆ ಕಾಜಲ್ ಕುಂದರ್ ಎಂಟ್ರಿ ಕೊಟ್ಟಿದ್ದು, ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.
ಪಾತ್ರಕ್ಕೆ ಕಾಜಲ್ ಅವರು ಜೀವ ತುಂಬಿದ್ದಾರೆ. ಕಥೆಯಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದಾರೆ. ಇಂತಹ ನಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಬೇಕು, ಇನ್ನೂ ಒಂದಷ್ಟು ಸವಾಲಿನ ಪಾತ್ರಗಳಿಗೆ ಜೀವ ತುಂಬಬೇಕು ಎಂಬುದು ನನ್ನ ಆಶಯ ಎಂದು ನಿರ್ದೇಶಕ ಮಹೇಶ್ ಗೌಡ ಅವರು ಹೇಳಿದ್ದಾರೆ.
ಹೊನುಡಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಿಯೋ ಆಂಟೋನಿ ಅವರ ಸಂಗೀತ ಮತ್ತು ಕಿರಣ್ ಸಿಎಚ್‌ಎಂ ಅವರ ಛಾಯಾಗ್ರಹಣವಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲು ಸಿದ್ಧತೆ ನಡೆಸಿದೆ.