ರಿಪ್ಪನ್ ಸ್ವಾಮಿ ಚಿತ್ರದ ಸ್ಟಿಲ್. 
ಸಿನಿಮಾ ಸುದ್ದಿ

ಸೆನ್ಸಾರ್ ಮುಗಿಸಿದ ವಿಜಯ್ ರಾಘವೇಂದ್ರ ನಟನೆಯ 'ರಿಪ್ಪನ್ ಸ್ವಾಮಿ': ಜನವರಿಯಲ್ಲಿ ತೆರೆಗೆ

ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಜಯ್ ಅವರು ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ವಿಜಯ್ ಅವರಿಗೆ ಜೋಡಿಯಾಗಿ ಅಶ್ವಿನಿ ಚಂದ್ರಶೇಖರ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಯುವ ನಿರ್ದೇಶಕ ಕಿಶೋರ್​ ಮೂಡುಬಿದ್ರೆ ಆ್ಯಕ್ಷನ್​- ಕಟ್​ ಹೇಳಿರುವ ಹಾಗೂ ವಿಜಯ್​ ರಾಘವೇಂದ್ರ ಅವರು ನಾಯಕನಾಗಿ ನಟಿಸಿರುವ ರಿಪ್ಪನ್​ಸ್ವಾಮಿ ಚಿತ್ರದ ಸೆನ್ಸಾರ್ ಮುಗಿದಿದ್ದು, ಸಿನಿಮಾಕ್ಕೆ ‘ಯು/ಎ’ ಸರ್ಟಿಫಿಕೇಶನ್ ದೊರೆತಿದೆ. ಚಿತ್ರವು 2025ರ ಜನವರಿ ತಿಂಗಳಲ್ಲಿನಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಜಯ್ ಅವರು ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ವಿಜಯ್ ಅವರಿಗೆ ಜೋಡಿಯಾಗಿ ಅಶ್ವಿನಿ ಚಂದ್ರಶೇಖರ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ವೈದ್ಯೆ ಪಾತ್ರದಲ್ಲಿ ಅಶ್ವಿನಿಯವರು ನಟಿಸಿದ್ದಾರೆ.

ಚಿತ್ರದ ಚಿತ್ರೀಕರಣ ಕೊಪ್ಪ, ಕಳಸ ಮತ್ತು ಬಾಳೆಹೊನ್ನೂರಿನಂತಹ ಸುಂದರವಾದ ಸ್ಥಳಗಳಲ್ಲಿ ನಡೆದಿದ್ದು, ಕೇವಲ 48 ದಿನಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ.

ಕಿಶೋರ್ ಮೂಡುಬಿದ್ರೆ ನಿರ್ದೇಶನದ ಈ ಚಿತ್ರ ಪಂಚಾಂನನ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದೆ. ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುಯೆಲ್ ಅಬಿ ಸಂಗೀತ ಸಂಯೋಜಿಸಿದ್ದಾರೆ. ರಂಗನಾಥ್ ಸಿಎಂ ಅವರು ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ಶಶಾಂಕ್ ನಾರಾಯಣ್ ಸಂಕಲನ ನೀಡಿದ್ದಾರೆ. ಚಿತ್ರದ ಪೋಷಕ ಪಾತ್ರದಲ್ಲಿ ಪ್ರಕಾಶ್ ತೂಮಿನಾಡ್, ವಜ್ರಧೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ ಮತ್ತು ಕೃಷ್ಣ ಮೂರ್ತಿ ಕವತಾರ್ ಕಾಣಿಸಿಕೊಂಡಿದ್ದಾರೆ.

ಈ ನಡುವೆ ರಿಪ್ಪನ್ ಸ್ವಾಮಿ ಜೊತೆಜೊತೆಗೆ ವಿಜಯ್ ರಾಘವೇಂದ್ರ ಅವರು ನಿರ್ದೇಶಕ ಪಿ.ಸಿ.ಶೇಖರ್ ಅವರೊಂದಿಗೆ ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರವು ರೈತರ ಹೋರಾಟ ಹಾಗೂ ಗೆಲುವಿನ ಕುರಿತಾಗಿ ಆಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ