ಕನ್ನಡ ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಅದೃಷ್ಟಕ್ಕೆ ಈ ವಾರ ದೊಡ್ಮನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಕಾರಣ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣ ಗೋಲ್ಡ್ ಸುರೇಶ್ ದೊಡ್ಮನೆಯಿಂದ ಹೊರ ಬನ್ನಿ ಎಂಬ ಪ್ರೋಮೋ ರಿಲೀಸ್ ಆಗಿದೆ.
ಭಾನುವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಶೋ ವೇಳೆ ದಿಢೀರ್ ಅಂತ ಬಿಗ್ ಬಾಸ್, ಗೋಲ್ಡ್ ಸುರೇಶ್ ಅವರ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ಬಿಗ್ ಬಾಸ್‌ಗಿಂತ ಅವರ ಮನೆಯವರಿಗೆ ಸುರೇಶ್ ಅವಶ್ಯಕತೆ ಹೆಚ್ಚಾಗಿದೆ ಎಂದು ಘೋಷಿಸಿದರು. ಹೀಗಾಗಿ ನೀವು ಈ ಕೂಡಲೇ ತಮ್ಮ ಬಟ್ಟೆಗಳನ್ನೆಲ್ಲ ಪ್ಯಾಕ್ ಮಾಡಿಕೊಂಡು ಮನೆಯಿಂದ ಹೊರ ಬರಬೇಕು ಎಂದು ಬಿಗ್ ಬಾಸ್ ಹೇಳುತ್ತಾರೆ.
ಈ ವಿಚಾರ ಕೇಳಿ ಬಿಗ್ ಬಾಸ್‌ನ ಉಳಿದ ಸಹಸ್ಪರ್ಧಿಗಳು ಸಹ ಗಾಬರಿಯಾಗಿದ್ದಾರೆ. ಅಲ್ಲದೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲೂ ಹೆಚ್ಚು ಚರ್ಚೆಯಾಗುತ್ತಿದೆ. ಗೋಲ್ಡ್ ಸುರೇಶ್ ಅವರ ತಂದೆ ನಿಧನರಾಗಿದ್ದಾರೆ ಅಂತ ಕೆಲವರು ಹೇಳುತ್ತಿದ್ದರೆ ಮತ್ತೆ ಕೆಲವರು ತಾಯಿಗೆ ಹುಷಾರಿಲ್ಲ ಎಂದು ಚರ್ಚಿಸುತ್ತಿದ್ದಾರೆ. ಆದರೆ ಇದರ ಅಸಲಿಯತ್ತು ಇಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ.
ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಹೊರಬರುತ್ತಿದ್ದಾರೆ ಎಂಬ ವಿಷಯ ವ್ಯಾಪಕ ಚರ್ಚೆಯಾಗುತ್ತಿದ್ದಂತೆ ಅತ್ತ ಗೋಲ್ಡ್ ಸುರೇಶ್ ಅವರ ತಂಡೆ ಶಿವಗೌಡ ಅವರು ನನಗೆ ಏನೂ ಆಗಿಲ್ಲ. ಇನ್ನೂ ಬದುಕಿದ್ದೇನೆ. ನಮ್ಮ ಮನೆಯಲ್ಲೂ ಎಲ್ಲರೂ ಹುಷಾರಾಗಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಗೋಲ್ಡ್ ಸುರೇಶ್ ಮತ್ಯಾವ ತುರ್ತುಪರಿಸ್ಥಿತಿ ಎದುರಾಗಿದೆ ಎಂಬುದು ಪ್ರೇಕ್ಷಕರ ಆಂತಕಕ್ಕೆ ಕಾರಣವಾಗಿದೆ.