ಟಾಕ್ಸಿಕ್ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಭಾರತದ ದುಬಾರಿ 'ವಿಲನ್' ರಾಕಿಂಗ್ ಸ್ಟಾರ್, ಇದೀಗ ಹಾಲಿವುಡ್ ಸಂಸ್ಥೆ ಜೊತೆ ಮಾತುಕತೆ; ಯಶ್ ಮಾಸ್ಟರ್ ಪ್ಲ್ಯಾನ್ ಏನು?

ಟಾಕ್ಸಿಕ್ ತಯಾರಕರು ಚಿತ್ರವನ್ನು 2025ರ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ. ಆದರೂ ದಿನಾಂಕವನ್ನು ಇನ್ನೂ ಘೋಷಣೆಯಾಗಿಲ್ಲ. ಶೂಟಿಂಗ್ ಶೆಡ್ಯೂಲ್ ಮುಗಿಯುತ್ತಿದ್ದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ.

ಕೆಜಿಎಫ್ 1 ಮತ್ತು 2 ಬ್ಲಾಕ್ ಬಸ್ಟರ್ ಚಿತ್ರಗಳ ಸರದಾರ ಕನ್ನಡದ ರಾಕಿಂಗ್ ಸ್ಟಾರ್ ಯಶ್, ತಮ್ಮ ಮುಂದಿನ ಚಿತ್ರ ಟಾಕ್ಸಿಕ್‌ನ ಜಾಗತಿಕ ಬಿಡುಗಡೆಗಾಗಿ 20 ಸೆಂಚುರಿ ಫಾಕ್ಸ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. KVN ಪ್ರೊಡಕ್ಷನ್ಸ್‌ನಲ್ಲಿ ಸಹ ಪಾಲುದಾರರಾಗಿರುವ ಯಶ್ ಟಾಕ್ಸಿಕ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಲು ಆಶಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಚರ್ಚೆಗಳು ಅತ್ಯಂತ ಆರಂಭಿಕ ಹಂತಗಳಲ್ಲಿವೆ ಎಂದು ಹೇಳಿವೆ.

ಟಾಕ್ಸಿಕ್‌ನ ಕಥೆ ಹೇಳುವ ಮಾದರಿ ಮತ್ತು ದೃಶ್ಯಗಳು ಹಾಲಿವುಡ್ ಚಿತ್ರಗಳಿಗೆ ಸರಿಯಾಗಿವೆ ಎಂದು ಯಶ್ ಬಲವಾಗಿ ನಂಬಿದ್ದು ದೊಡ್ಡ ಮಟ್ಟದಲ್ಲಿ ಬಿಡುಗಡೆಗಾಗಿ ಜಾಗತಿಕ ದೈತ್ಯರೊಂದಿಗೆ ಪಾಲುದಾರಿಕೆಯ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದಾರೆ ಎಂದು ಮೂಲವು ಸೇರಿಸಿದೆ. 2025ರ ಬೇಸಿಗೆಯ ವೇಳೆಗೆ ಅಂತಾರಾಷ್ಟ್ರೀಯ ವಿತರಣೆಯ ಕುರಿತಂತೆ ಅಂತಿಮ ತೀರ್ಮಾನಗಳು ಹೊರಬರಲಿದೆ.

ಟಾಕ್ಸಿಕ್ ತಯಾರಕರು ಚಿತ್ರವನ್ನು 2025ರ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ. ಆದರೂ ದಿನಾಂಕವನ್ನು ಇನ್ನೂ ಘೋಷಣೆಯಾಗಿಲ್ಲ. ಶೂಟಿಂಗ್ ಶೆಡ್ಯೂಲ್ ಮುಗಿಯುತ್ತಿದ್ದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಚಿತ್ರವು 2025ರ ಬಹು ನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿದೆ. ಈ ಚಿತ್ರದಲ್ಲಿ ಯಶ್ ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಡಿಸೆಂಬರ್ 2023ರಲ್ಲಿ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಯಿತು. ಮುಂಬರುವ ಚಿತ್ರವು ಗ್ಯಾಂಗ್‌ಸ್ಟರ್ ಥ್ರಿಲ್ಲರ್ ಆಗಿದ್ದು, ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಯಶ್ ಎದುರು ಕಿಯಾರಾ ಅಡ್ವಾಣಿ ಮತ್ತು ನಯನತಾರಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಟಾಕ್ಸಿಕ್ ಜೊತೆಗೆ, ಯಶ್ ನಿತೇಶ್ ತಿವಾರಿಯ ನಿರ್ದೇಶನದ ರಾಮಾಯಣದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿನ ಪಾತ್ರಕ್ಕಾಗಿ ಯಶ್ 200 ಕೋಟಿ ಪಡೆಯಲಿದ್ದಾರೆ ಎಂದು ಸುದ್ದಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT