ಸಿನಿಮಾ ಸುದ್ದಿ

ಯೋಗರಾಜ್ ಭಟ್ ನಿರ್ಮಾಣದ 'ಉಡಾಳ' ಮೂಲಕ ನಿರ್ದೇಶಕರಾಗಿ ಅಮೋಲ್ ಪಾಟೀಲ್ ಪಾದರ್ಪಣೆ!

Shilpa D

ಯೋಗರಾಜ್ ಭಟ್ ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿಯೂ ಯಶಸ್ಸು ಕಾಣುತ್ತಿದ್ದಾರೆ. ಇದೀಗ ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ನಿರ್ಮಾಣದಲ್ಲಿ ಸಿನಿಮಾವೊಂದು ಬರುತ್ತಿದೆ. 'ಉಡಾಳ' ಟೈಟಲ್ ನ ಸಿನಿಮಾವನ್ನು ಯೋಗರಾಜ್ ಭಟ್ ಶಿಷ್ಯ ಅಮೋಲ್ ಪಾಟೀಲ್ ನಿರ್ದೇಶಿಸುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಪದವಿ ಪೂರ್ವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಪೃಥ್ವಿ ಶಾಮನೂರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಡಾಲಿ ಧನಂಜಯ್ ಬಿಡುಗಡೆ ಮಾಡಿ‌‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 20ರಿಂದ ಶೂಟಿಂಗ್ ಆರಂಭವಾಗಲಿದೆ. ಹೃತಿಕಾ ಶ್ರೀನಿವಾಸ್ ನಾಯಕಿಯಾಗಿ ಪರಿಚಯಿಸಲಾಗುತ್ತಿದೆ. ಟೂರಿಸ್ಟ್ ಗೈಡ್ ಪಾತ್ರದಲ್ಲಿ ಪೃಥ್ವಿ ಕಾಣಿಸಿಕೊಳ್ಳಲಿದ್ದಾರೆ. ಹಾಸ್ಯ, ಪ್ರಣಯ ಮತ್ತು ಆ್ಯಕ್ಷನ್ ಗಳ ಸಮ್ಮಳಿತವಿದೆ.

ನಿರ್ದೇಶಕ ಅಮೋಲ್ ಪಾಟೀಲ್ ಅವರು ಮೂಲತಃ ಬಿಜಾಪುರದವರು. ಶಿಕ್ಷಣ ಪಡೆದು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದಾರೆ. ಅವರಿಗೆ ಉತ್ತರ ಕರ್ನಾಟಕ ಸ್ಟೈಲ್​ನ ಸಿನಿಮಾ ಮಾಡಬೇಕು ಎನ್ನುವ ಆಸೆ ಇತ್ತು. ಈಗ ಅವರು ಉತ್ತರ ಕರ್ನಾಟಕ ಸೊಗಡಿನ ಸಿನಿಮಾ ಮಾಡಲು ಅವರು ಮುಂದಾಗಿದ್ದಾರೆ.

ಹೀಗಾಗಿ ಉತ್ತರ ಕರ್ನಾಕಟದಲ್ಲಿ ಹೆಚ್ಚು ಬಳಕೆಯಲ್ಲಿ ಇರುವ ‘ಉಡಾಳ’ ಶಬ್ದವನ್ನೇ ಟೈಟಲ್ ಆಗಿ ಇಟ್ಟಿದ್ದಾರೆ. ‘ನನಗೆ ಅವಕಾಶ ಕೊಟ್ಟಿದ್ದಕ್ಕೆ ಗುರುಗಳಾದ ಯೋಗರಾಜ್ ಭಟ್ ಹಾಗೂ ರವಿ ಶಾಮನೂರು ಅವರಿಗೆ ಧನ್ಯವಾದ ಹೇಳುತ್ತೇನೆ. ಇದು ಉತ್ತರ ಕರ್ನಾಟಕದ ಶೈಲಿಯ ಸಿನಿಮಾ. ಫೆಬ್ರವರಿ ಅಂತ್ಯಕ್ಕೆ ಬಿಜಾಪುರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹೆಚ್ಚಿನ ಚಿತ್ರೀಕರಣ ಆ ಭಾಗದಲ್ಲೇ ನಡೆಯಲಿದೆ’ ಎಂದು ಅಮೋಲ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಈ ಚಿತ್ರಕ್ಕೆ ಚೇತನ್ ಮತ್ತು ದಾವೆ ಸಂಗೀತ ಸಂಯೋಜಿಸಲಿದ್ದು, ಯೋಗರಾಜ್ ಭಟ್ ಆರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಉಡಾಲ ಚಿತ್ರಕ್ಕೆ ಶಿವಶಂಕರ ನೂರಂಬಡ ಛಾಯಾಗ್ರಹಣ ಮಾಡಲಿದ್ದಾರೆ.

SCROLL FOR NEXT