ರಂಗಾಯಣ ರಘು
ರಂಗಾಯಣ ರಘು 
ಸಿನಿಮಾ ಸುದ್ದಿ

ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ಎಲ್ಲಾ ಪಾತ್ರಗಳನ್ನೂ ಗೌರವಿಸುತ್ತೇನೆ: ನಟ ರಂಗಾಯಣ ರಘು

Manjula VN

ಸಾಕಷ್ಟು ಸಿನಿಮಾಗಳಲ್ಲಿ ನಟ ರಂಗಾಯಣ ರಘು ಬಿಝಿಯಾಗಿದ್ದು, ಕೆಲ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಈ ಪೈಕಿ ಶಾಖಾಹಾರಿ ಸಿನಿಮಾ ಕೂಡ ಒಂದು.

ಚಿತ್ರದ ಕುರಿತು ಮಾತನಾಡಿರುವ ನಟ ರಂಗಾಯಣ ರಘು ಅವರು, ಪರದೆ ಮೇಲಿನ ಅವಧಿಯನ್ನು ಲೆಕ್ಕಿಸದೆ ಎಲ್ಲಾ ಪಾತ್ರಗಳನ್ನು ನಾನು ಗೌರವಿಸುತ್ತೇನೆ. ರಂಗಭೂಮಿ ಕಲಾವಿದನಾಗಿದ್ದ ನನಗೆ ರಂಗಭೂಮಿಯಲ್ಲಿನ ನಟನೆ ಹಾಗೂ ಚಿತ್ರಗಳಲ್ಲಿನ ನಟನೆಯಲ್ಲಿ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ಅದು . 3, 10 ಅಥವಾ 25 ದಿನಗಳ ಚಿತ್ರೀಕರಣವವಾಗಲಿ. ನನಗೆ ವ್ಯತ್ಯಾಸವಿದೆ ಎನಿಸುವುದಿಲ್ಲ. ಇಲ್ಲಿ ಪಾತ್ರದ ಸಾರ, ಕೊಡುಗೆ ಹೆಚ್ಚು ಮುಖ್ಯವಾಗುತ್ತದೆ. ಯಾವುದೇ ಪಾತ್ರ ಮಾಡಬೇಕೆಂದರೂ ಮನೆಕೆಲಸ ಮಾಡುತ್ತೇನೆ. ಮಾನಸಿಕವಾಗಿ ಆ ಪಾತ್ರದಲ್ಲಿ ಮುಳುಗುತ್ತೇನೆಂದು ಹೇಳಿದ್ದಾರೆ.

ಶಾಖಹಾರಿ ಚಿತ್ರದಲ್ಲಿ ರಂಗಾಯಣ ರಘು ಸುಬ್ಬಣ್ಣ ಹೆಸರಿನಲ್ಲಿ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಸಿನಿಮಾಗಳು ನನ್ನ ಕೈಯಲ್ಲಿದ್ದು, ಮೂರ್ನೇ ಕೃಷ್ಣಪ್ಪ, ಅಜ್ಞಾತವಾಸಿ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಪ್ರತಿಯೊಂದು ಪಾತ್ರವೂ ನನಗೆ ವೈವಿಧ್ಯಮಯ ಪಾತ್ರಗಳ ಅನ್ವೇಷಿಸಲು ಮತ್ತು ಸೃಜನಾತ್ಮಕವಾಗಿ ಸವಾಲು ಹಾಕಲು ನನಗೆ ಅವಕಾಶವನ್ನು ನೀಡಿದೆ ಎಂದು ತಿಳಿಸಿದ್ದಾರೆ.

ಶಾಖಾಹಾರಿ ಚಿತ್ರವು ಶಿವಮೊಗ್ಗದ ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ಮಲೆನಾಡಿನ ನಿಗೂಢ ಘಟನೆಗಳ ಸುತ್ತ ಸುತ್ತುತ್ತದೆ. ರಘು ಅಡುಗೆಯ ಪಾತ್ರದಲ್ಲಿ, ಗೋಪಾಲಕೃಷ್ಣ ದೇಶಪಾಂಡೆ ಪೊಲೀಸ್ ಅಧಿಕಾರಿಯಾಗಿ ಮತ್ತು ಸುಜಯ್ ಶಾಸ್ತ್ರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದರೆ, ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಸಿನಿಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

SCROLL FOR NEXT