ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

'ಅಯ್ಯೋ ತಗಡೇ... ಕಾಟೇರ ಟೈಟಲ್ ಇಟ್ಟಿದ್ದೇ ನಾನು': ಉಮಾಪತಿ ವಿರುದ್ಧ ನಟ ದರ್ಶನ್ ಗರಂ

'ಕಾಟೇರ' ಚಿತ್ರ ಪ್ರದರ್ಶನ 50 ದಿನ ಪೂರೈಸಿದ ಸಂದರ್ಭ ಮತ್ತು ಬೆಂಗಳೂರಿನ ಪ್ರಸನ್ನ ಥಿಯೇಟರಿನ 50ವರ್ಷದ ಸಂಭ್ರಮಾಚರಣೆಯನ್ನು ಮಂಗಳವಾರ ಏರ್ಪಡಿಸಲಾಗಿತ್ತು.

ಬೆಂಗಳೂರು: 'ಕಾಟೇರ' ಚಿತ್ರ ಪ್ರದರ್ಶನ 50 ದಿನ ಪೂರೈಸಿದ ಸಂದರ್ಭ ಮತ್ತು ಬೆಂಗಳೂರಿನ ಪ್ರಸನ್ನ ಥಿಯೇಟರಿನ 50ವರ್ಷದ ಸಂಭ್ರಮಾಚರಣೆಯನ್ನು ಮಂಗಳವಾರ ಏರ್ಪಡಿಸಲಾಗಿತ್ತು.

ಸಮಾರಂಭದಲ್ಲಿ ಪ್ರಸನ್ನ ಥಿಯೇಟರ್ ಬಗ್ಗೆ ಮಾತನಾಡಿದ ಬಳಿಕ ನಟ ದರ್ಶನ್ ಮಾತು ಕಾಟೇರ ಟೈಟಲ್ ಬಗ್ಗೆ ಹೊರಳಿತು. ಈ ಹಿಂದೆ ಹಲವು ಬಾರಿ ರಾಬರ್ಟ್ ನಿರ್ಮಾಪಕ ಉಮಾಪತಿ ಅವರು ಚಿತ್ರಕ್ಕೆ ಕಾಟೇರ ಎಂದು ಟೈಟಲ್ ಇಡುವಂತೆ ಹೇಳಿದ್ದು ನಾನು ಎಂದು ಹೇಳಿದ್ದರು.

ಅದಕ್ಕೆ ಇಂದು ಖಡಕ್ ಆಗಿ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ದರ್ಶನ್, 'ಅಯ್ಯೋ ತಗಡೇ, ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು, ಕೊಟ್ಟಿದ್ದು, ಮಾಡಿದ್ದು ಹೇಳಬಾರದು. ಒಂದ್ಸಲ ಆಗಿರೋದ್ರಿಂದ ಬುದ್ದಿ ಕಲಿತಿಲ್ಲ. ನಿನ್ನ ಜಡ್ಜ್‌ಮೆಂಟ್‌ ಚೆನ್ನಾಗಿದೆ ಎಂದಾದರೆ ಯಾಕೆ ಈ ಕಥೆ ಬಿಟ್ಟೆ. ಕಾಟೇರ್‌ ಟೈಟಲ್‌ ಕೊಟ್ಟಿದ್ದೇ ನಾನು'' ಎಂದು ತಿರುಗೇಟು ಕೊಟ್ಟರು.

ತಾವು ಹೇಳುತ್ತಿರುವ ಮಾತು ನಿಜ ಎಂದು ಸಭಿಕರ ಮುಂದೆ ಸಾಬೀತುಪಡಿಸಲು ಮದಗಜ ನಿರ್ದೇಶಕ ಮಹೇಶ್ ನ್ನು ಕರೆದು ಹೇಳು ಎಂದರು. ಆದರೆ ಮಹೇಶ್, ಮದಗಜ ಟೈಟಲ್‌ ನಿರ್ಮಾಪಕ ರಾಮಮೂರ್ತಿ ಅವರ ಹತ್ರ ಇತ್ತು. ಕಾಟೇರ ಟೈಟಲ್ ಉಮಾಪತಿ ಅವರು ಕೊಟ್ರು. ಮದಗಜ ಟೈಟಲ್‌ನ ದರ್ಶನ್‌ ಅವರು ಕೊಡಿಸಿದ್ರು ಅಂತ ಮಹೇಶ್‌ ಹೇಳಿದರು.

ಆಗ ದರ್ಶನ್ ಕಾಟೇರ ಸಿನಿಮಾದ ನಿದೇಶಕ ತರುಣ್‌ ಸುಧೀರ್‌ ಅವರನ್ನು ವೇದಿಕೆ ಮೇಲೆ ಕರೆಸಿದರು. ಈ ಟೈಟಲ್‌ ದರ್ಶನ್ ಅವರೇ ಕೊಟ್ಟಿದ್ದು ಎಂದು ತರುಣ್ ಹೇಳಿದರು. ಅಷ್ಟಕ್ಕೇ ಸುಮ್ಮನಾಗದ ದರ್ಶನ್ , ಯಾಕಪ್ಪ, ಯಾವಾಗಲೂ ಬಂದು ನಮ್ಮ ಕೈಯಲ್ಲೇ ಗುಮ್ಮಿಸಿಕೊಳ್ತಿಯಾ, ಎಲ್ಲೋ ಇದ್ಯಾ ಚೆನ್ನಾಗಿ ಇರು. ತಪ್ಪು ಇದು ಎಂದು ಎಚ್ಚರಿಕೆ ರೀತಿಯಲ್ಲಿ ಉಮಾಪತಿಗೆ ದರ್ಶನ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಮಧ್ಯಪ್ರದೇಶ: ಕಿರಿಯ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಹೊಡೆತ; ಕೈ ಸುಟ್ಟು ದೌರ್ಜನ್ಯ!