ತಾಪ್ಸಿ ಪನ್ನು 
ಸಿನಿಮಾ ಸುದ್ದಿ

ಹಸೆಮಣೆ ಏರಲು ಸಜ್ಜಾದ ತಾಪ್ಸಿ: ಬ್ಯಾಡ್ಮಿಂಟನ್​ ಆಟಗಾರನ ಜೊತೆ ವಿವಾಹ; ಬಾಲಿವುಡ್ ಮಂದಿಗೆ ಇಲ್ಲ ಆಹ್ವಾನ!

ಖ್ಯಾತ ನಟಿ ತಾಪ್ಸಿ ಪನ್ನು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಶೀಘ್ರವೇ ಅವರು ಮದುವೆ ಆಗಲಿದ್ದಾರೆ. 10 ವರ್ಷಗಳಿಂದ ಅವರು ರಿಲೇಷನ್​ಶಿಪ್​ನಲ್ಲಿ ಇದ್ದಾರೆ.

ಖ್ಯಾತ ನಟಿ ತಾಪ್ಸಿ ಪನ್ನು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಶೀಘ್ರವೇ ಅವರು ಮದುವೆ ಆಗಲಿದ್ದಾರೆ. 10 ವರ್ಷಗಳಿಂದ ಅವರು ರಿಲೇಷನ್​ಶಿಪ್​ನಲ್ಲಿ ಇದ್ದಾರೆ. ಈಗ ತಮ್ಮ ಪ್ರೀತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಅವರು ನಿರ್ಧರಿಸಿದ್ದಾರೆ.

ಬ್ಯಾಡ್ಮಿಂಟನ್​ ಆಟಗಾರ ಮಥಾಯಸ್​ ಬೋ ಅವರನ್ನು ತಾಪ್ಸಿ ಪನ್ನು ಅವರು ಪ್ರೀತಿಸುತ್ತಿದ್ದರು, ಮತ್ತೊಂದು ಅಚ್ಚರಿ ವಿಚಾರ ಏನೆಂದರೆ, ಈ ಮದುವೆಗೆ ಬಾಲಿವುಡ್​ ಮಂದಿಯನ್ನು ಆಹ್ವಾನಿಸಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ತಾಪ್ಸಿ ಪನ್ನು ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ಸಾಕಷ್ಟು ಮಂದಿ ಸ್ನೇಹಿತರು ಇದ್ದಾರೆ. ಹಾಗಿದ್ದರೂ ಕೂಡ ತಮ್ಮ ಮದುವೆಗೆ ಅವರು ಯಾವುದೇ ಸೆಲೆಬ್ರಿಟಿಗಳನ್ನು ಆಹ್ವಾನಿಸುತ್ತಿಲ್ಲ ಎನ್ನಲಾಗಿದೆ. ಕೇವಲ ಕುಟುಂಬದವರ ಸಮ್ಮುಖದಲ್ಲಿ ಮದುವೆ ಆಗಲು ಅವರು ನಿರ್ಧರಿಸಿದ್ದಾರೆ.

ಉದಯಪುರದಲ್ಲಿ ಅವರ ಮದುವೆ ನಡೆಯಲಿದೆ. ಮದುವೆಯ ಬಗ್ಗೆ ತಾಪ್ಸಿ ಪನ್ನು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ.ಮಥಾಯಸ್​ ಬೋ ಅವರು ಕ್ರೈಸ್ತ ಧರ್ಮಕ್ಕೆ ಸೇರಿದವರು. ತಾಪ್ಸಿ ಪನ್ನು ಅವರದ್ದು ಸಿಖ್​ ಧರ್ಮ. ಹಾಗಾಗಿ ಅವರಿಬ್ಬರ ಮದುವೆಯನ್ನು ಎರಡೂ ಧರ್ಮದ ಸಂಪ್ರದಾಯದ ಪ್ರಕಾರ ನಡೆಸಲು ನಿರ್ಧರಿಸಲಾಗಿದೆ.

ತಮ್ಮ ಮದುವೆ ಯಾವ ರೀತಿ ನಡೆಯಬೇಕು ಎಂದು ಈ ಹಿಂದೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಾಪ್ಸಿ ಪನ್ನು ಹೇಳಿಕೊಂಡಿದ್ದರು. ‘ಒಂದು ದಿನದ ಮದುವೆ. ಅದರಲ್ಲಿ ಯಾವುದೇ ಡ್ರಾಮಾ ಇರಬಾರದು. ಯಾಕೆಂದರೆ, ನನ್ನ ವೃತ್ತಿ ಜೀವನದಲ್ಲಿ ಈಗಾಗಲೇ ಡ್ರಾಮಾ ತುಂಬಿದೆ’ ಎಂದು ಅವರು ಹೇಳಿದ್ದರು. ಅಲ್ಲದೇ ತಡರಾತ್ರಿವರೆಗೆ ನಡೆಯುವ ಸಂಪ್ರದಾಯಗಳು ಕೂಡ ಇರಬಾರದು ಎಂದು ತಾಪ್ಸಿ ಪನ್ನು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!