ಕಾರ್ತಿಕ್ ಹಾಗೂ ನಮ್ರತಾ 
ಸಿನಿಮಾ ಸುದ್ದಿ

ಹಸೆಮಣೆ ಮೇಲೆ ನಮ್ರತಾ-ಕಾರ್ತಿಕ್: ಹುಬ್ಬೇರಿಸಿದ ಅಭಿಮಾನಿಗಳು, ಗೊಂದಲಗಳಿಗೆ ತೆರೆ!

ಕಾರ್ತಿಕ್ ಹಾಗೂ ನಮ್ರತಾ ಅವರ ಸ್ನೇಹ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕವೂ ಮುಂದುವರೆದಿದ್ದು, ಈ ನಡುವಲ್ಲೇ ಇಬ್ಬರು ಹಸೆಮಣೆ ಮೇಲೆ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಫೋಟೋ ನೋಡಿದ ಅಭಿಮಾನಿಗಳು ಆಶ್ಚರ್ಯ ಹಾಗೂ ಗೊಂದಲಕ್ಕೊಳಗಾಗಿದ್ದಾರೆ.

ಕಾರ್ತಿಕ್ ಹಾಗೂ ನಮ್ರತಾ ಅವರ ಸ್ನೇಹ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕವೂ ಮುಂದುವರೆದಿದ್ದು, ಈ ನಡುವಲ್ಲೇ ಇಬ್ಬರು ಹಸೆಮಣೆ ಮೇಲೆ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಫೋಟೋ ನೋಡಿದ ಅಭಿಮಾನಿಗಳು ಆಶ್ಚರ್ಯ ಹಾಗೂ ಗೊಂದಲಕ್ಕೊಳಗಾಗಿದ್ದಾರೆ.

ನಮ್ರತಾ ಮತ್ತು ಕಾರ್ತಿಕ್ ಪಕ್ಕಾ ಸಂಪ್ರದಾಯಿಕ ಉಡುಪು, ಮದುವೆ ಗೆಟಪ್ ನಲ್ಲಿದ್ದು, ಇಬ್ಬರ ಈ ಫೋಟೋಗಳು ಅಭಿಮಾನಿಗಳಿಗೆ ಶಾಕ್ ನೀಡಿದೆ. ಫೋಟೋಗಳನ್ನು ನೋಡಿದ ಕೆಲವರು ಇಬ್ಬರಿಗೂ ಶುಭಾಶಯಗಳನ್ನು ಕೋರಿದ್ದಾರೆ.

ಆದರೆ, ಈ ಫೋಟೋಗಳ ಅಸಲಿಯತ್ತು ಬೇರೆಯದ್ದೇ ಇದೆ. ನಮ್ರತಾ ಹಾಗೂ ಕಾರ್ತಿಕ್ ಖ್ಯಾತ ಉದ್ಯಮಿ, ರಾಜಕಾರಣಿ ಟಿಎ ಶರವಣ ಅವರ ಚಿನ್ನದ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್​ ಬ್ರ್ಯಾಂಡ್​ಗಾಗಿ ಜಾಹೀರಾತು ಚಿತ್ರೀಕರಣ ಮಾಡಿದ್ದಾರೆಂದು ತಿಳಿದುಬಂದಿದೆ.

ಇಬ್ಬರೂ ವಧು-ವರರಂತೆ ವೇಷ ತೊಟ್ಟು ಮೈತುಂಬ ಚಿನ್ನದ ಆಭರಣಗಳನ್ನು ತೊಟ್ಟು ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ರೆಸಾರ್ಟ್ ಒಂದರಲ್ಲಿ ಜಾಹೀರಾತಿನ ಚಿತ್ರೀಕರಣ ನಡೆದಿದೆ ಎಂದು ವರದಿಗಳು ತಿಳಿಸಿವೆ.

ಟಿಎ ಶರವಣ ಕೂಡ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ವಧು-ವರರಿಗೆ ಆಶೀರ್ವಾದ ಮಾಡುವ ದೃಶ್ಯದಲ್ಲಿ ಹಿರಿಯರಾಗಿ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣದಲ್ಲಿ ಕಾರ್ತಿಕ್ ಹಾಗೂ ನಮ್ರತಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT