ಸಿನಿಮಾ ಸುದ್ದಿ

ಜಸ್ಟ್ ಪಾಸ್ ಚಿತ್ರದ ಪ್ರಮುಖ ಆಕರ್ಷಣೆಯೇ ನಟ 'ರಂಗಾಯಣ ರಘು' ಪಾತ್ರ; ನಿರ್ದೇಶಕರು ಹೇಳಿದ್ದಿಷ್ಟು...

Ramyashree GN

ಶ್ರೀ ಮಹಾದೇವ್ ಅಭಿನಯದ, ಕೆಎಂ ರಘುನಾಥ್ ನಿರ್ದೇಶನದ 'ಜಸ್ಟ್ ಪಾಸ್' ಚಿತ್ರವು ಈ ವರ್ಷದ ಆರಂಭದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿರುವುದಾಗಿ ಈ ಮೊದಲೇ ನಾವು ವರದಿ ಮಾಡಿದ್ದೆವು. ಈ ಚಿತ್ರದ ಮೂಲಕ ನಟ ರಂಗಾಯಣ ರಘು ಅವರು ಮೊದಲ ಬಾರಿಗೆ ಪ್ರಿನ್ಸಿಪಾಲ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಇದೀಗ ಹಿರಿಯ ನಟನ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಪಾತ್ರದ ಬಗ್ಗೆ ಕೆಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದೆ.

 

'ರಂಗಾಯಣ ರಘು ಅವರ ಪಾತ್ರವು ಯೌವನ ಮತ್ತು ಬುದ್ಧಿವಂತಿಕೆಯ ಮಿಶ್ರಣವಾಗಿದೆ. ತನ್ನ ಶಿಕ್ಷಣ ಸಂಸ್ಥೆಯಿಂದ ಉತ್ತೀರ್ಣರಾದವರಿಗೆ ಅವರು ಜೀವನಾಡಿಯಾಗಿದ್ದಾರೆ' ಎಂದು ನಿರ್ದೇಶಕರು ಹೇಳುತ್ತಾರೆ. 

ಚಿತ್ರದಲ್ಲಿ ಪ್ರಕಾಶ್ ತುಮಿನಾಡು, ಸಾಧು ಕೋಕಿಲ, ಗೋವಿಂದೇಗೌಡ, ದೀಪಕ್ ರೈ ಮತ್ತು ದಾನಪ್ಪ ಮುಂತಾದವರು ತಾರಾಗಣದಲ್ಲಿದ್ದಾರೆ.

'ಕಥೆಯೇ ಸಿನಿಮಾದ ಬೆನ್ನೆಲುಬಾದರೆ, ರಂಗಾಯಣ ರಘು ಅವರ ಪಾತ್ರ ಚಿತ್ರಕ್ಕೆ ಮತ್ತೂಂದು ತೂಕವನ್ನು ನೀಡುತ್ತದೆ. ಅವರ ಉಪಸ್ಥಿತಿಯು ಕಥೆಯನ್ನು ರೂಪಿಸಿತು ಮತ್ತು ಅವರು ಈ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ. ಅವರು ಸಮಾಜದ ಬಗ್ಗೆ ಆಳವಾಗಿ ಯೋಚಿಸುವ ವ್ಯಕ್ತಿಯಾಗಿದ್ದು, ಅವರ ಸರಳ ವ್ಯಕ್ತಿತ್ವ, ಸಾಧಾರಣ ಜೀವನಶೈಲಿಯನ್ನು ಹೊಂದಿದ್ದಾರೆ. ಇಡೀ ಚಿತ್ರದುದ್ದಕ್ಕೂ, ಅವರು ಒಂದೇ ಪಾದರಕ್ಷೆಗಳನ್ನು ಧರಿಸುತ್ತಾರೆ. ಅವರ ಪಾತ್ರವು ಹೆಚ್ಚು ವಿಶಿಷ್ಟ ಅಂಶಗಳನ್ನು ಹೊಂದಿದೆ' ಎಂದು ನಿರ್ದೇಶಕರು ವಿವರಿಸುತ್ತಾರೆ. 

ರೇಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆವಿ ಶಶಿಧರ್ ನಿರ್ಮಿಸಿರುವ ಜಸ್ಟ್ ಪಾಸ್ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ, ಸುಜಯ್ ಕುಮಾರ್ ಛಾಯಾಗ್ರಹಣವಿದೆ.

SCROLL FOR NEXT