ವಿಜಯ್ ರಾಘವೇಂದ್ರ 
ಸಿನಿಮಾ ಸುದ್ದಿ

ಪೊಲೀಸರನ್ನು ಹಾಸ್ಯಾಸ್ಪದವಾಗಿ ತೋರಿಸುವ ಪಾತ್ರಗಳು ನನಗೆ ಇಷ್ಟವಿಲ್ಲ: ನಟ ವಿಜಯ್ ರಾಘವೇಂದ್ರ

ವಿಜಯ್ ರಾಘವೇಂದ್ರ ಮತ್ತೊಮ್ಮೆ ಖಾಕಿ ತೊಟ್ಟಿದ್ದು, ನಾಲ್ಕನೇ ಬಾರಿಗೆ ಅದರ ಮೇಲಿನ ಒಲವನ್ನು ಮೆಲುಕು ಹಾಕಿದರು. ತನಿಖಾಧಿಕಾರಿ ಪಾತ್ರ ನಿರ್ವಹಿಸುವಾಗ ಆದ ಸಸ್ಪೆನ್ಸ್ ಮತ್ತು ಜಟಿಲತೆಗಳನ್ನು ಬಿಚ್ಚಿಡುತ್ತಾ, ಅನುಭವವನ್ನು ವಿಭಿನ್ನವಾಗಿ ವಿವರಿಸಿದರು.

ವಿಜಯ್ ರಾಘವೇಂದ್ರ ಮತ್ತೊಮ್ಮೆ ಖಾಕಿ ತೊಟ್ಟಿದ್ದು, ನಾಲ್ಕನೇ ಬಾರಿಗೆ ಅದರ ಮೇಲಿನ ಒಲವನ್ನು ಮೆಲುಕು ಹಾಕಿದರು. ತನಿಖಾಧಿಕಾರಿ ಪಾತ್ರ ನಿರ್ವಹಿಸುವಾಗ ಆದ ಸಸ್ಪೆನ್ಸ್ ಮತ್ತು ಜಟಿಲತೆಗಳನ್ನು ಬಿಚ್ಚಿಡುತ್ತಾ, ಅನುಭವವನ್ನು ವಿಭಿನ್ನವಾಗಿ ವಿವರಿಸಿದರು.

ಕೇಸ್ ಆಫ್  ಕೊಂಡಾಣ್ಣ ಚಿತ್ರದಲ್ಲಿನ ತನ್ನ ಪಾತ್ರ ವಿಶಿಷ್ಠವಾಗಿದೆ. ಸೀತಾರಾಮ್ ಬೆನೊಯ್ ಚಿತ್ರದಲ್ಲಿ ಮಾಡಿದ್ದಕ್ಕಿಂತ ಹೆಚ್ಚು ಪ್ರೌಢ ಮತ್ತು ಪ್ರಭಾವ ಬೀರುವ ಪಾತ್ರ ನಿರ್ವಹಿಸಿದ್ದೇನೆ. ವಿಲ್ಸನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೊಂಡಾಣ ಎಂಬುದು ಒಂದು ಕಾಲ್ಪನಿಕ ಸ್ಥಳವಾಗಿದೆ. ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಚಿತ್ರ ಅಪರಾಧದ ಸುತ್ತ ಸುತ್ತುತ್ತದೆ. ಅಲ್ಲದೇ, ನನ್ನ ಚೌಕಟ್ಟಿಗೆ ಮೀರಿದ ಪಾತ್ರವಾಗಿದೆ ಎಂದು ತಿಳಿಸಿದರು. 

ನಿಸ್ಸಂದೇಹವಾಗಿ, ವಿಜಯ್ ರಾಘವೇಂದ್ರ ಅವರು ತಮ್ಮ ಬಹುಮುಖತೆಯನ್ನು ಪ್ರದರ್ಶಿಸುತ್ತಾರೆ.  ಆದರೆ ಪೋಲೀಸ್ ಪಾತ್ರಗಳಿಗೆ ಅವರ ಒಲವಿನ ಬಗ್ಗೆ ಕೇಳಿದಾಗ, "ಪೊಲೀಸ್ ಪಾತ್ರ ನಿರ್ವಹಿಸುವ ಬಗ್ಗೆ ಒಂದು ಪ್ರಾಮಾಣಿಕ ಅಭಿಪ್ರಾಯವೆಂದರೆ 'ಇದು ಸುಲಭವಲ್ಲ. ಪ್ರತಿಯೊಬ್ಬ ನಟನು ಅಂತಹ ಪಾತ್ರಗಳಿಗೆ ಮನಬಂದಂತೆ ಹೊಂದಿಕೊಳ್ಳುವುದಿಲ್ಲ. ಇದು ಯಾವಾಗಲೂ ನನ್ನ ಕನಸಾಗಿದೆ ಮತ್ತು ಅದನ್ನು ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ.  ಶಂಕರ್ ನಾಗ್ ಮತ್ತು ದೇವರಾಜ್ ರಂತಹ ನಟರಿಂದ ಸ್ಫೂರ್ತಿ ಪಡೆದು, ಕಮರ್ಷಿಯಲ್ ಮಸಾಲಾ ಚಿತ್ರದಿಂದ ದೂರು ಸರಿದು ಸವಾಲಾಗಿ ಸ್ವೀಕರಿಸಿ ಪೊಲೀಸ್ ಪಾತ್ರ ಮಾಡಿದ್ದೇನೆ ಎಂದರು. 

ಸೀತಾರಾಮ್ ಬೆನೊಯ್ ನಂತರ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಅವರೊಂದಿಗೆ ಎರಡನೇ ಚಿತ್ರದಲ್ಲಿ ನಟಿಸಿರುವ ವಿಜಯ್ ರಾಘವೇಂದ್ರ,  ಶೆಟ್ಟಿ ಅವರ ಚಿತ್ರಕಥೆ ಮತ್ತು ಕಥೆ ಹೇಳುವ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಚಿತ್ರದ ಸವಾಲುಗಳನ್ನು ಪ್ರತಿಬಿಂಬಿಸುತ್ತಾ, ನಾನು ಪ್ರತಿಭಾನ್ವಿತ ನಟನೋ ಅಥವಾ ಹುಟ್ಟು ನಟನೋ ನನಗೆ ಗೊತ್ತಿಲ್ಲ, ಆದರೆ ನಾನು ಖಂಡಿತವಾಗಿಯೂ ನಿರ್ದೇಶಕನ ನಟ." ಕೊಂಡಾಣದ ಸಂದರ್ಭದಲ್ಲಿ, ನಿರೂಪಣೆ ತನಿಖಾಧಿಕಾರಿಯ ಪ್ರಯಾಣ ಮತ್ತು ಅವರು ಎದುರಿಸುವ ಸಂಕೀರ್ಣತೆಗಳನ್ನು ನನ್ನ ಪಾತ್ರದ ಮೂಲಕ ಚಿತ್ರಿಸುತ್ತದೆ ಎಂದು ಅವರು ವಿವರಿಸಿದರು. 

ಚೌಕಾ ನಂತರ ಎರಡನೇ ಬಾರಿಗೆ ಭಾವನಾ ಅವರೊಂದಿಗೆ ಮತ್ತೆ ಒಂದಾಗಿರುವ ವಿಜಯ್ ರಾಘವೇಂದ್ರ "ಭಾವನಾ ಅವರೊಂದಿಗೆ ಕೆಲಸ ಮಾಡುವುದು ಸಂಪೂರ್ಣ ಸಂತೋಷವಾಗಿದೆ. ಈ ಚಿತ್ರದಲ್ಲಿ ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ, ಸುಂದರ್ ರಾಜ್ ಸೇರಿದಂತೆ ಕೆಲ ಹೊಸ ಪ್ರತಿಭೆಗಳು ಅಭಿನಯಿಸಿದ್ದಾರೆ. ಒಟ್ಟಾರೆಯಾಗಿ, ಕೇಸ್ ಆಫ್ ಕೊಂಡಾಣ ಮನರಂಜನೆಯ ಚಿತ್ರವಾಗಿದೆ ಎನ್ನುತ್ತಾರೆ.

ಪೊಲೀಸ್ ಪಾತ್ರಗಳನ್ನು ಮೀರಿ ಹೋಗುವ ಅಥವಾ ಅವುಗಳನ್ನು ಹಾಸ್ಯಮಯ ವ್ಯಕ್ತಿಗಳಾಗಿ ಪರಿವರ್ತಿಸುವ ಪಾತ್ರಗಳನ್ನು ನಾನು ಇಷ್ಟಪಡುವುದಿಲ್ಲ. ನಿಜ ಜೀವನದ ಪೊಲೀಸ್ ಉದ್ಯೋಗಗಳು ಹೆಚ್ಚು ಬದ್ಧತೆಯಿಂದ ಕೊಡಿರುತ್ತವೆ. ಅವರನ್ನು ಜನರು ಸರಿಯಾಗಿ ಅರ್ಥಮಾಡಿಕೊಳ್ಳುವಂತಹ ಅಗತ್ಯವಿದೆ.  ಮಾಜಿ ಪೊಲೀಸ್ ಅಧಿಕಾರಿಯಾಗಿರುವ ತಮ್ಮ ಮಾವನಿಂದ ನಾನು ಈ ಸ್ಫೂರ್ತಿಯನ್ನು ಪಡೆದುಕೊಂಡಿದ್ದೇನೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT