ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟನೆಯ ಹಿರಣ್ಯ ಸಿನಿಮಾ ಟೀಸರ್ ಮೂಲಕ ಭರವಸೆ ಹುಟ್ಟಿಸಿದೆ. ಇದೀಗ ತಾಯಿ ಪ್ರೀತಿ ವಿವರಿಸುವ ಹಿರಣ್ಯನ ಹೃದಯ ಮೀಟುವ ಹಾಡು ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯದ ಹಾಡಿಗೆ ಸುಪ್ರಿಯಾ ರಾಮ್ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ಹಿರಣ್ಯ ಸಿನಿಮಾ ಜುಲೈ 19 ರಂದು ರಿಲೀಸ್ ಆಗಲಿದೆ. ಚಿತ್ರದ ಪೋಸ್ಟ್-ಪ್ರೊಡಕ್ಷನ್ ಮುಕ್ತಾಯವಾಗುತ್ತಿದ್ದಂತೆ, ನಿರ್ದೇಶಕರು ಜುಡಾ ಸ್ಯಾಂಡಿ ಅವರ 'ನನಗಂತಾನೆ' ಎಂಬ ಹೊಸ ಹಾಡನ್ನು ಅನಾವರಣಗೊಳಿಸಿದ್ದಾರೆ, ಇದು ತಾಯಿಯ ಪ್ರೀತಿಗೆ ಗೌರವ ಸಲ್ಲಿಸುತ್ತದೆ.
ಹಿರಣ್ಯ ಒಂದು ಭಾವನಾತ್ಮಕ ಕಥೆ ಹೊಂದಿರುವ ಆಕ್ಷನ್-ಪ್ಯಾಕ್ಡ್ ಡ್ರಾಮಾ ಎಂದು ಬಿಂಬಿಸಲಾಗಿದೆ. ರಾಜವರ್ಧನ್ ಆಕ್ಷನ್-ಹೀರೋ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಏಳು ಮಹತ್ವದ ಫೈಟಿಂಗ್ ದೃಶ್ಯಗಳನ್ನು ವಿನೋದ್ ಮತ್ತು ಅರ್ಜುನ್ ಸಂಯೋಜನೆ ಮಾಡಿದ್ದಾರೆ.
ನಾಯಕನಾಗಿ ಅಭಿನಯಿಸಿರುವ ರಾಜವರ್ಧನ್ ಗೆ ಜೋಡಿಯಾಗಿ ರಿಹಾನಾ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಿರಣ್ಯ ಚಿತ್ರವನ್ನು ಪ್ರವೀಣ್ ಅವ್ಯೂಕ್ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಇದು ಅವರಿಗೆ ಮೊದಲ ಚಿತ್ರ. ಇದಕ್ಕೂ ಮುನ್ನ ಕಿರುಚಿತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ.