ಇಂದ್ರಜಿತ್ ಲಂಕೇಶ್ ಮತ್ತು ಯೋಗಿ 
ಸಿನಿಮಾ ಸುದ್ದಿ

ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ'ಚಿತ್ರದಲ್ಲಿ ನಟ ಯೋಗಿ ವಿಶೇಷ ಪಾತ್ರ!

ಗೌರಿ ಸಿನಿಮಾದ ಹೊಸ ಅಪ್ ಡೇಟ್ ಪ್ರಕಾರ ಸಿದ್ಲಿಂಗು ನಟ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇಂದ್ರಜಿತ್ ಮತ್ತು ಯೋಗಿ ಜೊತೆಗಿರುವ ಫೋಟೋ ಹಲವು ಊಹಾ ಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಇಂದ್ರಜಿತ್ ಲಂಕೇಶ್ ತಮ್ಮ ನಿರ್ದೇಶನದ ಗೌರಿ ಸಿನಿಮಾ ಮೂಲಕ ಪುತ್ರ ಸಮರ್ಜಿತ್ ನನ್ನುಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಇದುವರೆಗೂ ಪ್ರಮುಖ ಪಾತ್ರಗಳ ಬಗ್ಗೆ ನಿರ್ದೇಶಕರು ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ.

ಗೌರಿ ಸಿನಿಮಾದ ಹೊಸ ಅಪ್ ಡೇಟ್ ಪ್ರಕಾರ ಸಿದ್ಲಿಂಗು ನಟ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇಂದ್ರಜಿತ್ ಮತ್ತು ಯೋಗಿ ಜೊತೆಗಿರುವ ಫೋಟೋ ಹಲವು ಊಹಾ ಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಗೌರಿ ಸಿನಿಮಾ ಸ್ವಾತಂತ್ರ್ಯ ದಿನಾಚರಣೆಯಂದು ರಿಲೀಸ್ ಆಗಲಿದೆ. ಸಾನ್ಯಾ ಅಯ್ಯರ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ನೈಜ ಘಟನೆಗಳಿಂದ ಪ್ರೇರಿತರಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿನಿಮಾಗೆ ತಮ್ಮ ಸಹೋದರಿ ಗೌರಿ ಹೆಸರನ್ನು ಇಟ್ಟಿದ್ದಾರೆ. ಗೌರಿ ಪ್ರಮುಖ ಪಾತ್ರಗಳಲ್ಲಿ ಸ್ವೀಜಲ್ ಮತ್ತು ಚಂದು ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. 'ಟೈಮ್ ಬರುತ್ತೆ,' 'ಧೂಳ್ ಎಬ್ಬಿಸುವ ,' ಮತ್ತು 'ಮುದ್ದಾದ' ಅಂತಹ ಮೆಲೋಡಿ ಹಾಡುಗಳಿಗೆ ಜಸ್ಸಿ ಗಿಫ್ಟ್ ಮತ್ತು ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಎಜೆ ಶೆಟ್ಟಿ ನಿರ್ವಹಿಸಿದ್ದಾರೆ. ಏತನ್ಮಧ್ಯೆ, ಯೋಗಿ ಅವರು ಸಿದ್ಲಿಂಗು 2, ರೋಸಿ, ಪರಿಮಳ ಲಾಡ್ಜ್, ಆಡಿದ್ದೇ ಆಟ ಮತ್ತು ಅವರ ತಮಿಳು ಚೊಚ್ಚಲ ಚಿತ್ರ ಸೇರಿದಂತೆ ಅನೇಕ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ