ಜೀನಿಯಸ್ ಮುತ್ತ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ಜೀನಿಯಸ್ ಮುತ್ತ' ಸಿನಿಮಾ ಮೂಲಕ ನಿರ್ದೇಶನಕ್ಕಿಳಿದ ನಾಗಾಭರಣ ಪತ್ನಿ ನಾಗಿಣಿ ಭರಣ!

ನಾಗಿಣಿ ಅವರು ನನ್ನ ಎಲ್ಲಾ ಸಿನಿಮಾ, ಧಾರಾವಾಹಿಗಳ ನಿರ್ದೇಶನಕ್ಕೆ ಬಹಳ ಹಿಂದಿನಿಂದ ಸಹಕಾರ ನೀಡುತ್ತಾ ಬಂದಿದ್ದಾರೆ. ಸದ್ಯ ಮೊದಲ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾನು ಈ ಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದೇನೆ, ಈಗ ಸ್ವತಂತ್ರ ನಿರ್ದೇಶನ ಮಾಡಿದರಷ್ಟೆ ಎಂದು ನಾಗಭರಣ ಹೇಳಿದ್ದಾರೆ.

ನಿರ್ದೇಶಕ ನಾಗಾಭರಣ ಪತ್ನಿ ನಾಗಿಣಿ ಭರಣ ಕೂಡ ನಿರ್ದೇಶನಕ್ಕಿಳಿದಿದ್ದಾರೆ. 'ಜೀನಿಯಸ್ ಮುತ್ತ' ಸಿನಿಮಾ ಮೂಲಕ ಸ್ವತಂತ್ರ್ಯ ನಿರ್ದೇಶಕಿಯಾಗಿದ್ದಾರೆ.

ನಾಗಿಣಿ ಅವರು ನನ್ನ ಎಲ್ಲಾ ಸಿನಿಮಾ, ಧಾರಾವಾಹಿಗಳ ನಿರ್ದೇಶನಕ್ಕೆ ಬಹಳ ಹಿಂದಿನಿಂದ ಸಹಕಾರ ನೀಡುತ್ತಾ ಬಂದಿದ್ದಾರೆ. ಸದ್ಯ ಮೊದಲ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾನು ಈ ಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದೇನೆ, ಈಗ ಸ್ವತಂತ್ರ ನಿರ್ದೇಶನ ಮಾಡಿದರಷ್ಟೆ ಎಂದು ನಾಗಭರಣ ಹೇಳಿದ್ದಾರೆ.

ಜೀನಿಯಸ್ ಮುತ್ತ'ನಾಗಿ ಮಾಸ್ಟರ್ ಶ್ರೇಯಸ್ ಎಂಬ ಯುವಪ್ರತಿಭೆ ನಟಿಸಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ಚಿನ್ನಾರಿಮುತ್ತನಾಗಿ ಮೆಚ್ಚುಗೆ ಪಡೆದಿರುವ ಜನಪ್ರಿಯ ನಟ ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ. ಇತ್ತೀಚೆಗೆ ತಮ್ಮ ಚಿತ್ರದ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಯುವ ಪ್ರತಿಭೆ ಮಾಸ್ಟರ್ ಶ್ರೇಯಸ್ ಮಾತನಾಡಿ, ನಾನು ನಾಗಾಭರಣ ಸರ್ ಬಳಿ ನಟನೆ ಕಲಿತಿದ್ದೇನೆ. ಆನಂತರ ಅಮ್ಮನಿಗೆ ನಾನು ನಟನೆ ಮಾಡಬೇಕೆಂಬ ಆಸೆಯಾಯಿತು. ಈ ಚಿತ್ರದಲ್ಲಿ ಜೀನಿಯಸ್ ಮುತ್ತನಾಗಿ ಅಭಿನಯಿಸಿದ್ದೇನೆಂದು ಅಭಿಪ್ರಾಯ ಹಂಚಿಕೊಂಡರು.

ನನಗೆ ಹಲವು ವರ್ಷಗಳಿಂದ ನಿರ್ದೇಶನ ಮಾಡುವಂತೆ ಎಲ್ಲರೂ ಹೇಳುತ್ತಿದ್ದರು. ಆದರೆ ಆಗಿರಲಿಲ್ಲ. ಲತಾ ಜೈ ಪ್ರಕಾಶ್ ಅವರು ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಬೇಕು ಎಂದುಕೊಂಡಿದ್ದರು. ಆ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಎಂದರು. ಅವರ ಒತ್ತಾಯಕ್ಕೆ ಮಣಿದು ನನ್ನ ಸ್ನೇಹಿತರ ತಂಡದೊಂದಿಗೆ ಸೇರಿ ಈ ಚಿತ್ರದ ಕಥೆ ಸಿದ್ಧಪಡಿಸಿದೆ ಎಂದ ನಾಗಿಣಿ ಭರಣ ತಿಳಿಸಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹೆಚ್ಚಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ. ಮಾಸ್ಟರ್ ಶ್ರೇಯಸ್, ವಿಜಯ ರಾಘವೇಂದ್ರ, ಟಿ.ಎಸ್.ನಾಗಾಭರಣ, ಗಿರಿಜಾ ಲೋಕೇಶ್, ಸುಂದರರಾಜ್, ಪನ್ನಗಾಭರಣ ಸೇರಿದಂತೆ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ ವಿದೇಶಗಳಲ್ಲಿ ನಮ್ಮ ಚಿತ್ರದ ಪ್ರದರ್ಶನವಾಗಿದೆ. ಸಿನಿಮಾ ವೀಕ್ಷಿಸಿದವರು ಮೆಚ್ಚುಗೆಯ ಮಾತುಗಳಾಡಿದ್ದಾರೆಂದು ತಿಳಿಸಿದರು. ನಟ ವಿಜಯ ರಾಘವೇಂದ್ರ ಮಾತನಾಡಿ, ನಾನು ಯಾವಾಗಲೂ ನಾಗಾಭರಣ್ ಸರ್ ಅವರಿಗೆ ಆಭಾರಿ. ಏಕೆಂದರೆ ನನ್ನನ್ನು ಎಲ್ಲರೂ ವಿಜಯ ರಾಘವೇಂದ್ರ ಅನ್ನುವುದಕ್ಕಿಂತ ಚಿನ್ನಾರಿಮುತ್ತ ಎನ್ನುವುದೇ ಹೆಚ್ಚು. ಅಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದವರು ನಾಗಾಭರಣ್ ಸರ್. ಈಗ ನಾಗಿಣಿ ಭರಣ ಅವರ ಮೊದಲ ನಿರ್ದೇಶನದ ಸಿನಿಮಾದಲ್ಲೂ ನಾನು ನಟಿಸಿರುವುದು ಖುಷಿಯಾಗಿದೆ, ಹೆಮ್ಮೆ ಇದೆ ಎಂದು ತಿಳಿಸಿದರು.

ನಿರ್ಮಾಪಕಿ ಲತಾ ಜೈಪ್ರಕಾಶ್ ಮಾತನಾಡಿ, ನಾಗಿಣಿ ಭರಣ ಅವರು ನನಗೆ ಹತ್ತು ವರ್ಷಗಳಿಂದ ಪರಿಚಯ. ನನ್ನ ಮಗನಿಗಾಗಿ ಒಂದೊಳ್ಳೆ ಕಥೆ ಮಾಡಿ, ನೀವೇ ನಿರ್ದೇಶನ ಮಾಡಬೇಕೆಂದು ಅವರ ಬಳಿ ಕೇಳಿಕೊಂಡೆ. ಅವರು ಒಳ್ಳೆಯ ಕಥೆ ಸಿದ್ಧ ಮಾಡಿ, ಬಳಿಕ ನನಗೆ ಕಥೆ ಹೇಳಿದರು. ನಂತರ 'ಜೀನಿಯಸ್ ಮುತ್ತ' ಚಿತ್ರ ಆರಂಭವಾಯಿತು. ಸದ್ಯ ಬಿಡುಗಡೆ ಹಂತ ತಲುಪಿದ್ದು, ಖುಷಿಯಾಗಿದೆ ಎಂದು ಹೇಳಿದರು. ಶೀಘ್ರವೇ ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!

ನೇಪಾಳದಲ್ಲಿ ಭೀಕರ ಪ್ರವಾಹ: ಬಿಹಾರ, ಉತ್ತರ ಪ್ರದೇಶದಲ್ಲಿ NDRF ಹೈ ಅಲರ್ಟ್; ನದಿ ಪಾತ್ರದಲ್ಲಿ ಕಟ್ಟೆಚ್ಚರ